ಬೆಂಗಳೂರು: ರಾಜ್ಯದಲ್ಲಿ ಹೊಸ ವರ್ಷಾಚರಣೆ ಜೋರಾಗಿಯೇ ನಡೆದಿದೆ. ವರ್ಷಾಂತ್ಯದ ದಿನ ಭಾರಿ ಪ್ರಯಾಣದಲ್ಲಿ ಮದ್ಯ ದ ಹೊಳೆಯೇ ಹರಿದಿದೆ. ಈ ಮೂಲಕ ಮದ್ಯಪ್ರಿಯರು ಅಬಕಾರಿ ಇಲಾಖೆಗೆ ಆದಾಯ ಗಿಫ್ಟ್ ನೀಡಿದ್ದು,ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ಬಾರಿ ಶೇ 15 ಪರ್ಸೆಂಟ್ ರಷ್ಟು ಹೆಚ್ಚುವರಿ ಆದಾಯ ತಂದುಕೊಟ್ಟಿದ್ದಾರೆ.ಮದ್ಯ ಸೇವಿಸುವವರಲ್ಲಿ ಸಿಟಿ ಮಂದಿ, ಈ ಬಾರಿ ಮುನ್ನಡೆ ಕಾಯ್ದುಕೊಂಡಿದ್ದು, ಹೆಚ್ಚುವರಿ ಮದ್ಯ ಮಾರಾಟವಾಗಿದೆ ಅನ್ನೋ ಮಾಹಿತಿ ಅಬಕಾರಿ ಇಲಾಖೆ ಬಿಡುಗಡೆ ಮಾಡಿದೆ.
2023ಕ್ಕೆ ಬಾಯ್ ಹೇಳಿ.. 2024ಕ್ಕೆ ಕಾಲಿಟ್ಟಾಗಿದೆ.. ಹೊಸ ವರ್ಷವನ್ನು ಹೊಸ ಹುರುಪಿನೊಂದಿಗೆ ಜನ ಸ್ವಾಗತಿಸಿದರು. ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ನ್ಯೂ ಇಯರ್ ಸೆಲೆಬ್ರೆಷನ್ ಸದ್ದು ಮುಗಿಲು ಮುಟ್ಟಿತ್ತು. ರಾಜ್ಯದೆಲ್ಲೆಡೆ ಎಲ್ಲೆಲ್ಲೂ ಹೊಸ ವರ್ಷದ ಸಂಭ್ರಮ ಕಳೆಗಟ್ಟಿತ್ತು. ಆದ್ರೆ ಈ ಬಾರಿ ನ್ಯೂ ಇಯರ್ ವೇಳೆ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮದ್ಯದ ಹೊಳೆಯೇ ಹರಿದಿದೆ.
ಹೌದು.. ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಂಡಿರುವ ಮದ್ಯಪ್ರಿಯರು ರಾಜ್ಯ ಸರ್ಕಾರದ ಬೊಕ್ಕಸಕ್ಕೂ ಭರ್ಜರಿ ಕಿಕ್ ಕೊಟ್ಟಿದ್ದಾರೆ. 2023ರ ಕೊನೇ ದಿನ ಡಿಸೆಂಬರ್ 31ರಂದು ರಾಜ್ಯಾದ್ಯಂತ ಮದ್ಯ ಮಾರಾಟದಿಂದ ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 193 ಕೋಟಿ ರೂಪಾಯಿ ಆದಾಯ ಹರಿದು ಬಂದಿದೆ.ಮಾಮೂಲಿ ದಿನದಲ್ಲಿ ಒಂದು ದಿನಕ್ಕೆ ರಾಜ್ಯದ ಅಬಕಾರಿ ಇಲಾಖೆಗೆ ಸುಮಾರು 90 ಕೋಟಿ ಆದಾಯ ಬರುತ್ತಾ ಇತ್ತು. ಆದರೆ ನ್ಯೂ ಇಯರ್ ಸೆಲೆಬ್ರೇಷನ್ ಹಿನ್ನೆಲೆಯಲ್ಲಿ ಒಂದೇ ದಿನದಲ್ಲಿ ಅಬಕಾರಿ ಇಲಾಖೆ ಆದಾಯ ದುಪ್ಪಟ್ಟು ಏರಿಕೆ ಆಯ್ತು
ಹೊಸ ವರ್ಷಾಚರಣೆ ದಿನ ಬಾರ್, ರೆಸ್ಟೋರೆಂಟ್, ಕ್ಲಬ್ ಹಾಗೂ ಪಾರ್ಟಿಗಳಲ್ಲಿ ಮದ್ಯದ ಹೊಳೆ ಹರಿದಿದೆ. ಡಿಸೆಂಬರ್ 31 ರ ಒಂದೇ ದಿನ ಬರೋಬ್ಬರಿ 193 ಕೋಟಿ ಆದಾಯ,ಅಬಕಾರಿ ಇಲಾಖೆಗೆ ಬಂದಿದೆ. ಹಿಂದಿನ ವರ್ಷ ಇದೇ ಅವಧಿಗೆ ಹೋಲಿಕೆ ಮಾಡಿದರೆ ಶೇ 15 ಪರ್ಸೆಂಟ್ ಹೆಚ್ಚು ಆದಾಯ ಬಂದಿದೆ. . ಮದ್ಯ ಸೇವಿಸುವವರಲ್ಲಿ ಬೆಂಗಳೂರಿಗರೇ ಮುನ್ನಡೆ ಕಾಯ್ದುಕೊಂಡಿದ್ದು, ಬೆಂಗಳೂರು ನಗರದಲ್ಲಿ ಶೇ.15ರಷ್ಟು ಹೆಚ್ಚುವರಿ ಮದ್ಯ ಮಾರಾಟವಾಗಿದೆ. ಕಳೆದ ವರ್ಷ ಡಿಸೆಂಬರ್ 30 ರಂದು ಮೂರು ಲಕ್ಷ ಬ್ಯಾಕ್ಸ್ ಎಂಎಸ್ಎಲ್ ಹಾಗೂ ಡಿಸೆಂಬರ್ 31 ರಂದು 2.60 ಲಕ್ಷ ಎಂಎಸ್ಎಲ್ ಬ್ಯಾಕ್ಸ್ ಸೇಲ್ ಆಗಿತ್ತು. ಆದ್ರೆ ಈ ಬಾರಿಯ ಡಿಸೆಂಬರ್ 30-31 ರಂದು 6.40 ಲಕ್ಷ ಎಂಎಸ್ಎಲ್ ಬ್ಯಾಕ್ಸ್ ಮಾರಾಟವಾಗಿದೆ. ಇಯರ್ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಿಯರ್ 14.೦7 ಲಕ್ಷ ಬಾಕ್ಸ್ ಸೇಲ್ ಮಾಡಲಾಗಿದೆ. ಬಿಯರ್ ಮಾರಾಟದಿಂದಲೇ ಸುಮಾರು 170 ಕೋಟಿರೂಪಾಯಿ ಆದಾಯ ಸರ್ಕಾರದ ಬೊಕ್ಕಸಕ್ಕೆ ಬಂದಿದೆ.
ಇನ್ನು ನ್ಯೂ ಇಯರ್ ಸೆಲೆಬ್ರೇಷನ್ ಕೇವಲ ಅಬಕಾರಿ ಇಲಾಖೆಗೆ ಮಾತ್ರವಲ್ಲದೆ ನಮ್ಮ ಮೆಟ್ರೋಗೂ ಭಾರಿ ಆದಾಯ ತಂದುಕೊಟ್ಟಿದೆ. ಕಳೆದ ರಾತ್ರಿ ಮೆಟ್ರೋ ಓಡಾಟ ರಾತ್ರಿ 2-15 ವರಿಗೆ ಇದ್ದ ಕಾರಣ 6 ಲಕ್ಷ 26 ಪ್ರಯಾಣಿಕರು ಮೆಟ್ರೋದಲ್ಲಿ ಓಡಾಟ ಮಾಡಿದ್ದಾರೆ. ಇದರಿಂದ ಮೆಟ್ರೋಗೆ ಹೆಚ್ಚುವರಿಯಾಗಿ ಒಂದೂವರೆ ಕೋಟಿ ಕಾರ್ಯಾಚರಣೆ ಆದಾಯ ಬಂದಿದೆ.
ಫ್ಲೋ.. ಒಟ್ಟಿನಲ್ಲಿ ಡಿಸೆಂಬರ್ 31 ರಂದು ಮದ್ಯ ಮಾರಾಟ ಖರೀದಿ ಹೆಚ್ಚಾಗಿಯೇ ನಡೆದಿದ್ದು, ಇದರಿಂದ ಅಬಕಾರಿ ಇಲಾಖೆ ಖಜಾನೆ ತುಂಬಿದ್ರೆ ಇತ್ತ ಮೆಟ್ರೋ ಸೇವೆ ವಿಸ್ತಾರಣೆಯಿಂದ ಬಿಎಂಆರ್ಸಿಎಲ್ ಖಜಾನೆಯೂ ತುಂಬಿದೆ