ಬೀಜಿಂಗ್: ಚೀನಾದ ಗನ್ಸು-ಕಿಂಗ್ಹೈ (China’s Gansu) ಗಡಿ ಪ್ರದೇಶದಲ್ಲಿ ಭೀಕರ ಭೂಕಂಪ (Earthquake) ಸಂಭವಿಸಿದ್ದು, 111 ಮಂದಿ ಸಾವನ್ನಪ್ಪಿದ್ದಾರೆ. 230ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರವು (EMSC) ಭೂಕಂಪದ ತೀವ್ರತೆಯನ್ನು 6.1 ಎಂದು ಗುರುತಿಸಿದೆ. ಆದ್ರೆ ಚೀನಾದ ಸರ್ಕಾರಿ ಮಾಧ್ಯಮ ಭೂಕಂಪದ ತೀವ್ರತೆ 6.2 ಎಂದು ತಿಳಿಸಿದೆ. ಭೂಕಂಪದ ಕೇಂದ್ರ ಬಿಂದು ಪಶ್ಚಿಮ-ನೈಋತ್ಯಕ್ಕೆ 102 ಕಿಮೀ ದೂರದಲ್ಲಿರುವ ಗನ್ಸು (Gansu) ಪ್ರಾಂತ್ಯದ ರಾಜಧಾನಿ ಲಾನ್ಝೌ ಬಳಿ 35 ಕಿಮೀ ಆಳದಲ್ಲಿ ಪತ್ತೆಯಾಗಿದೆ.
Aishwarya Rai: ಗಂಡನ ಮನೆಯಿಂದ ಹೊರಬಂದ ಐಶ್ವರ್ಯಾ ರೈ..! ಬಿಗ್’ಬಿ ಮನೆಯಲ್ಲಿ ಅತ್ತೆ-ಸೊಸೆಯ ಬಿರುಕು
ಕ್ವಿಂಗ್ಹೈ ಪ್ರಾಂತ್ಯದ ಹಲವು ಭಾಗಗಳಲ್ಲಿಯೂ ಭೂಮಿ ಕಂಪಿಸಿದ ಅನುಭವವಾಗಿದೆ. ವಿಪತ್ತು ನಿರ್ವಹಣೆ, ಕಡಿತ ಮತ್ತು ಪರಿಹಾರಕ್ಕಾಗಿ ಚೀನಾದ ರಾಷ್ಟ್ರೀಯ ಆಯೋಗ ಮತ್ತು ತುರ್ತು ನಿರ್ವಹಣೆಯ ಸಚಿವಾಲಯವು 4ನೇ ಹಂತದ ಪರಿಹಾರ, ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ.