ಭಾರತ ಮತ್ತು ಶ್ರೀಲಂಕಾ ನಡುವಿನ ಟಿ20 ಸರಣಿ ಜುಲೈ 27 ರಿಂದ ಆರಂಭವಾಗಲಿದೆ. ಇದರ ಜೊತೆ ಟೀಂ ಇಂಡಿಯಾದ ಹೊಸ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಅಧಿಕಾರಾ ಸಹ ಆರಂಭವಾಗಲಿದೆ. ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿದ್ದು ಈ ನಡುವೆ ಶ್ರೀಲಂಕಾ ವಿರುದ್ಧದ ಟಿ20 ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾದ ಜೆರ್ಸಿಯಲ್ಲಿ ಮಹತ್ತರ ಬದಲಾವಣೆಯಾಗಿದೆ.
ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ಸಿ ಕಳೆದುಕೊಂಡ ಬಗ್ಗೆ ಆಶಿಶ್ ನೆಹ್ರಾ ಹೇಳಿದ್ದೇನು?!
ವಿಶೇಷ ಜೆರ್ಸಿ ಧರಿಸಿ ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ಪ್ರವೇಶಿಸಲಿದೆ. ವಾಸ್ತವವಾಗಿ, ಈ ಜೆರ್ಸಿಯಲ್ಲಿ ಎರಡು ಸ್ಟಾರ್ಗಳನ್ನು ಮುದ್ರಿಸಲಾಗಿದೆ. ಟೀಮ್ ಇಂಡಿಯಾದ ಜೆರ್ಸಿಯಲ್ಲಿರುವ ಈ ಎರಡು ಸ್ಟಾರ್ಗಳು ಟೀಂ ಇಂಡಿಯಾ ಎರಡು ಬಾರಿ ಟಿ20 ವಿಶ್ವ ಚಾಂಪಿಯನ್ ಆಗಿರುವುದನ್ನು ಸಂಕೇತಿಸುತ್ತದೆ.
ಟಿ20 ವಿಶ್ವಕಪ್ 2024 ರ ಮೊದಲು, ಟೀಂ ಇಂಡಿಯಾದ ಜೆರ್ಸಿಯ ಮೇಲೆ ಕೇವಲ ಒಂದು ಸ್ಟಾರ್ ಮಾತ್ರ ಇತ್ತು. ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸುವ ಮೂಲಕ ಟೀಂ ಇಂಡಿಯಾ ಎರಡನೇ ಬಾರಿಗೆ ವಿಶ್ವ ಚಾಂಪಿಯನ್ ಆಗಿತ್ತು. ಹೀಗಾಗಿ ತಂಡದ ಜರ್ಸಿಗೆ ಮತ್ತೊಂದು ಸ್ಟಾರ್ ಸೇರ್ಪಡೆಗೊಂಡಿದೆ.
ಇದೀಗ ಟೀಂ ಇಂಡಿಯಾದ ಕಮಾಂಡ್ ಸೂರ್ಯಕುಮಾರ್ ಯಾದವ್ ಕೈಯಲ್ಲಿದೆ. ಶುಭ್ಮನ್ ಗಿಲ್ ಅವರನ್ನು ಉಪನಾಯಕರನ್ನಾಗಿ ಮಾಡಲಾಗಿದೆ. ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟಿ20 ಪಂದ್ಯ ಜುಲೈ 27 ರಂದು ನಡೆಯಲಿದೆ. ಎರಡನೇ ಟಿ20 ಪಂದ್ಯ ಜುಲೈ 28 ರಂದು ಮತ್ತು ಮೂರನೇ ಟಿ20 ಪಂದ್ಯ ಜುಲೈ 29 ರಂದು ನಡೆಯಲಿದೆ. ಎಲ್ಲಾ ಮೂರು ಪಂದ್ಯಗಳು ಪಲ್ಲೆಕೆಲೆಯಲ್ಲಿ ನಡೆಯಲಿವೆ. ಇದಾದ ಬಳಿಕ ಕೊಲಂಬೊದಲ್ಲಿ ಏಕದಿನ ಸರಣಿ ನಡೆಯಲಿದ್ದು, ಮೊದಲ ಪಂದ್ಯ ಆಗಸ್ಟ್ 2ರಿಂದ ನಡೆಯಲಿದೆ.