ಕೋಲಾರ:- ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಚೆಕ್ಪೋಸ್ಟ್ ನಲ್ಲಿ ಬೃಹತ್ ಮಟ್ಟದ ಸ್ಪೋಟಕಗಳು ಪತ್ತೆ ಆಗಿದ್ದು, 1200 ಜಿಲೆಟಿನ್ ಕಡ್ಡಿ ವಶಕ್ಕೆ ಪಡೆಯಲಾಗಿದೆ.
1200 ಜಿಲೆಟಿನ್ ಕಡ್ಡಿ, 7 ಬಾಕ್ಸ್ ವೈಯರ್, 6 ಡಿಟೋನೇಟರ್ ಆರೋಪುಗಳು ಸಾಗಿಸುತ್ತಿದ್ದರು. ಈ ವೇಳೆ ಪೊಲೀಸರು ಅನುಮಾನಗೊಂಡು ತಪಾಸಣೆ ನಡೆಸಿದಾಗ, ಭಾರಿ ಪ್ರಮಾಣದ ಸ್ಪೋಟಕಗಳು ಪತ್ತೆಯಾಗಿವೆ. ಇನ್ನು ಸ್ಫೋಟಕ ಸಾಗಿಸುತ್ತಿದ್ದ ಜಾಕೀರ್ ಹುಸೇನ್ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮತ್ತು ಕಾರಿನಲ್ಲಿದ್ದ ಮತ್ತೊಬ್ಬ ಪರಾರಿಯಗಿದ್ದಾರೆ. ನಂಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇಷ್ಟೊಂದು ಪ್ರಮಾಣದ ಸ್ಫೋಟಕಗಳು ಪತ್ತೆಯಾಗಿದ್ದು, ಪೊಲೀಸರಲ್ಲಿ ಅನುಮಾನ ಹುಟ್ಟು ಹಾಕಿದೆ. ಸದ್ಯ ಆರೋಪಿಗಳು ಯಾವ ಕಾರಣಕ್ಕೆ ಸ್ಫೋಟಕ ಸಾಗಿಸುತ್ತಿದ್ದರು ಎಂಬುವುದು ಪೊಲೀಸರ ತನಿಖೆಯಲ್ಲಿ ತಿಳಿದು ಬರಲಿದೆ.