ಹುಬ್ಬಳ್ಳಿ: ಬಟ್ಟೆ ಖರೀದಿಸುವ ವೇಳೆ ವಿದ್ಯಾರ್ಥಿನಿಯೊಬ್ಬರ ಬ್ಯಾಗ್ನಲ್ಲಿದ್ದ 1.10 ಲಕ್ಷ ರೂ. ಮೌಲ್ಯದ ಆಭರಣ ಹಾಗೂ 20 ಸಾವಿರ ರೂ. ನಗದು ಕಳ್ಳತನವಾದ ಘಟನೆ ನಗರದ ಗೌಳಿಗಲ್ಲಿ ಕ್ರಾಸ್ ಬಳಿ ನಡೆದಿದೆ.
ಆನಂದ ನಗರದ ವಿದ್ಯಾರ್ಥಿನಿ ತನ್ನ ಸ್ನೇಹಿತೆಯೊಂದಿಗೆ ಮಾರುಕಟ್ಟೆಗೆ ಬಂದಿದ್ದರು. ಬಟ್ಟೆ ಖರೀದಿಸಲು ಮುಂದಾದಾಗ ಕಳ್ಳರು ಬ್ಯಾಗ್ನಲ್ಲಿದ್ದ 16.71 ಗ್ರಾಂ ಬಂಗಾರ, 40 ಗ್ರಾಂ ಬೆಳ್ಳಿ, 20 ಸಾವಿರ ರೂ. ನಗದು ಕಳ್ಳತನ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.