ಹುಬ್ಬಳ್ಳಿ: ರೆಸ್ಟೋರೆಂಟ್ ರಿವೀವ್ ಮಾಡಿದರೆ ಹಣ ಗಳಿಸಬಹುದೆಂದು ನಂಬಿಸಿದ ಅಪರಿಚಿತರು, ಧಾರವಾಡ ಸತ್ತೂರಿನ ವೈದ್ಯೆಯೊಬ್ಬರಿಂದ 5.91 ಲಕ್ಷ ರೂ. ವರ್ಗಾಯಿಸಿಕೊಡು ವಂಚಿಸಿದ್ದಾರೆ.
ವೈದ್ಯೆಯ ವಾಟ್ಸ್ ಆ್ಯಪ್ ನಂಬರ್ಗೆ ಸಂಪರ್ಕಿಸಿದ ವಂಚಕರು, ಮೊದಲು ಸ್ವಲ್ಪ ಹಣ ಕೊಟ್ಟು ನಂಬಿಸಿದ್ದಾರೆ. ನಂತರ ಟೆಲಿಗ್ರಾಂ ಗ್ರೂಪ್ಗೆ ಸೇರಿಸಿ ಪ್ರಿಪೇಯ್ಡಿ ಟಾಸ್ಕ್ ಕೊಡುವುದಾಗಿ ನಂಬಿಸಿ ಕಮಿಷನ್ ಕೊಡುವ ಭರವಸೆ ನೀಡಿದ್ದಾರೆ. ವೈದ್ಯೆಯ ವಿವಿಧ ಬ್ಯಾಂಕ್ ಖಾತೆಗಳಿಂದ 5,91,200 ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಬ್ಬಳ್ಳಿ: ಹಣದಾಸೆಗೆ 5.91 ಲಕ್ಷ ರೂ. ಕಳೆದುಕೊಂಡ ವೈದ್ಯೆ
By AIN Author