ಭಾರತದ ಅತಿ ದೊಡ್ಡ ವಾಣಿಜ್ಯ ವಾಹನಗಳ ತಯಾರಿಕಾ ಸಂಸ್ಥೆಯಾಗಿರುವ ಟಾಟಾ ಮೋಟರ್ಸ್, ಹೊಚ್ಚ ಹೊಸದಾದ ಇಂಟ್ರಾ ವಿ ೭೦ ಇಂಟ್ರಾ ವಿ ೨೦ ಗೋಲ್ಡ್ ಏಸ್ HT+ ವಾಣಿಜ್ಯ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಈ ಮೂಲಕ ಮೊದಲ ಮತ್ತು ಕಟ್ಟ ಕಡೆಯ ಮೈಲಿನ ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡುವ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ.
ಈ ಹೊಸ ವಾಹನಗಳು ಹೆಚ್ಚಿನ ಪೇಲೋಡ್ ಗಳನ್ನು ದೂರದವರೆಗೆ ಕೊಂಡೊಯ್ಯಲು ಸಹಕಾರಿಯಾಗಿವೆ. ಇದರೊಂದಿಗೆ ಅತ್ಯುತ್ತಮ ಆರ್ಥಿಕ ಲಾಭವನ್ನು ತಂದು ಕೊಡುತ್ತವೆ. ಅತ್ಯುತ್ಕೃಷ್ಟವಾದ ದರ್ಜೆಯ ವೈಶಿಷ್ಟ್ಯತೆಗಳನ್ನು ಹೊಂದಿರುವ ಈ ವಾಹನಗಳು ವಿವಿಧ ಬಗೆಯ ಸರಕು ಸಾಗಣೆಗೆ ಬಳಸಬಹುದಾಗಿದೆ.ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.ಈ ವಾಹನಗಳ ಬಿಡುಗಡೆ ಬಗ್ಗೆ ಮಾತನಾಡಿದ ಟಾಟಾ ಮೋಟರ್ಸ್ ನ ಕಾರ್ಯಕಾರಿ ನಿರ್ದೇಶಕ ಗಿರೀಶ್ ವಾಘ್ ಅವರು, “ವಿವಿಧ ರೀತಿಯ ಅಪ್ಲಿಕೇಶನ್ ಗಳಿಗೆ ಗರಿಷ್ಠ ಮಟ್ಟದ ಪರಿಹಾರಗಳನ್ನು ನೀಡುವುದರ ಜೊತೆಗೆ ನಮ್ಮ ಸಣ್ಣ ವಾಣಿಜ್ಯ ವಾಹನಗಳು ಮತ್ತು ಪಿಕಪ್ ಗಳು ನಮ್ಮ ಗ್ರಾಹಕರ ಜೀವನೋಪಾಯಗಳು ಮತ್ತು ಜೀವನ ಮಟ್ಟವನ್ನು ಸುಧಾರಣೆ ಮಾಡುವಲ್ಲಿ ಸಹಕಾರಿಯಾಗಿವೆ.
ನಿಖರವಾದ ಬಳಕೆದಾರರ ದೊಡ್ಡ ಮಟ್ಟದ ಬೇಡಿಕೆ ಮತ್ತು ನಿರ್ದಿಷ್ಟ ಇನ್ ಪುಟ್ ಗಳಿಗೆ ಅನುಗುಣವಾಗಿ ಈ ವಾಹನಗಳನ್ನು ಅಭಿವೃದ್ಧಿಪಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಈ ವಾಹನಗಳನ್ನು ಇಂಧನ ಕ್ಷಮತೆಯನ್ನು ಗರಿಷ್ಠಗೊಳಿಸುವುದು ಮತ್ತು ಅತ್ಯಧಿಕ ಪೇಲೋಡ್ ಅನ್ನು ದೂರದವರೆಗೆ ಕೊಂಡೊಯ್ಯಲು ಸಾಧ್ಯವಾಗುವ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಕ್ಷಿಪ್ರಗತಿಯ ನಗರೀಕರಣ, ಪ್ರವರ್ಧಮಾನಕ್ಕೆ ಬರುತ್ತಿರುವ ಇ-ಕಾಮರ್ಸ್, ಬಳಕೆಯಲ್ಲಿನ ಹೆಚ್ಚಳ, ಹಬ್ ಮತ್ತು ಸ್ಪೋಕ್ ಮಾದರಿಯ ಏರಿಕೆ, ಲಾಜಿಸ್ಟಿಕ್ಸ್ ನಿರ್ವಹಣೆಯಲ್ಲಿ ಪರಿಣಾಮಕಾರಿ ಕೊನೆಯ ಮತ್ತು ಮೊದಲ ಮೈಲಿನ ಸಾರಿಗೆಯ ಮಹತ್ವವನ್ನು ಗಮನದಲ್ಲಿಟ್ಟುಗೊಂಡು ಈ ವಾಹನಗಳನ್ನು ಬಿಡುಗಡೆ ಮಾಡಲಾಗಿದೆ.
ಈ ಮೂಲಕ ಭಾರತದ ಬೆಳೆಯುತ್ತಿರುವ ಆರ್ಥಿಕತೆಯ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ ಎಂದರು.
ದೃಢವಾದ ಮತ್ತು ವಿಶ್ವಾಸಾರ್ಹವಾದ ವಾಹನಗಳ ಜೊತೆಗೆ ಟಾಟಾ ಮೋಟರ್ಸ್ ಗ್ರಾಹಕರು ಹಲವಾರು ಪ್ರಯೋಜನಗಳನ್ನು ಪಡೆಯಲಿದ್ದಾರೆ. ಪ್ರಮುಖವಾಗಿ ಮೌಲ್ಯವರ್ಧಿತ ಸೇವೆಗಳ ವ್ಯಾಪಕ ಶ್ರೇಣಿಯೊಂದಿಗೆ ಸಂಪೂರ್ಣವಾದ ಆನಂದದ ಅನುಭವವನ್ನು ಹೊಂದಲಿದ್ದಾರೆ ಎಂದು ಹೇಳಿದರು.