ಹುಬ್ಬಳ್ಳಿ: ಅಮೆಜಾನ್ ಇಂಡಿಯಾ ಭಾರತದಲ್ಲಿನ ಸಣ್ಣ ವ್ಯಾಪಾರಿಗಳು ತಮ್ಮ ಡಿಜಿಟಲ್ ಮಾರುಕಟ್ಟೆ ಸ್ಥಳಗಳಲ್ಲಿ ಮಾರಾಟ ಮಾಡುವುದು ಎಷ್ಟು ಸರಳ ಮತ್ತು ಎಷ್ಟು ಪ್ರಯೋಜನಕಾರಿ ಕುರಿತು ಅರಿವು ಮೂಡಿಸಲು ದಿಕೋಗೆ ತೋಬಿಕೋಗೆ (‘ನೀವು ಕಾಣಿಸಿಕೊಂಡರೆ ನೀವು ಮಾರಾಟ ಮಾಡುವಿರಿ’ ಎಂಬರ್ಥ) ಎಂಬ ಹೊಸ ಜಾಹೀರಾತು ಅಭಿಯಾನ ಪ್ರಾರಂಭಿಸಿದೆ.
ಈ ಕುರಿತು ನಗರದಲ್ಲಿಂದು ಮಾಹಿತಿ ನೀಡಿದ ಕಂಪನಿಯ ಮ್ಯಾನೇಜರ್ಈ ಪ್ರಚಾರ ಅಭಿಯಾನವು ಮೂರು ಸೃಜನಶೀಲ ಮತ್ತು ಹಾಸ್ಯಮಯ ಜಾಹೀರಾತುಗಳನ್ನು ಒಳಗೊಂಡಿದ್ದು,
ಪ್ರತಿಯೊಂದು ಜಾಹೀರಾತು ಕೂಡ ವಿಭಿನ್ನ ಸನ್ನಿವೇಶಗಳನ್ನು ಹೊಂದಿದೆ. ಈ ಅಭಿಯಾನದಲ್ಲಿ ಮಾರಾಟಗಾರರು ತಮ್ಮ ಉತ್ಪನ್ನಗಳನ್ನು ಪ್ರಚಾರ ಮಾಡಲು ಮತ್ತು ಮಾರಾಟ ಮಾಡಲು ಅಸಾಂಪ್ರದಾಯಿಕ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ವೀಡಿಯೋಗಳು ಮಾರಾಟಗಾರರಿಗೆ ಅಮೆಜಾನ್ ನ ಮಾರುಕಟ್ಟೆ ಸ್ಥಳಗಳ ಪ್ರಯೋಜನಗಳ ಕುರಿತು ಅರಿವು ಮೂಡಿಸಲಿವೆ.
ಉದಾಹರಣೆಗೆ ವಿಶಾಲವಾದ ಗ್ರಾಹಕರ ನೆಲೆ, ಭಾರತದಾದ್ಯಂತ ಅಮೆಜಾನ್ ಸೇವೆ ಒದಗಿಸುವ ಪಿನ್ ಕೋಡ್ ಗಳ ಶೇ.100 ರಷ್ಟು ಜಾಗಗಳಲ್ಲಿ ಮಾರಾಟ ಅವಕಾಶ ಮತ್ತು 18ಕ್ಕೂ ಹೆಚ್ಚು ಜಾಗತಿಕ ಮಾರುಕಟ್ಟೆ ಸ್ಥಳಗಳಲ್ಲಿ ಮಾರಾಟ ಮಾಡುವ ಅವಕಾಶ ಹೀಗೆ ಅಮೆಜಾನ್ ನ ಮಾರುಕಟ್ಟೆ ಸ್ಥಳಗಳು ಮಾರಾಟಗಾರರಿಗೆ ಒದಗಿಸುವ ಅನೇಕ ಪ್ರಯೋಜನಗಳನ್ನು ಈ ವಿಡಿಯೋ ಮುಖಾಂತರ ತಿಳಿಸಲಾಗುತ್ತದೆ. ಆನ್ ಲೈನ್ ಮಾರಾಟವನ್ನು ಸುಲಭವಾಗಿ ಲಭ್ಯವಾಗಿಸುವ ಮತ್ತು ಪರಿಣಾಮಕಾರಿಯಾಗಿ ಮಾಡುವ ಮೂಲಕ ಎಲ್ಲಾ ಗಾತ್ರದ ಉದ್ಯಮಗಳಿಗೆ ಬಲ ತುಂಬುವ ಅಮೆಜಾನ್ ನ ಬದ್ಧತೆಯನ್ನು ಅಭಿಯಾನವು ಸಾರುತ್ತದೆ ಎಂದರು