ಹುಬ್ಬಳ್ಳಿ: ಧಾರವಾಡದ ಭಾರತಿನಗರದಲ್ಲಿರುವ ಗುರುದೇವ ಪದವಿಪೂರ್ವ ಸಮೂಹ ಸಂಸ್ಥೆಯ ವತಿಯಿಂದ ಜನವರಿ 5ರಂದು ಬೆಳಗ್ಗೆ 10.30ಕ್ಕೆ ಎಸ್ಎಸ್ಎಲ್ಸಿ (ಸ್ಟೇಟ್, ಸಿಬಿಎಸ್ಇ, ಐಸಿಎಸ್ಇ) ವಿದ್ಯಾರ್ಥಿಗಳಿಗಾಗಿ 2024ರ ಗುರುದೇವ ಪ್ರತಿಭಾನ್ವೇಷಣೆ ಪರೀಕ್ಷೆ ಆಯೋಜಿಸಲಾಗಿದೆ.
ಹೆಚ್ಚು ಅಂಕ ಪಡೆದು ವಿಜೇತರಾದ ವಿದ್ಯಾರ್ಥಿಗಳಿಗೆ ಒಟ್ಟು 32 ಲ ರೂ. ಮೌಲ್ಯದ ಶಿಷ್ಯವೇತನ ನೀಡಲಾಗುತ್ತದೆ.
ಪ್ರವೇಶ ಪರೀಕ್ಷೆಯನ್ನು ರಾಜ್ಯದ 4 ಜಿಲ್ಲಾ ಕೇಂದ್ರಗಳಾದ ಧಾರವಾಡ, ಗದಗ, ಬಾಗಲಕೋಟೆ ಮತ್ತು ವಿಜಯಪುರದಲ್ಲಿ ನಡೆಸಲಾಗುವುದು. ಈಗಾಗಲೇ ರಾಜ್ಯಾದ್ಯಂತ ಸುಮಾರು 10 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಿಕೊಂಡಿದ್ದಾರೆ.
ವಿಜ್ಞಾನ, ಗಣಿತ, ಇಂಗ್ಲಿಷ್ ವಿಷಯಗಳಿಗೆ ಸಂಬಂಧಿಸಿದಂತೆ ಎಸ್ಎಸ್ಎಲ್ಸಿಪಠ್ಯಕ್ರಮಕ್ಕನುಗುಣವಾಗಿ ಪರೀಕ್ಷೆ ಆಯೋಜಿಸಿದ್ದು, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಗಣಿತ ಹಾಗೂ ಇಂಗ್ಲಿಷ ವಿಷಯಗಳಿಗೆ ತಲಾ 12 ಪ್ರಶ್ನೆಗಳ ಒಟ್ಟು 60 ಅಂಕಗಳ ಪ್ರಶ್ನೆಪತ್ರಿಕೆ ನೀಡಲಾಗುತ್ತದೆ. ತಪ್ಪಾದ ಉತ್ತರಗಳಿಗೆ ಯಾವುದೇ ಋಣಾತ್ಮಕ ಅಂಕಗಳ ಕಡಿತ ಇರುವುದಿಲ್ಲ.
ಪ್ರತಿ ಜಿಲ್ಲಾ ಕೇಂದ್ರದಿಂದ ಹೆಚ್ಚು ಅಂಕ ಪಡೆದ 5 ವಿಜೆತ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆಯೊಂದಿಗೆ ಉಚಿತ ಪ್ರವೇಶಾತಿ ನೀಡಲಾಗುವುದು.
ರಾಜ್ಯದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಈ ಅವಕಾಶ ಸದುಪಯೋಗಪಡಿಸಿಕೊಳ್ಳಬೇಕೆಂದು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಗುರುದೇವ ಸಂಸ್ಥೆಯನ್ನು ಸಂಪರ್ಕಿಸಬಹುದು.