ಹುಬ್ಬಳ್ಳಿ: ಭಾರತ ಸರ್ಕಾರದ ವಿವಿದ ಯೋಜನೆಗಳ ಬಗ್ಗೆ ಗ್ರಾಮೀಣ ಮತ್ತು ನಗರ ಪ್ರದಶಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ವಿಕಸಿತ ಭಾರತ ಸಂಕಲ್ಪ ಯಾತ್ರೆಯೂ ಜಿಲ್ಲೆಯ ಬ್ಯಾಹಟ್ಟಿ ಗ್ರಾಮದಲ್ಲಿ ವಿಶೇಷ ಕಾರ್ಯಕ್ರಮ ಜರುಗಿತು.
ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಅವರು ಭಾಗವಹಿಸಿ ಕಾರ್ಯಕ್ರಮಕ್ಕೆ
ಚಾಲನೆ ನೀಡಿ ಮಾತನಾಡಿದ ಅವರು, ಕಳೆದ ಒಂಬತ್ತುವರೆ ವರ್ಷಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಗ್ರಾಮೀಣ ಹಾಗೂ ನಗರ ಜನರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಮುಖ್ಯವಾಗಿ ಈ ಯಾತ್ರೆಯಲ್ಲಿ ಉಜ್ವಲಾ ಯೋಜನೆ, ಆಯುಷಮಾನ ಭಾರತ ಯೋಜನೆಯಡಿ ಆರೋಗ್ಯ ತಪಾಸಣೆ ಶಿಬಿರ, ಆಧಾರ ಕಾರ್ಡ್, ಪ್ರಧಾನ ಮಂತ್ರಿ ಸ್ವನಿದಿ, ಬ್ಯಾಂಕಿನಲ್ಲಿ ಪ್ರಧಾನ ಮಂತ್ರಿ ಜೀವನ ಜ್ಯೋತಿ ಮತ್ತು ಜೀವನ ಭೀಮಾ ಯೋಜನೆ, ಮುದ್ರಾ, ವಿಶ್ವಕರ್ಮ ಯೋಜನೆ ಮತ್ತು ಇನ್ನಿತರ ಯೋಜನೆಗಳು ಜಾರಿಯಲ್ಲಿದ್ದು ಜನರು ಇವೆಲ್ಲ ಯೋಜನೆಗಳ ಲಾಭವನ್ನು ಸ್ಥಳದಲ್ಲೇ ಮಾಹಿತಿ ಪಡೆದು ಅರ್ಜಿಯನ್ನು ಸಲ್ಲಿಸುವ ವ್ಯೇವಸ್ಥೆಯನ್ನು ಕಲ್ಪಿಸಲಾಗಿದೆ, ಯೋಜನೆಗಳ ಸಮರ್ಪಕ ಮಾಹಿತಿ ನೀಡುವ ಉದ್ದೇಶದಿಂದ ಇಡಿ ದೇಶದಲ್ಲಿ ಈ ಒಂದು ವಿಕಸಿತ ಭಾರತ ಸಂಕಲ್ಪ ಯಾತ್ರೆಯನ್ನು ಪ್ರಾರಂಭಿಸಲಾಗಿದೆ ಎಂದ ಅವರು ಯೋಜನೆಗಳ ಲಾಭವನ್ನು ಪಡೆದು ತಮ್ಮ ಸ್ವಂತ ಅಭಿವೃದ್ಧಿಯ ಜೊತೆಗೆ ದೇಶದ ಅಭಿವೃದ್ಧಿಗೆ ಎಲ್ಲರೂ ಮುಂದಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾರತವನ್ನು 2047ರೊಳಗೆ ಅಭಿವೃದ್ದಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಕುರಿತು ಪ್ರತಿಜ್ಞಾ ವಿಧಿಯನ್ನು ಭೋದಿಸಲಾಯಿತು ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಲ್ಲಿ ಆಯ್ಕೇಯಾದ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಿಸಿ, ಕೇಂದ್ರ ಸರ್ಕಾರದ ಯೋಜನೆಗಳ ಮಾಹಿತಿಯುಳ್ಳ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಪ್ರಧಾನ ಮಂತ್ರಿಯವರ ಮನ್ ಕೀ ಬಾತ್ ನೇರ ಪ್ರಸಾರ ಕಾರ್ಯಕ್ರಮವನ್ನು ಸಚಿವರು ಸ್ಥಳೀಯರೊಂದಿಗೆ ವೀಕ್ಷಿಸಿದರು.
ಪ್ರಧಾನ ಮಂತ್ರಿಯವರ ಉಜ್ವಾಲಾ ಯೋಜನೆ, ಸ್ವ ಸಹಾಯ ಗುಂಪುಗಳಿಗೆ ಸಾಲ ಮಂಜೂರಾತಿ, ಆಯುಷ್ ಮಾನ್ ಭಾರತ, ಮುದ್ರಾ, ಸ್ವನಿಧಿ, ಪ್ರಧಾನ ಮಂತ್ರಿಯವರ ಆವಾಸ ಯೋಜನೆ ಸೇರಿದಂತೆ ಹಲವಾರು ಜನಪರ ಯೋಜನೆಗಳ ಕುರಿತು ಸಂಭಂದಿಸಿದ ಇಲಾಖೆಗಳು ಮಳಿಗೆಯನ್ನು ತೆರೆದು ಅಧಿಕಾರಿಗಳು ಫಲಾನುಭವಿಗಳಿಗೆ ಮತ್ತು ನೆರೆದಿದ್ದ ಸಾರ್ವಜನಿಕರಿಗೆ ಯೋಜನೆಗಳ ಸಂಪೂರ್ಣ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಹಾದೇವಿ ಹಂಗರಕಿ, ಉಪಾದ್ಯೇಕ್ಷರು ಹಾಗೂ ಸರ್ವ ಸದಸ್ಯರು, ಕೆನರಾ ಬ್ಯಾಂಕ್ ಮಹಾ ಪ್ರಬಂಧಕ ಎಂ ವಿಜಯಕುಮಾರ, ಮ್ಯಾನೇಜರ್ ಗಂಗಾಧರ ನೀಲಣ್ಣವರ, ಜಿಲ್ಲಾ ಅಗ್ರಣಿಯ ಬ್ಯಾಂಕಿನ ಮ್ಯಾನೇಜರ್ ಪ್ರಭುದೇವ ಸೇರಿದಂತೆ ಹಲವು ಗಣ್ಯರು ವಿವಿಧ ಬ್ಯಾಂಕಿನ ಅಧಿಕಾರಿಗಳು, ಇನ್ನುಳಿದ ಜನಪ್ರನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಅಪಾರಾ ಸಂಖ್ಯೆಯಲ್ಲಿ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.