ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ನಾಳೆ ಬಂದ್ ಹಿನ್ನೆಲೆಯಲ್ಲಿ ಅವಳಿ ನಗರ ಬೆಂಬಲಿಸಿ ಕಾಂಗ್ರೆಸ್ ಸಭೆ ನಡೆಸಿದ್ದು, ದಲಿತ ಸಂಘಟನೆಗಳ ಬಂದ್ ಗೆ ಕಾಂಗ್ರೆಸ್ ಬೆಂಬಲ ನೀಡಿದೆ.
ಅಂಬೇಡ್ಕರ್ ವಿರುದ್ಧದ ಅಮಿತ್ ಶಾ ಹೇಳಿಕೆಗೆ ಖಂಡನೆ: ನಾಳೆ ಬೀದರ್ ಬಂದ್! ಶಾಲೆಗಳಿಗೆ ರಜೆ!
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಮಹಾನಗರ ಅಧ್ಯಕ್ಷ ಅಲ್ತಾಫ್ ಹಳ್ಳೂರ ನೇತೃತ್ವದಲ್ಲಿ ಸಭೆ ನಡೆಸಿದ್ದು, ನಾಳೆಯ ಬಂದ್ ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಲು ತೀರ್ಮಾನ ಕೈಗೊಂಡಿದ್ದಾರೆ. ಸಭೆ ನಂತರ ಅಧ್ಯಕ್ಷ ಅಲ್ತಾಫ್ ಹಳ್ಳೂರ ಹೇಳಿಕೆ ನೀಡಿದ್ದು, ನಾಳೆ ನೂರಕ್ಕೂ ಹೆಚ್ಚಿನ ದಲಿತ ಸಂಘಟನೆಗಳು ಅಮಿತ್ ಶಾ ಹೇಳಿಕೆಗೆ ಬಂದ್ ಕರೆ ಕೊಟ್ಟಿದ್ದಾರೆ. ಬಂದ್ ಯಶಸ್ವಿಗಾಗಿ ನಮ್ಮ ಮುಖಂಡರು, ಪದಾಧಿಕಾರಿಗಳು ಸಭೆ ಮಾಡಿದ್ದೇವೆ. ಅಂಬೇಡ್ಕರ್ ಬಗ್ಗೆ ಅಮಿತ್ ಶಾ ಹೇಳಿಕೆ ಕೊಟ್ಟು ದಲಿತರಿಗೆ, ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ. ಅದಕ್ಕೆ ನಾವು ಬೆಂಬಲ ನೀಡಿ ಯಶಸ್ವಿ ಮಾಡ್ತೇವೆ ಎಂದು ಕರೆ ನೀಡಿದ್ದಾರೆ.
ದಲಿತರಿಗೆ ಬೆಂಬಲ ನೀಡೋದು ನಮ್ಮ ಕರ್ತವ್ಯ. ದಲಿತ ಮುಖಂಡರು ಬಂದು ಬೆಂಬಲ ಕೇಳಿದ್ರು ನಾವು ಕೊಡ್ತಾ ಇದ್ದೇವೆ. ಬಂದ್ ಗೆ ಸ್ಥಳೀಯ ನಾಯಕರು, ಶಾಸಕರು ಭಾಗಿ ಆಗ್ತಾರೆ. ಎಲ್ಲರಿಗೂ ಈಗಾಗಲೇ ಬಂದ್ ಗೆ ಮನವಿ ಮಾಡಿಕೊಂಡಿದ್ದೇವೆ ಎಂದು ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.