ಹುಬ್ಬಳ್ಳಿ:- ಹುಬ್ಬಳ್ಳಿ ಸಿಲಿಂಡರ್ ಸ್ಪೋಟ ಕೇಸ್ ಗೆ ಸಂಬಧಪಟ್ಟಂತೆ ಮತ್ತೋರ್ವ ಮಾಲಾಧಾರಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 8ಕ್ಕೆ ಏರಿಕೆ ಆಗಿದೆ.
ರೌಡಿಶೀಟರ್ಗಳು ಪೊಲೀಸರು ಹೇಳಿದಂತೆ ಕೇಳಬೇಕು: ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಖಡಕ್ ವಾರ್ನಿಂಗ್!
ಪ್ರಕಾಶ ಬಾರಕೇರ ಮೃತ ಮಾಲಾಧಾರಿ. ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಮೃತ ಪ್ರಕಾಶ ಬಾರಕೇರ, ಹುಬ್ಬಳ್ಳಿಯ ಉಣಕಲ್ ನಿವಾಸಿಯಾಗಿದ್ದಾರೆ.
ಸೋಮವಾರ ರಾತ್ರಿಯಷ್ಟೇ ಅಯ್ಯಪ್ಪ ಮಾಲಾಧಾರಿ ತೇಜಸ್ವರ್ (27) ಮೃತಪಟ್ಟಿದ್ದರು. ಇದೀಗ 9 ಗಾಯಾಳುಗಳ ಪೈಕಿ 8 ಅಯ್ಯಪ್ಪ ಮಾಲಾಧಾರಿಗಳ ಸಾವಾಗಿದ್ದು, ಕಿಮ್ಸ್ನಲ್ಲಿ ಓರ್ವ ಗಾಯಾಳು ಮಾಲಾಧಾರಿಗೆ ಚಿಕಿತ್ಸೆ ಮುಂದುವರಿದಿದೆ.
ಹುಬ್ಬಳ್ಳಿಯ ಅಚ್ಚವ್ವನ ಕಾಲೋನಿಯ ಅಯ್ಯಪ್ಪನ ಸನ್ನಿಧಿಯಲ್ಲಿ ಸಂಭವಿಸಿದ್ದ ಭೀಕರ ಸಿಲಿಂಡರ್ ಸ್ಫೋಟ ಎಲ್ಲರನ್ನೂ ಬೆಚ್ಚಿಬೀಳಿಸಿತ್ತು. 9 ಮಂದಿ ಅಯ್ಯಪ್ಪ ಮಾಲಾಧಾರಿಗಳು ಬೆಂಕಿಯಲ್ಲಿ ಬೆಂದು ಕಿಮ್ಸ್ ಆಸ್ಪತ್ರೆ ಸೇರಿದ್ದರು. ತಜ್ಞ ವೈದ್ಯರಿಂದ ಚಿಕಿತ್ಸೆ ಕೊಡಿಸಿದರೂ ಗಾಯಾಳುಗಳನ್ನು ಉಳಿಸಿಕೊಳ್ಳಲು ಆಗುತ್ತಿಲ್ಲ. ಸಾವಿನ ಸರಣಿ ಮುಂದುವರಿದಿದ್ದು ಸೋಮವಾರ ರಾತ್ರಿ ರಾಮನಗರ ನಿವಾಸಿ 26 ವರ್ಷದ ತೇಜಸ್ವರ್ ಸಾತರೆ ಉಸಿರು ಚೆಲ್ಲಿದ್ದಾರೆ.
ಮೃತ ತೇಸಜ್ವರ್ 3 ವರ್ಷದಿಂದ ಅಯ್ಯಪ್ಪ ಸ್ವಾಮಿ ಮಾಲೆ ಹಾಕುತ್ತಿದ್ದರು ಎನ್ನಲಾಗಿದೆ. ಅಯ್ಯಪ್ಪನ ಆಶೀರ್ವಾದದಿಂದ ಮಗ ಬದುಕಿ ಬರಬಹುದು ಎಂದುಕೊಂಡಿದ್ದ ಕುಟುಂಬಕ್ಕೆ ಸಾವಿನ ಸುದ್ದಿಯಿಂದ ಆಕಾಶಾವೇ ತಲೆ ಮೇಲೆ ಕಳಚಿ ಬಿದ್ದಂತಾಗಿದೆ.