ಹುಬ್ಬಳ್ಳಿ, ಡಿಸೆಂಬರ್ 27: ಸಿಲಿಂಡರ್ ಸ್ಫೋಟಗೊಂಡು ತೀರ್ವವಾಗಿ ಗಾಯಗೊಂಡು ಕಿಮ್ಸ್ಗೆ ದಾಖಲಾಗಿದ್ದ ಮತ್ತೊಬ್ಬ ಅಯ್ಯಪ್ಪ ಮಾಲಾಧಾರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟಿದ್ದಾರೆ. ರಾಜು ಮೂಗೇರಿ (16) ಮೃತ ದುರ್ದೈವಿ. ಮೃತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.
ಭಾರತದ ಆರ್ಥಿಕ ದಿಕ್ಕನ್ನು ಬದಲಾಯಿಸಿದ ವಿಶ್ವ ಪ್ರಖ್ಯಾತ ತಜ್ಞರನ್ನು ನಾವು ಕಳೆದುಕೊಂಡಿದ್ದೇವೆ: ಜಿ. ಪರಮೇಶ್ವರ ಸಂತಾಪ!
ಡಿಸೆಂಬರ್ 22ರಂದು ಸಾಯಿನಗರದ ಈಶ್ವರ ದೇವಸ್ಥಾನದಲ್ಲಿ ಸಿಲಿಂಡರ್ ಸ್ಫೋಟಗೊಂಡು 9 ಜನ ಅಯ್ಯಪ್ಪ ಮಾಲಾಧಿಕಾರಿಗಳು ಗಾಯಗೊಂಡಿದ್ದರು. 9 ಜನರನ್ನು ಕಿಮ್ಸ್ಗೆ ದಾಖಲಾಖಲಿಸಲಾಗಿತ್ತು. ಈಗವರೆಗೆ ಮೂವರು ಮೃತಪಟ್ಟಿದ್ದು, ಆರು ಜನರಿಗೆ ಚಿಕಿತ್ಸೆ ಮುಂದುವರೆದಿದೆ.
ಹುಬ್ಬಳ್ಳಿಯ ಉಣಕಲ್ ಸಮೀಪ ಇರುವ ಅಚ್ಚವ್ಚನ ಕಾಲೋನಿಯಲ್ಲಿ ಡಿಸೆಂಬರ್ 22 ರಂದು ಬೆಳಗಿನ ಜಾವ ಸಿಲಿಂಡರ್ ಸ್ಪೋಟಗೊಂಡು 9 ಜನ ಮಾಲಾಧಾರಿಗಳು ಗಾಯಗೊಂಡಿದ್ದರು. 9 ಜನರಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗತಿತ್ತು. ಬೆಂಗಳೂರಿನಿಂದ ತಜ್ಞ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಗುರುವಾರ (ಡಿ.26) ಚಿಕಿತ್ಸೆ ಫಲಿಸದೆ ಇಬ್ಬರು ಮೃತಪಟ್ಟಿದ್ದರು. ಇಂದು (ಡಿ.27) ಮತ್ತೊಬ್ಬ ಅಯ್ಯಪ್ಪ ಮಾಲಧಾರಿ ಸಾವಿಗೀಡಾಗಿದ್ದರು.
8 ವರ್ಷದ ನಿಜಲಿಂಗಪ್ಪ ಬೇಪುರಿ, 18 ವರ್ಷದ ಸಂಜಯ್ ಸವದತ್ತಿ, 16 ವರ್ಷದ ರಾಜು ಮೂಗೇರಿ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಾಲಾಧಾರಿಗಳು ಸಾವನ್ನಪ್ಪಿದ ಹಿನ್ನಲೆಯಲ್ಲಿ ಐವರು ಅಯ್ಯಪ್ಪನ ಮಾಲೆಯನ್ನು ತಗೆದಿದ್ದಾರೆ.
ಅಚ್ಚವ್ವನ ಕಾಲೋನಿಯ ಸನ್ನಿಧಿಯಲ್ಲಿ ಒಟ್ಟು 14 ಜನ ಮಾಲಾಧಾರಿಗಳಿದ್ದರು. ಅದರ ಪೈಕಿ ಸನ್ನಿಧಿಯ ಮೇಲಿನ ಕೋಣೆಯಲ್ಲಿ 9 ಜನ ಇದ್ದರು, ಕೆಳಗೆ 5 ಜನ ಇದ್ದರು. ಹೀಗಾಗಿ, ಆ ಐದು ಜನರು ಮಾನಸಿಕವಾಗಿ ನೊಂದು ತಾವು ಧರಿಸಿದ್ದ ಮಾಲೆಯನ್ನು ತಗೆದಿದ್ದಾರೆ.