ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪೌರ ಕಾರ್ಮಿಕರು ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನಾ ಧರಣಿಗೆಜೈ ಭೀಮ ಯುವ ಶಕ್ತಿ ಸೇನಾ ಬೆಂಬಲ ನೀಡಿತು.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಹಲವು ಉದ್ಯೋಗ ಖಾಲಿ: ಆಸಕ್ತರು ಅಪ್ಲೈ ಮಾಡಿ!
ಪೌರ ಕಾರ್ಮಿಕರು ಅನೇಕ ದಿನಗಳಿಂದ
ವಿವಿಧ ಬೇಡಿಕೆಗಳನ್ನು ಈಡೇರಿಸಲು
ಒತ್ತಾಯ ಮಾಡಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಕಚೇರಿ ಮುಂದೆ ಪೌರ ಕಾರ್ಮಿಕರ ಧರಣಿ ಮುಂದುವರಿದಿದೆ.
ಈ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯು ಪೌರಕಾರ್ಮಿಕರಿಗೆ ನ್ಯಾಯಯುತ ಆಯುಕ್ತರಿಗೆ ಮನವಿ ಕೊಡಲಾಯಿತು . ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಅಧ್ಯಕ್ಷರು ಹರೀಶ ಎಮ್ ಗುಂಟ್ರಾಳ ಪೌರಕಾರ್ಮಿಕರ ಹೋರಾಟಕ್ಕೆ ನಮ್ಮ ಸಂಘನೆಯ ಬೆಂಬಲ ಸದಾ ಇರುತ್ತದೆ ಮಾನ್ಯ ಆಯುಕ್ತರು ಆದಷ್ಟು ಬೇಗ ನ್ಯಾಯಯುತ ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸದಿದ್ದರೆ ಎಲ್ಲಾ ಸಂಘಟನೆಗಳು ಜೊತೆಗೂಡಿ ಉಗ್ರವಾದ ಹೋರಾಟ ಮಾಡಲು ಅನಿವಾರ್ಯವಾಗುವುದು ಎಂದರು.
ಉಪಾಧ್ಯಕ್ಷ ಸುನಿಲ ಕುರ್ಡೇಕರ್, ಮುಖಂಡರು ವಿಜಯ ಕರ್ರಾ, ಮುಖಂಡರು ಹನುಮಂತ ಯರಗುಂಟಿ ,ಮುಖಂಡರು ಸತೀಶ್ ಮಿಶ್ರಿಕೋಟಿ ,ವಿನೋದ್ ವಿನೋದ್ ಕೊರವರ ,ರಮೇಶ ಹಿರೇಮನಿ, ಪರಶುರಾಮ್ ಛಲವಾದಿ, ವಿನೋದ್ ಸಿದ್ದಾಪುರ ,ನಾಗರಾಜ್ ಕೊರವರ, ಶಂಕರ್ ಕಟ್ಟಿಮನಿ, ಹನುಮಂತ ಮಡಿವಾಳರ ಸೇರಿದಂತ್ತೆ ಇನ್ನು ಅನೇಕರು ಉಪಸ್ಥಿತರಿದ್ದರು