ಹುಬ್ಬಳ್ಳಿ: ‘ಇಂಗ್ಲೇಡಿನ ರಾಷ್ಟ್ರೀಯ ಆರೋಗ್ಯ ಸೇವೆ(NHS) ಹಾಗೂ ಬ್ಯಾಪಿಯೊ ಟ್ರೇನಿಂಗ್ ಅಕಾಡೆಮಿ(BTA) ಜೊತೆ ನಗರದ ಶ್ರೀ ಬಾಲಾಜಿ ಆಸ್ಪತ್ರೆ ಒಡಂಬಡಿಕೆ ಮಾಡಿಕೊಂಡಿದೆ’ ಎಂದು ಆಸ್ಪತ್ರೆಯ ಮುಖ್ಯಸ್ಥ ಡಾ. ಕ್ರಾಂತಿ ಕಿರಣ ಹೇಳಿದರು.
‘ಈ ಸಂಸ್ಥೆಗಳ ಜೊತೆ ಒಡಂಬಡಿಕೆ ಮಾಡಿಕೊಂಡ ರಾಜ್ಯದ ಎರಡನೇ ಆಸ್ಪತ್ರೆ ನಮ್ಮದಾಗಿದೆ. ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ಒಡಂಬಡಿಕೆ ಒಪ್ಪಂದ ಮಾಡಿಕೊಳ್ಳಲಾಗಿದೆ.
PM Awas Yojana: ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ.? ಇಲ್ಲಿದೆ ನೋಡಿ ಮಾಹಿತಿ
ಗುಣಮಟ್ಟದ ಆರೋಗ್ಯ ಸೇವೆ, ಸಂಶೋಧನೆ, ತರಬೇತಿ, ಕೌಶಲ, ಶಿಕ್ಷಣಕ್ಕೆ ಇದು ಪೂರಕವಾಗಿದೆ. ಒಪ್ಪಂದದ ಅನ್ವಯ ಸಮಿತಿ ರಚನೆಯಾಗಿದ್ದು, ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ ಪರಿಶೀಲನೆ ನಡೆಸುತ್ತದೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಆಸ್ಪತ್ರೆ ಸಿಇಒ ಡಾ. ರಿಕಿ ಬೆಂಜಮಿನ್ ಮತ್ತು ಡಾಮ ಶಶಾಂಕ ಇದ್ದರು.