ಹುಬ್ಬಳ್ಳಿ : ಸಮೀಪದ ಕುಂದಗೋಳ ತಾಲ್ಲೂಕಿನ ಗುಡಿಗೇರಿಯ ಪೊಲೀಸ್ ಠಾಣೆಯ ಎಎಸ್ಐ ಬಸವರಾಜ ಶಾಂತವೀರಪ್ಪ ಪಾಯಣ್ಣವರ (54) ಅವರು ವಿಷ ಸೇವಿಸಿ ಆತ್ಯಹತ್ಯೆ ಮಾಡಿಕೊಂಡಿದ್ಧಾರೆ.
‘ಸೋಮವಾರ ರಾತ್ರಿ ಪಾಳಿ ಕಾರ್ಯನಿರ್ವಹಿಸಿ ಹೋಗಿದ್ದ ಅವರು ವಸತಿ ಗೃಹದ ಆವರಣದ ಬಳಿ ದೇಗುಲ ಭಾಗದಲ್ಲಿ ಮಲಗಿದ್ಧಾರೆ. ಮಂಗಳವಾರ ಮಧ್ಯಾಹ್ನ ಊಟಕ್ಕೆ ಎಬ್ಬಿಸಲು ಹೋದಾಗ ಅವರು ಎದ್ದಿಲ್ಲ. ನಂತರ ಮಂಗ ತಡರಾತ್ರಿವರೆಗೂ ಅವರನ್ನು ಲಕ್ಷ್ಮೇಶ್ವರ ಆಸ್ಪತ್ರೆ ಒಯ್ಯಲಾಯಿತು ಅವರು ಮೃತಪಟ್ಟಿದ್ದರು’ ಎಂದು ಪೊಲೀಸರು ತಿಳಿಸಿದ್ಧಾರೆ.
‘ಎಎಸ್ಐ ಬಸವರಾಜ ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ. ಈ ಬಗ್ಗೆ ಪರಿಶೀಲನೆ ಮಾಡುತ್ತೇವೆ. ಅವರು ಕೆಲವು ದಿನಗಳಿಂದ ಕಾಲುನೋವಿನಿಂದ ಬಳಲುತ್ತಿದ್ದರು ಎಂದು ಅವರ ಜತೆಗಿದ್ದವರು ಎಂದು ತಿಳಿದು ಬಂದಿದೆ .
ಬಸವರಾಜ ಅವರು ಗದಗ ಜಿಲ್ಲೆಯ ಗಜೇಂದ್ರಗಡ ಸಮೀಪದ ಶಾಂತಗಿರಿ ಗ್ರಾಮದವರು. ಅವರಿಗೆ ಪತ್ನಿ.ಮೂವರು ಮಕ್ಕಳು ಇದ್ಧಾರೆ.