ಹುಬ್ಬಳ್ಳಿ : ಸಮೀಪದ ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ 2025ರ
ಜನವರಿಯಲ್ಲಿ ಆಯೋಜಿಸಿರುವ ನವ ತೀರ್ಥಂಕರರ ದ್ವಿತೀಯ ಮಹಾಮಸ್ತಕಾಭಿಷೇಕ ಹಾಗೂ 405 ಅಡಿ ಎತ್ತರದ ಸುಮೇರು ಪರ್ವತ ಲೋಕಾರ್ಪಣೆ, ಜಿನಬಿಂಬಗಳ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವದಲ್ಲಿ ಪಾಲ್ಗೊಳ್ಳುವುದಕ್ಕಾಗಿ ದೇಶದ ವಿವಿಧೆಡೆಯಿಂದ ಮುನಿಗಳು ಆಗಮಿಸುತ್ತಿದ್ದಾರೆ.
ಈ ಐದು ರಾಶಿಗಳಿಗೆ ಮದುವೆಯ ಶುಭಯೋಗದಿಂದ ಹೊಸ ವರ್ಷ ಪ್ರಾರಂಭ: ಮಂಗಳವಾರ- ರಾಶಿ ಭವಿಷ್ಯ ಡಿಸೆಂಬರ್-31,2024
ಮುನಿಶ್ರೀ ಪುಣ್ಯಸಾಗರ ಮಹಾರಾಜರು ಭಾನುವಾರ ನವಗ್ರಹ ತೀರ್ಥಕ್ಷೇತ್ರ ಪ್ರವೇಶಿಸಿದರು. ಆಚಾರ್ಯ ಶ್ರೀ ಪದ್ಮನಂದಿ ಮಹಾರಾಜರು ಮತ್ತೊಬ್ಬ ಮುನಿಶ್ರೀ ಹಾಗೂ ಮಾತಾಜಿ ತಂಡದೊಂದಿಗೆ ಸೋಮವಾರದಂದು ಹುಬ್ಬಳ್ಳಿಗೆ ಆಗಮಿಸಿದರು. ಜ. 1ರಂದು ಬೆಳಗ್ಗೆ ಮುನಿಗಳ ತಂಡವು ನವಗ್ರಹ ತೀರ್ಥಕ್ಷೇತ್ರ ತಲುಪಲಿದೆ.