ಹುಬ್ಬಳ್ಳಿ: ಫೇಸ್ಬುಕ್ ಪೇಜ್ ಲೈಕ್ ಮಾಡಿ ಟೆಲಿಗ್ರಾಂ ಟಾಸ್ಕ್ ಸ್ಪೇಷಲಿಸ್ಟ್ ಖಾತೆಗೆ ಕಳುಹಿಸಿದರೆ ಹೆಚ್ಚು ಲಾಭಗಳಿಸಬಹುದೆಂದು ನಂಬಿಸಿದ ಅಪರಿಚಿತರು ನಗರದ ಸುರ್ ಗಾಯತೊಂಡೆ ಎಂಬುವರಿಂದ 5.32 ಲಕ್ಷ ರೂ. ಆನ್ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ಸುರ್ ಎಂಬುವರಿಗೆ ಟೆಲಿಗ್ರಾಮ್ನಲ್ಲಿ ಅಪರಿಚಿತ ವ್ಯಕ್ತಿ ಪರಿಚಯವಾಗಿದ್ದಾನೆ. ಬಳಿಕ ಫೇಸ್ಬುಕ್ ಪೇಜ್ ಕಳಹಿಸಿ ಲೈಕ್ ಮಾಡಿದ ಪೇಜ್ ಮರಳಿ ಟೆಲಿಗ್ರಾಮ್ಗೆ ಹಾಕಲು ಹೇಳಿದ್ದಾನೆ. ಇದನ್ನು ನಂಬಿದ ಅವರು ಲೈಕ್ ಮಾಡಿ ಕಳಹಿಸಿದಾಗ ಮೊದಲಿಗೆ 2 ಸಾವಿರ ರೂ., ಆ ಮೇಲೆ 2,800 ರೂ. ಹಾಕಿ ನಂಬಿಕೆ ಬರುವಂತೆ ಮಾಡಿದ್ದಾನೆ. ಬಳಿಕ ಇನ್ನೂ ಹೆಚ್ಚಿನ ಟಾಸ್ಕ್ ನೀಡಿದ್ದು, ಹಂತ ಹಂತವಾಗಿ ಸುರ್ ಅವರ ಖಾತೆಯಿಂದ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ