ಹುಬ್ಬಳ್ಳಿ; ಸಮೀಪದ ಕುಂದಗೋಳ ಧಾರವಾಡ ಕೃಷಿ ಜಂಟಿ ನಿರ್ದೇಶಕರು ರೈತರ ಜಮೀನಿಗೆ ದಿಢೀರ್ ಭೇಟಿ ಹೌದು ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ರೈತರ ಬೆಳೆದ ಕಡಲೆ ಬೆಳೆಗೆ ಸಿಡಿ ರೋಗ ಹಾಗೂ ಜೋಳಕ್ಕೆ ಲದ್ದಿ ಹುಳದ ಬಾದೆ ಹೆಚ್ಚಾಗಿ ಕಂಡುಬಂದಿದ್ದು ಅಧಿಕಾರಿಗಳ ಗಮನಕ್ಕೆ ರೈತರು ತಂದಾಗ ದಿಡೀರ್ ಭೇಟಿ ನೀಡಿ ರೈತರು ಬಿತ್ತನೆ ಮಾಡುವ ಸಂದರ್ಭದಲ್ಲಿ ಬೀಜೋಪಚಾರ ಮಾಡಬೇಕು ಈಗ ಸಿಡಿ ರೋಗ ಬಂದ ಸಸಿಯನ್ನು ಕಿತ್ತು ಸುಡುವುದು ಸೂಕ್ತ ಇದಕ್ಕೆ ಯಾವುದೇ ಔಷಧಿ ಸಿಂಪಡಿ ಮಾಡಿದರು ಹತೋಟಿಗೆ ಬರುವುದಿಲ್ಲ ಬಿತ್ತನೆ ಮಾಡಿದ ನಂತರ ಈ ರೋಗ ಕಂಡುಬರುತ್ತದೆ.
ಮಂಡ್ಯದಲ್ಲೊಂದು ದುರಂತ: ನೀರಿನ ಟ್ಯಾಂಕ್ಗೆ ನೇಣು ಬಿಗಿದು ಎಂಜಿನಿಯರ್ ಸೂಸೈಡ್!
ಹೆಸರು ಬಿತ್ತನೆ ಮಾಡಿದ ಜಮೀನುಗಳಿಗೆ ಕಡಲೆ ಬಿಟ್ಟು ಬೇರೆ ಬೆಳೆ ಯಬೇಕು ಲದ್ದಿ ಕುಲಕ್ಕೆ ನಮ್ಮ ಇಲಾಖೆಯಲ್ಲಿ ಔಷಧಿ ಲಭ್ಯವಿದ್ದು ಔಷಧಿಯನ್ನು ಎರಡು ಬಾರಿ ಚೋಳದ ಬೆಳೆಗೆ ಸಿಂಪಡಣೆ ಮಾಡಬೇಕೆಂದು ಧಾರವಾಡ ಜಂಟಿ ಕೃಷಿ ನಿರ್ದೇಶಕರು ಮಂಜುನಾಥ ಅಂತರವಳ್ಳಿ ಹೇಳಿದರು ಇದೇ ಸಂದರ್ಭದಲ್ಲಿ ಹುಬ್ಬಳ್ಳಿ ಉಪ ಕೃಷಿ ನಿರ್ದೇಶಕರು ಸಂದೀಪ್ ಆರ್ ಜಿ ಮಾತನಾಡಿ ರೈತರಿಗೆ ಪ್ರಮುಖವಾಗಿ ಕೃಷಿ ಇಲಾಖೆಯಿಂದ ಕೃಷಿ ಹೊಂಡ ಅವಶ್ಯಕತೆ ಇದ್ದರೆ ಕೃಷಿಭಾಗ್ಯ ಯೋಜನೆಯ ಅಡಿಯಲ್ಲಿ ನಮ್ಮ ಇಲಾಖೆಗೆ ತಾವು ಅರ್ಜಿ ಸಲ್ಲಿಸಬೇಕು ಈ ಹಿಂದೆ ಯಾರಾದರೂ ಕೃಷಿ ಹೊಂಡ ಮಾಡಿಕೊಂಡರೆ ಅಂತ ರೈತರಿಗೆ ಕೃಷಿ ಭಾಗ್ಯ ಯೋಜನೆಯಲ್ಲಿ ಕೃಷಿ ಹೊಂಡ ಕೊಡುವುದಿಲ್ಲ ಎಂದು ಅವರು ಹೇಳಿದರು
ಪಂಪ್ಸೆಟ್ ಪೈಪುಗಳು ಬೇಕೆಂದರೆ ನಮ್ಮ ಕೃಷಿ ಇಲಾಖೆ ಸಹಾಯಧನದಿಂದ ಪೈಪು ಕೃಷಿ ಯಂತ್ರೋಪಕರಣ ಲಭ್ಯವಿದೆ ಅಂತ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಿ ಸಲಕರಣೆಗಳನ್ನು ಪಡೆದುಕೊಳ್ಳಬೇಕು ಎಂದು ಕುಂದಗೋಳ ಕೃಷಿ ನಿರ್ದೇಶಕ ಭಾರತಿ ಮೆಣಸಿನಕಾಯಿ ಹೇಳಿದರು ಇದೇ ಸಂದರ್ಭದಲ್ಲಿ ರತ್ನ ಭಾರತ ರೈತ ಸಮಾಜದ ತಾಲೂಕ ಅಧ್ಯಕ್ಷರಾದ ಬಸವರಾಜ ಯೋಗಪ್ಪನವರ ಶಾಲ್ ಹೊದಿಸಿ ಅಧಿಕಾರಿಗಳಿಗೆ ಸನ್ಮಾನಿಸಿದರು ಈ ಸಂದರ್ಭದಲ್ಲಿ ಆತ್ಮ ಯೋಜನೆಯ ಅಧಿಕಾರಿ ಶ್ರೀದೇವಿ ಆಲೂರಿ ಶ್ರೀಕಾಂತ್ ಚನ್ನಬಸಪ್ಪ ಸಿದ್ದು ನವರ ಸಕ್ರಪ್ಪ ಕಮ್ಮಾರ ನಾಗಪ್ಪ ಸಿದ್ದಣ್ಣವರ ಮಹಾವೀರ ಯೋಗಪ್ನವರ ರಾಜು ಮಲ್ಲಿಗವಾಡ ಬಸವರಾಜ ಹೊಸಳ್ಳಿ ಸಂದೀಪ್ ಜೈನರ ಎಲ್ಲವ್ವ ಯೋಗಪ್ಪನವರ ನಾಗವ್ವ ಎಮ್ಮಿ ಇನ್ನಿತ ರೈತ ಮುಖಂಡರು ಈ ಸಂದರ್ಭದಲ್ಲಿ ಉಪಸಿತರಿದ್ದರು