ಹುಬ್ಬಳ್ಳಿ: ಭಾರತೀಯ ರೈಲ್ವೆ ನೀಡುವ ‘ಅತಿ ವಿಶಿಷ್ಟ ರೈಲು ಸೇವಾ ಪುರಸ್ಕಾರ’ಕ್ಕೆ ನೈರುತ್ಯ ರೈಲ್ವೆ ವ್ಯಾಪ್ತಿಯ ಸಿಬ್ಬಂದಿಗಳಾದ ಶಿವಾನಂದ ಟಿ, ದಿನೇಶ್ ಎನ್. ಗೋಲೆನವರ್, ರಾಜಾ ಮತ್ತು ಶ್ರೀಜಿತ್ ಜೆ.ಬಿ ಆಯ್ಕೆಯಾಗಿದ್ದಾರೆ.
ಡಿಸೆಂಬರ್ 21ರಂದು ನವದೆಹಲಿಯ ಭಾರತ್ ಮಂಟಪಂನಲ್ಲಿ ನಡೆಯುವ ಸಮಾರಂಭದಲ್ಲಿ 101 ಉದ್ಯೋಗಿಗಳು ಮತ್ತು ಅಧಿಕಾರಿಗಳಿಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಪುರಸ್ಕಾರ ಪ್ರದಾನ ಮಾಡುವರು ಎಂದು ಪ್ರಕಟಣೆ ತಿಳಿಸಿದೆ.
2023ರಂದು ದಾವಣಗೆರೆ ನಿಲ್ದಾಣದಲ್ಲಿ ಹಳಿ ಮೇಲೆ ಸಿಲುಕಿದ್ದ ವೃದ್ಧರೊಬ್ಬರನ್ನು ಹೆಡ್ಕಾನ್ಸ್ಟೆಬಲ್ ಶಿವಾನಂದ ಟಿ. ರಕ್ಷಿಸಿದ್ದರು. ತಾಂತ್ರಿಕ ವಿಭಾಗದಲ್ಲಿ ಆದಾಯ ಉಳಿತಾಯ, ಆಸನಗಳ ಮರುವಿನ್ಯಾಸ ಸೇರಿ ಬೇರೆ ಬೇರೆ ಸಂದರ್ಭದಲ್ಲಿ ಹುಬ್ಬಳ್ಳಿಯ ಡೀಸೆಲ್ ಲೋಕೋ ಶೆಡ್ನ ಗ್ರೇಡ್ 1 ಟೆಕ್ನಿಷಿಯನ್ ದಿನೇಶ್ ಎನ್. ಗೋಲೆನವರ್, ಬೆಂಗಳೂರು ವಿಭಾಗದ ಗ್ರೇಡ್ 3 ಟೆಕ್ನಿಷಿಯನ್ ರಾಜಾ ಮತ್ತು ಹುಬ್ಬಳ್ಳಿ ವಿಭಾಗದ ಟ್ರ್ಯಾಕ್ ನಿರ್ವಹಣೆ 4ರ ಸಿಬ್ಬಂದಿ ಶ್ರೀಜಿತ್ ಜೆ.ಬಿ. ಅವರು ಪ್ರಮುಖ ಪಾತ್ರವಹಿಸಿದ್ದರು.