ಹುಬ್ಬಳ್ಳಿ: ನಗರದ ಕಾರವಾರ ರಸ್ತೆಯ ಹಳೆ ಸಿಎಆರ್ ಮೈದಾನದಲ್ಲಿ ಎನ್ಡಿಪಿಎಸ್ ಪ್ರಕರಣದಲ್ಲಿ ಭಾಗಿಯಾಗಿರುವ 200ಕ್ಕೂ ಹೆಚ್ಚು ಆರೋಪಿಗಳ ಪರೇಡ್ ಶನಿವಾರ ನಡೆಯಿತು. ಹೊಸ ವರ್ಷ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಸದಿರುವಂತೆ ಎಚ್ಚರಿಕೆ ನೀಡಲು ಆರೋಪಿಗಳನ್ನು ಮೈದಾನಕ್ಕೆ ಕರೆ ತರಲಾಗಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಯಾವುದೇ ಅಹಿತಕರ ಘಟನೆ ನಡೆದರೆ ನೀವೇ ಹೊಣೆ ಎಂದು ಎಚ್ಚರಿಕೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮತನಾಡಿದ ಶಶಿಕುಮಾರ, ಹೊಸ ವರ್ಷ ಆಚರಣೆಗೆ ಯಾವುದೇ ಅಡ್ಡಿಗಳಿಲ್ಲ. ತಮ್ಮ ತಮ್ಮ ಮನೆಯಲ್ಲಿ ಆಚರಣೆ ಮಾಡಬಹುದು. ಹೋಟೆಲ್ಗಳಲ್ಲಿ ಆಚರಿಸುವಾಗ ಪಾಲಿಸಬೇಕಾದ ನಿಯಮ ಕುರಿತು ಡಿ. 29ರಂದು ಹೋಟೆಲ್ಗಳ ಮಾಲೀಕರ ಸಭೆ ಕರೆದು ಸೂಚಿಸಲಾಗುವುದು ಎಂದರು.
Dr.Manmohan Singh: ಲೋಕಸಭೆ ಚುನಾವಣೆಯಲ್ಲಿ ಗೆಲ್ಲದಿದ್ರೂ 2 ಬಾರಿ ಪ್ರಧಾನಿಯಾದ ಮನಮೋಹನ ಸಿಂಗ್!
ಎನ್ಡಿಪಿಎಸ್ನಡಿ 440 ಪ್ರಕರಣ ದಾಖಲಾಗಿವೆ. ಕೆಲವರು ಹೊರ ಜಿಲ್ಲೆಯವರು, ಮೃತಪಟ್ಟವರು ಇದ್ದಾರೆ. ಇವರ ಹೊರತಾಗಿ 200ಕ್ಕೂ ಹೆಚ್ಚು ಆರೋಪಿಗಳನ್ನು ಕರೆದು ಎಚ್ಚರಿಕೆ ನೀಡಲಾಗಿದೆ ಎಂದರು. ಡಿಸಿಪಿಗಳಾದ ಮಹಾನಿಂಗ ನಂದಗಾವಿ, ಸಿ.ಆರ್. ರವೀಶ, ಎಸಿಪಿಗಳಾದ ಶಿವಪ್ರಕಾಶ ನಾಯಕ, ಡಾ. ಶಿವರಾಜ ಕಟಕಭಾವಿ, ವಿನೋದ ಮುತ್ತೇದಾರ, ವಿಜಯಕುಮಾರ ತಳವಾರ ಇದ್ದರು.