ಹುಬ್ಬಳ್ಳಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ ಪ್ರಕರಣವನ್ನ ರಾಜಿ ಸಂಧಾನ ಮೂಲಕ ಮುಗಿಸಬೇಕು ಎಂದಿದ್ದೇ ಎಂದು ವಿಧಾನ ಪರಿಷತ್ ಸಭಾಪತಿ
ಬಸವರಾಜ ಹೊರಟ್ಟಿ ಹೇಳಿದರು.
ನಿರುದ್ಯೋಗಿಗಳಿಗೆ ಗುಡ್ ನ್ಯೂಸ್: ಬ್ಯಾಂಕ್ ಆಫ್ ಬರೋಡಾದಲ್ಲಿದೆ ಹಲವು ಉದ್ಯೋಗ, ಆಸಕ್ತರು ಅಪ್ಲೈ ಮಾಡಿ!
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು ನಾನು ವಿಧಾನ ಪರಿಷತ್ ಚೇರ್ಮನ್ ಆದ್ದರಿಂದ ನಾನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಪರಿಷತ್ ಸದಸ್ಯ ಸಿಟಿ ರವಿ ಬಳಸಿದರೆನ್ನಲಾಗುತ್ತಿರುವ ಅವಾಚ್ಯ ಪದದ ಪ್ರಕರಣವನ್ನು ತಾನು ಇಷ್ಟಕ್ಕೆ ಮುಗಿಸಿ ಮುಂದೆ ಸಾಗಬೇಕೆಂದು ಬಯಸಿದ್ದೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಚರ್ಚೆಯೂ ಮಾಡಿದ್ದೆ,
ಅದರೆ ಎಲ್ಲರೂ ತಮ್ಮ ತಮ್ಮ ನಿಲುವುಗಳಿಗೆ ಬದ್ಧರಾಗಿರುವುದರಿಂದ ತಾವೇನೂ ಮಾಡಲಾಗುತ್ತಿಲ್ಲ ಎಂದು ಅಸಹಾಯಕತೆಯನ್ನು ಪ್ರದರ್ಶಿಸಿದರು. ಪ್ರಕರಣ ಈಗ ರಾಜಕೀಯವಾಗಿ ಮಾರ್ಪಟ್ಟಿರುವುದರಿಂದ ತಮ್ಮ ಆತ್ಮಸಾಕ್ಷಿಗೆ ವಿರುದ್ಧವಾಗಿ ಯಾರ ಪಕ್ಷವನ್ನೂ ವಹಿಸಲಾರೆ, ಆ ಪೀಠದ ಮೇಲೆ ಆಸೀನನಾದಾಗ ತನಗೆ ಎಲ್ಲ ಸದಸ್ಯರು ಒಂದೇ ಎಂದು ಹೊರಟ್ಟಿ ಹೇಳಿದರು.