ಹುಬ್ಬಳ್ಳಿ: ಅದು ಕೇಂದ್ರ ಸರ್ಕಾರದ ಮಹತ್ವದ ಯೋಜನೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸಿನ ಯೋಜನೆ. ಆದರೆ ಈ ಯೋಜನೆಯಲ್ಲಿಯೇ ಬಹುದೊಡ್ಡ ಗೋಲ್ ಮಾಲ್ ನಡೆದಿದೆ. ಫಲಾನುಭವಿಗಳ ಹೆಸರಲ್ಲಿಯೇ ಏಜೆನ್ಸಿಗಳು ಕಳ್ಳ ದಂಧೆ ನಡೆಸಿವೆ. ಅಷ್ಟಕ್ಕೂ ಏನಿದು ದಂಧೆ ಅಂತೀರಾ ಇದು ನಾವು ಬಿಚ್ಚು ಇಡತಾ ಇದ್ದೇವೆ ಸ್ಪೋಟಕ ಮಾಹಿತಿ.
ಪ್ರಧಾನಮಂತ್ರಿ ಉಜ್ವಲ ಯೋಜನೆಯಿಂದ ಮನೆ ಮನೆಗೆ ಗ್ಯಾಸ್ ಬರುತ್ತೇ ಹೊಗೆ ಮುಕ್ತ ಅಡುಗೆ ಮನೆ ಆಗುತ್ತೇ ಎಂದುಕೊಂಡವರಿಗೆ ಈಗ ಬರಸಿಡಿಲು ಬಡೆದಂತಾಗಿದೆ. ಹುಬ್ಬಳ್ಳಿ ತಾಲ್ಲೂಕಿನ ಹಳ್ಯಾಳ ಗ್ರಾಮದ ಹತ್ತು ಜನ ಫಲಾನುಭವಿಗಳಿಗೆ ಏಳು ವರ್ಷದಿಂದ ಒಂದೇ ಒಂದು ಗ್ಯಾಸ್ ಸಿಲಿಂಡರ್ ಬಂದಿಲ್ಲ. ಆದರೆ ಇವರ ಹೆಸರಲ್ಲಿ ಏಳು ವರ್ಷದಿಂದ ಸಿಲಿಂಡರ್ ಮಾತ್ರ ಅನಧಿಕೃತವಾಗಿ ಡೆಲಿವರಿ ಆಗಿವೆ. ಅರ್ಹ ಫಲಾನುಭವಿಗಳ ಹೆಸರಲ್ಲಿ ಅನಧಿಕೃತವಾಗಿ ಬುಕಿಂಗ್ ಆಗಿದೆ. ಅಲ್ಲದೇ ಬ್ಯಾಂಕ್ ಖಾತೆಗೆ ಸಬ್ಸಿಡಿ ಕೂಡ ಜಮಾ ಆಗಿದ್ದು, ಸಿಲಿಂಡರ್ ಮಾತ್ರ ಕೈಸೇರಿಲ್ಲ. ಆದರೆ ಸಿಲಿಂಡರ್ ಮಾತ್ರ ಕಳ್ಳ ಸಂತೆಯಲ್ಲಿ ಮಾರಾಟವಾಗಿದ್ದಂತೂ ಸತ್ಯ. ಈಗಾಗಲೇ ಸಾಕಷ್ಟು ಬಾರಿ ಓಡಾಡಿದ್ದರೂ ಕೂಡ ಹಳ್ಯಾಳ ಗ್ರಾಮದ ಫಲಾನುಭವಿಗಳಿಗೆ ಮಾತ್ರ ನ್ಯಾಯ ಸಿಕ್ಕಿಲ್ಲ.
ಇನ್ನೂ ಏಳು ವರ್ಷಗಳಿಂದ ಏಜೆನ್ಸಿಗಳ ಬ್ಲಾಕ್ ದಂಧೆಯಿಂದ ಫಲಾನುಭವಿಗಳು ಹೊಗೆಯಲ್ಲಿಯೇ ಜೀವನ ನಡೆಸುವಂತಾಗಿದ್ದು, ಪ್ರಧಾನಮಂತ್ರಿ ಉಜ್ವಲ ಯೋಜನೆಯಲ್ಲಿ ಬಹುದೊಡ್ಡ ಗೋಲ್ ಮಾಲ್ ನಡೆದಿದ್ದು, ಈ ಬಗ್ಗೆ ಫಲಾನುಭವಿಗಳೇ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.