ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ವಿವಿಧ ಗ್ರಾಮಗಳಲ್ಲಿ ರೈತರ ಬೆಳೆದ ಕಡಲೆ ಬೆಳೆಗೆ ಸಿಡಿ ರೋಗ ಹೆಚ್ಚ ನೂ, ಹೆಚ್ಚು ಕಂಡುಬಂದಿದ್ದು ರೈತರು ಆತಂಕದಲ್ಲಿ ಇದ್ದಾರೆ ಹೌದು ಕಳೆದ ವರ್ಷ ಅನಾವೃಷ್ಟಿ ಯಿಂದ ಬೆಳೆ ಬಾರದೆ ಕಂಗಟ್ಟಿರುವ ರೈತರು ಈ ವರ್ಷ ಅತಿ ಹೆಚ್ಚು ಕಡಲೆ ಬೆಳೆ ಬೆಳೆದಿದ್ದು ಬೆಳೆಗೆ ಸಿಡಿರೋಗ ಕಂಡುಬಂದಿದ್ದು ಔಷಧಿ ಸಿಂಪರಣೆ ಮಾಡಿದರು ಹತೋಟಿಗೆ ಬಾರದೆ ದಿನ ದಿನ ಕಾಯಿ ಕಚ್ಚುವ ಗಿಡ ಸಮೇತ ಒಣಗುತ್ತಿದೆ.
ಇದರಿಂದ ಆತಂಕಗೊಂಡ ರೈತರು ಬೆಳೆ ಉಳಿಸಿಕೊಳ್ಳಲು ಧಾರವಾಡ ಕೃಷಿ ಇಲಾಖೆಯ ವಿಜ್ಞಾನಿಗಳು ಹಾಗೂ ಕೃಷಿ ನಿರ್ದೇಶಕರು ಕುಂದಗೋಳ ತಾಲೂಕ ಕೃಷಿ ನಿರ್ದೇಶಕರು ಸೇರಿದಂತೆ ಹಲವಾರು ಅಧಿಕಾರಿಗಳು ಈಗಾಗಲೇ ಬೆಳೆಯನ್ನು ವೀಕ್ಷಿಸಿದ್ದರು ಆದರೆ ಅವರು ಇದಕ್ಕೆ ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದರು ಇದೀಗ ಮತ್ತೆ ಹೆಚ್ಚು ಸಿಡಿರೋಗ ಕಾಣುತ್ತಿದೆ ಸರಕಾರವು ಕಣ್ಣ ಮುಚ್ಚಿ ಕುಳಿತಿದೆ ಹಿಂಗಾರು ಮುಂಗಾರಿನ ಬೆಳೆ ವಿಮೆ ಬಿಡುಗಡೆ ಮಾಡಬೇಕು ಅತಿವೃಷ್ಟಿಯಿಂದ ಮುಂಗಾರು ಬೆಳೆ ಹಾಳಾಗಿದ್ದು,
Dr.Manmohan Singh: ಲೋಕಸಭೆ ಚುನಾವಣೆಯಲ್ಲಿ ಗೆಲ್ಲದಿದ್ರೂ 2 ಬಾರಿ ಪ್ರಧಾನಿಯಾದ ಮನಮೋಹನ ಸಿಂಗ್!
ಶೀಘ್ರದಲ್ಲಿ ಬೆಳೆ ಪರಿಹಾರ ಕೊಡುವದಾಗಿ ಭರವಸೆ ನೀಡಿದ್ದರು ಆದರೆ ಇಲ್ಲಿಯವರೆಗೂ ಯಾವ ಒಬ್ಬ ರೈತರಿಗೂ ಬೆಳೆ ವಿಮೆ ಹಾಗೂ ಅತಿವೃಷ್ಟಿಯಿಂದ ಹಾನಿಯಾದ ಬೆಳೆ ಪರಿಹಾರವೂ ಬಂದಿಲ್ಲ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ರೈತರ ನೆರವಿಗೆ ದಾವಿಸಬೇಕೆಂದು ರತ್ನ ಭಾರತ ರೈತ ಸಮಾಜದ ತಾಲೂಕ ಅಧ್ಯಕ್ಷರಾದ ಬಸವರಾಜ ಯೋಗಪ್ಪನವರ ಚನ್ನಬಸಪ್ಪ ಸಿದ್ದುನವರ ರಾಜು ಮಲ್ಲಿಗವಾಡ ಬಸವರಾಜ ಹರವಿ ನಾಗಪ್ಪ ಸಿದ್ದುನವರ ಮುಕುಂ ಸಾಬ್ ರಾಟಿಮುನಿ ಖಾದರ್ ಸಾಬ್ ನದಾಫ್ ತಿರ್ಕಪ್ಪ ಯೋಗಪ್ಪನವರ ಮಂಜುನಾಥ ಮಲ್ಲಿಗವಾಡ ಈ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ