ಹುಬ್ಬಳ್ಳಿ: ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದ ನೂತನ ವ್ಯವಸ್ಥಾಪಕರಾಗಿ ಬೇಲಾ ಮೀನಾ ಅವರು ಇಂದು ಅಧಿಕಾರ ಸ್ವೀಕರಿಸಿದರು.
ಬಿಬಿಎಂಪಿ ಕಸದ ಲಾರಿ ಡೆಡ್ಲಿ ಆಕ್ಸಿಡೆಂಟ್ ಗೆ ಮತ್ತೆರಡು ಬಲಿ: ಹಿಂಬದಿ ಚಕ್ರಕ್ಕೆ ಸಿಲುಕಿ ಪ್ರಾಣ ಬಿಟ್ಟ ಸಹೋದರಿಯರು!
1996ನೇ ಬ್ಯಾಚ್ನ ಭಾರತೀಯ ರೈಲ್ವೆ ಸಂಚಾರ ಸೇವೆಯ (ಐಆರ್ಟಿಎಸ್) ಅಧಿಕಾರಿಯಾಗಿರುವ ಅವರು, 1997ರ ಸೆ. 4ರಂದು ಭಾರತೀಯ ರೈಲ್ವೆಯಲ್ಲಿ ತಮ್ಮ ವೃತ್ತಿ ಆರಂಭ ಮಾಡಿದರು. 1999 ರಿಂದ 2017ರ ವರೆಗೆ ಮುಂಬೈ ಕೇಂದ್ರಿತ ಪಶ್ಚಿಮ ರೈಲ್ವೆಯ ವಾಣಿಜ್ಯ ಹಾಗೂ ಪರಿಚಾಲನಾ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದಾರೆ.
27 ವರ್ಷ ಸೇವಾ ಅನುಭವ ಹೊಂದಿರುವ ಬೇಲಾ ಮೀನಾ ಅವರು ಈ ಹಿಂದೆ ಹಿರಿಯ ವಾಣಿಜ್ಯ ವ್ಯವಸ್ಥಾಪಕಿ, ಮುಖ್ಯ ಯೋಜನಾ ವ್ಯವಸ್ಥಾಪಕಿ, ಹಿರಿಯ ಟ್ರಾನ್ಸ್ಪೋರ್ಟೇಷನ್ ವ್ಯವಸ್ಥಾಪಕಿ ಹಾಗೂ ಶುಲ್ಕರಹಿತ ಆದಾಯ ಮತ್ತು ಪ್ರಯಾಣಿಕರ ಮಾರುಕಟ್ಟೆ ವಿಭಾಗದಲ್ಲಿ ಮುಖ್ಯ ವಾಣಿಜ್ಯ ವ್ಯವಸ್ಥಾಪಕಿಯಾಗಿ ಕೆಲಸ ಮಾಡಿದ್ದಾರೆ.