ಹುಬ್ಬಳ್ಳಿ: ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಪಂಚ ಟ್ರಸ್ಟ್ ದುರ್ಗಾದೇವಿ ದೇವಸ್ಥಾನದ ದುರ್ಗಾದೇವಿ ಸಹಸ್ರ ಚಂಡಿಯಾಗ ನಿಮಿತ್ತ ಫೆ.೭ ರಿಂದ ೧೧ ರವರೆಗೆ ದೇವಸ್ಥಾನದಲ್ಲಿ ೧೭ ಸೇವೆಗಳ ಸಮರ್ಪಣೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಟ್ರಸ್ಟ್ ಗೌರವ ಕಾರ್ಯದರ್ಶಿ ಭಾಸ್ಕರ ಜಿತೂರಿ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.೭ ರಂದು ಬೆಳಿಗ್ಗೆ ೯.೧೦ಕ್ಕೆ ೫೦೪ ಮಹಿಳೆಯರಿಂದ ಕುಂಭ ಮೆರವಣಿಗೆಯು ದ್ಯಾಮವ್ವ ದೇವಿ, ದುರ್ಗಾ ದೇವಿ ಮಾತೆಯರ ಪಾದುಕೆಗಳು, ಕೂರ್ಮ ದೇವರ ಮೂರ್ತಿ, ಗಣಪತಿ ದೇವರ ಮೂರ್ತಿ, ನಾಗದೇವರ ಮೂರ್ತಿ, ಬಾಲ ಮಾರುತಿ ಮೂರ್ತಿ, ಕಲ್ಲಿನ ಧ್ವಜ ಸ್ತಂಭ ಹಾಗೂ ಬೆಳ್ಳಿಯ ಪಲ್ಲಕ್ಕಿಯೊಂದಿಗೆ ನಡೆಯಲಿದೆ. ಮೆರವಣಿಗೆಯು ದಾಜಿಬಾನಪೇಟೆ ದುರ್ಗಾದೇವಿ ದೇವಸ್ಥಾನದಿಂದ ಆರಂಭವಾಗಿ ಲಕ್ಷಿö್ಮÃ ದೇವಸ್ಥಾನ, ಅಂಚಟಗೇರಿ ಓಣಿ ಬನಶಂಕರಿ ದೇವಸ್ಥಾನ, ಮಹಾವೀರ ಓಣಿ ಮೂಲಕ ಸಂಚರಿಸಿ ಮರಳಿ ದೇವಸ್ಥಾನಕ್ಕೆ ತಲುಪಲಿದೆ ಎಂದರು.
ಅAದು ಮಧ್ಯಾಹ್ನ ೧.೩೦ಕ್ಕೆ ಮಹಾಪ್ರಸಾದ ನೆರವೇರಲಿದೆ. ಸಂಜೆ ೫ಕ್ಕೆ ದ್ಯಾಮವ್ವ ಹಾಗೂ ದುರ್ಗಾ ದೇವಿಯರ ಪಾದುಕೆಗಳು, ಕೂರ್ಮ ಮೂರ್ತಿ, ಗಣಪತಿ ಮೂರ್ತಿ, ನಾಗದೇವರ ಮೂರ್ತಿ, ಬಾಲ ಮಾರುತಿ ಮೂರ್ತಿ, ಕಲ್ಲಿನ ಧ್ವಜಸ್ತಂಭ, ತುಳಸಿ ಕಟ್ಟೆ ದೈವಿ ಶಕ್ತಿಗಳ ಜಲಾಧಿವಾಸ, ಧಾನ್ಯಾದಿವಾಸ, ಪುಷ್ಪಾಧಿವಾಸ, ಶಯ್ಯಾಧಿವಾಸ ಹಾಗೂ ಬೆಳ್ಳಿ ಪಲ್ಲಕ್ಕಿಯ ಶುದ್ಧೀಕರಣ ಸಂಸ್ಕಾರ ಸೇರಿದಂತೆ ಇತರೆ ಧಾರ್ಮಿಕಕಾರ್ಯಕ್ರಮಗಳು, ಪೂಜೆ ಪುನಸ್ಕಾರಗಳು ನೆರವೇರಲಿವೆ ಎಂದು ಹೇಳಿದರು.
ಫೆ.೮ ರಂದು ಬೆಳಿಗ್ಗೆ ೮ ರಿಂದ ಮಹಾಗಣಪತಿ ಪೂಜೆ, ಆವಾಹಿತ ಎಲ್ಲ ದೇವತೆಗಳ ಪೂಜೆ, ವೇದಸೂಕ್ತಗಳ ಪಾರಾಯಣದೊಂದಿಗೆ ಇತರೆ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಲಿವೆ. ಸಂಜೆ ೫ಕ್ಕೆ ಲಲಿತಾ ಸಹಸ್ರನಾಮ ಪಠಣ, ದುರ್ಗಾಸಪ್ತಶತೀ ಪಾರಾಯಣ ನಡೆಯಲಿದೆ ಎಂದರು.
ಫೆ.೯ ರಂದು ಬೆಳಿಗ್ಗೆ ೬ ರಿಂದ ಮಹಾಗಣಪತಿ ಪೂಜೆ, ಆವಾಹಿತ ಎಲ್ಲ ದೇವತೆಗಳ ಪುರ್ನ ಪೂಜೆ, ಪ್ರಧಾನ ದೇವತೆಗಳಾದ ಗಣಪತಿ, ಬಾಲ ಮಾರುತಿ, ನಾಗ ದೇವತಾ, ಕೂರ್ಮದೇವತಾ, ಪಾದುಕಾದೇವತಾ, ಧ್ವಜಸ್ತಂಭ ದೇವತಾ, ಬೃಂದಾವನ ದೇವತಾ ಮತ್ತು ಪಲ್ಲಕ್ಕಿ ದೇವತೆಗಳ ಹೋಮ, ತತ್ವಕಲಾ, ಜೀವಕಲಾದಿಗಳ ಹೋಮ, ಸರ್ವತೋಭದ್ರಮಂಡಲ ದೇವತೆಗಳ ಹೋಮ ನಡೆಯಲಿದ್ದು, ಸಂಜೆ ೫ಕ್ಕೆ ಸಹಸ್ರಾರ್ಜುನ ದೇವತಾ ಆವಾಹನ, ಪೂಜನ ಮತ್ತು ಹೋಮ ನಡೆಯಲಿದೆ ಎಂದು ಹೇಳಿದರು.
ಫೆ.೧೦ ರಂದು ಬೆಳಿಗ್ಗೆ ೬ ರಿಂದ ದ್ಯಾಮವ್ವ ದೇವಿ, ದುರ್ಗಾದೇವಿ ಮಾತೆಯರ ಪಾದುಕೆಗಳ, ಕೂರ್ಮ ದೇವರ ಮೂರ್ತಿ, ಗಣಪತಿ ದೇವರ ಮೂರ್ತಿ, ನಾಗದೇವರ ಮೂರ್ತಿ, ಬಾಲ ಮಾರುತಿ ದೇವರ ಮೂರ್ತಿ, ಕಲ್ಲಿನ ಧ್ವಜ ಸ್ತಂಭ, ತುಳಸಿ ಕಟ್ಟೆ ಪ್ರತಿಷ್ಠಾಪನೆ ಹಾಗೂ ಪ್ರತಿಷ್ಠಾಂಗ ಹೋಮ, ಹವನಾದಿ ಪೂಜೆಗಳು ವೇದಮೂರ್ತಿ ರವೀಂದ್ರಾಚಾರ್ಯ ಮತ್ತು ಶಿಷ್ಯವೃಂದದಿAದ ನೆರವೇರಲಿವೆ. ಬೆಳಿಗ್ಗೆ ೧೧ಕ್ಕೆ ಸಹಸ್ರ ಚಂಡಿಕಾಯಾಗ ನಿಮಿತ್ತ ದುರ್ಗಾದೇವಿ ದೇವಸ್ಥಾನದಲ್ಲಿ ೧೭ ಸೇವೆಗಳ ಸಮರ್ಪಣೆಗೆ ಸಹಕರಿಸಿರುವ ಗಣ್ಯರಿಗೆ ಸತ್ಕಾರ ಸಮಾರಂಭ ನಡೆಯಲಿದೆ ಎಂದರು.
ಸಮಾರAಭವನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸುವರು. ಮೂರುಸಾವಿರ ಮಠ ಪೀಠಾಧ್ಯಕ್ಷ ಡಾ. ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ ಶೆಟ್ಟರ್, ಶಾಸಕರಾದ ಪ್ರಸಾದ ಅಬ್ಬಯ್ಯ, ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಪ್ರದೀಪ ಶೆಟ್ಟರ್, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಪಾಲ್ಗೊಳ್ಳುವರು. ಅಖಿಲ ಭಾರತ ಎಸ್ಎಸ್ಕೆ ಸಮಾಜದ ಅಧ್ಯಕ್ಷ ಶ್ರೀನಿವಾಸ ಖೋಡೆ ನಾಮಫಲಕ ಅನಾವರಣ ಮಾಡುವರು. ಎಸ್ಎಸ್ಕೆ ಪಂಚ ಟ್ರಸ್ಟ್ ದುರ್ಗಾದೇವಿ ದೇವಸ್ಥಾನದ ಮುಖ್ಯ ಧರ್ಮದರ್ಶಿ ತಾರಸಾ ಧೋಂಗಡಿ ಅಧ್ಯಕ್ಷತೆ ವಹಿಸುವರು. ಫೆ.೭ ರಿಂದ ೧೧ ರವರೆಗೆ ಸಂಜೆ ೬ ರಿಂದ ರಾತ್ರಿ ೯ ರವರೆಗೆ ದುರ್ಗಾದೇವಿ ಶಾಲೆ ಆವರಣದಲ್ಲಿ ರಾಮಕಥಾ ಹಾಗೂ ದುರ್ಗಾಮಾತಾ ಕಥಾ ಪ್ರವಚನವನ್ನು ಅಯೋಧ್ಯೆಯ ಪ್ರೇಮ್ ನಾರಾಯಣ ಗುರೂಜಿ ನೀಡುವರು ಎಂದು ಹೇಳಿದರು.
ಫೆ.೧೧ ರಂದು ಬೆಳಿಗ್ಗೆ ೧೧ಕ್ಕೆ ನೂತನ ಬೆಳ್ಳಿ ಪಲ್ಲಕ್ಕಿಯಲ್ಲಿ ದೇವಿರ ಪಲ್ಲಕ್ಕಿ ಸೇವೆ ನಡೆಯಲಿದೆ ಎಂದರು.
ಎಸ್ಎಸ್ಕೆ ಪಂಚ ಟ್ರಸ್ಟ್ ದುರ್ಗಾದೇವಿ ದೇವಸ್ಥಾನದ ಮುಖ್ಯ ಧರ್ಮದರ್ಶಿ ತಾರಸಾ ಧೋಂಗಡಿ, ಜಂಟಿ ಮುಖ್ಯ ಧರ್ಮದರ್ಶಿ ನೀಲಕಂಠ ಜಡಿ, ಕೋಶಾಧಿಕಾರಿ ಎ.ಕೆ. ಕಲಬಿರ್ಗಿ, ಧರ್ಮದರ್ಶಿಗಳಾದ ಎನ್.ಆರ್. ಹಬೀಬ್, ಎ.ಪಿ. ಪವಾರ ಇದ್ದರು.