ಹುಬ್ಬಳ್ಳಿ; ಧಾರವಾಡ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಒಣ ಮೆಣಸಿನಕಾಯಿ ಬೆಳೆಗಾರರು ದರ ಕುಸಿತದಿಂದ ಕಂಗಾಲು ಆಗಿದ್ದಾರೆ. ಮೆಣಸಿನಕಾಯಿ ಬೆಳೆದಿರುವ ರೈತರು ಹಾಗೂ ದಾಸ್ತಾನು ಮಾಡಿಕೊಂಡಿರುವ ಶೀತಲಗೃಹಗಳ ಮಾಲೀಕರು, ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಾರಿ ಜಿಲ್ಲೆಯ ಸುಮಾರು ಒಂದು ಲಕ್ಷ ಎಕರೆಯಲ್ಲಿ ಮೆಣಸಿನಕಾಯಿ ಬೆಳೆಯಲಾಗಿದೆ. ಪ್ರತಿ ಎಕರೆಗೆ 18ರಿಂದ 20 ಕ್ವಿಂಟಲ್ ಇಳುವರಿ ಬರುವ ನಿರೀಕ್ಷೆ ಇತ್ತು. ಆದರೆ, ಕಪ್ಪುಚುಕ್ಕೆ ರೋಗದಿಂದ ಶೇ 30ರಷ್ಟು ಬೆಳೆ ಹಾನಿಗೀಡಾಗಿದೆ.
ಸದ್ಯ ಮಾರುಕಟ್ಟೆಯಲ್ಲಿ ಕ್ವಿಂಟಲ್ಗೆ ₹9 ಸಾವಿರದಿಂದ ₹15 ಸಾವಿರದವರೆಗೆ ಬೆಲೆ ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ ₹20 ಸಾವಿರದಿಂದ ₹25 ಸಾವಿರದ ವರೆಗೆ ಬೆಲೆ ಇತ್ತು. ಸೂಕ್ತ ಬೆಲೆ ದೊರೆಯದ ಕಾರಣ 2023–24ನೇ ಸಾಲಿನಡಿ ಬೆಳೆದಿದ್ದ ಸುಮಾರು 15 ಲಕ್ಷ ಚೀಲದಷ್ಟು ಮೆಣಸಿನಕಾಯಿಯನ್ನು ರೈತರು ಶೀತಲಗೃಹಗಳಲ್ಲಿ ದಾಸ್ತಾನು ಇಟ್ಟಿದ್ದಾರೆ. ದಾಸ್ತಾನು ವೇಳೆ ಕ್ವಿಂಟಲ್ಗೆ ₹20 ಸಾವಿರದಿಂದ ₹25 ಸಾವಿರದವರೆಗೆ ಬೆಲೆ ಇತ್ತು.
Chanakya Niti: ವಿವಾಹಿತ ಪುರುಷರು ಬೇರೆ ಮಹಿಳೆಯಗೆ ಆಕರ್ಷಿತರಾಗೋದ್ಯಾಕೆ..? ಚಾಣಕ್ಯ ನೀಡಿದ 5 ಕಾರಣಗಳು ಇಲ್ಲಿದೆ
ಇದನ್ನು ನಂಬಿಕೊಂಡು ರೈತರು ಬ್ಯಾಂಕ್ಗಳಲ್ಲಿ ಸಾಲ ಪಡೆದಿದ್ದಾರೆ. ಈಗ ಹಳೆಯ ಮೆಣಸಿನಕಾಯಿ ಬೆಲೆಯು ಕ್ವಿಂಟಲ್ಗೆ ₹7,500ರಿಂದ ₹9 ಸಾವಿರ ಇದೆ. ಹಾಗಾಗಿ, ರೈತರು ದಾಸ್ತಾನಿಟ್ಟಿದ್ದ ಸರಕು ಏನಾಗಿದೆ ಎಂದೂ ವಿಚಾರಿಸುತ್ತಿಲ್ಲ. ಇದು ಶೀತಲಗೃಹಗಳ ಮಾಲೀಕರನ್ನು ಆತಂಕಕ್ಕೆ ದೂಡಿದೆ. ‘ವಿದ್ಯುತ್ ಬಿಲ್ ಕಟ್ಟಲು, ಕೆಲಸಗಾರರಿಗೆ ಸಂಬಳ ನೀಡಲೂ ಆಗದೆ ಒದ್ದಾಡುತ್ತಿದ್ದೇವೆ’ ಎನ್ನುತ್ತಾರೆ ಶೀತಲಗೃಹಗಳ ಮಾಲೀಕರ ಅಳಲಾಗಿದೆ.
ಈ ಬಾರಿ ಇಳುವರಿ ಕುಸಿದಿದೆ. ಆದರೆ, ಆಂಧ್ರಪ್ರದೇಶದ ಗುಂಟೂರು, ತೆಲಂಗಾಣದ ವಾರಂಗಲ್, ಭದ್ರಾಚಲಂನಲ್ಲಿಯೂ ಇಳುವರಿ ಉತ್ತಮವಾಗಿಲ್ಲ. ಹಾಗಾಗಿ, ಮುಂದಿನ ದಿನಗಳಲ್ಲಿ ಬೆಲೆ ಏರಿಕೆಯಾಗಲಿದೆ ಎಂಬುದು ಶೀತಲಗೃಹಗಳ ಮಾಲೀಕರ ನಿರೀಕ್ಷೆ. ಹಾವೇರಿ ಜಿಲ್ಲೆಯ ಬ್ಯಾಡಗಿ ಎಪಿಎಂಸಿಗೆ ರೈತರು ಮಾರಾಟಕ್ಕೆ ತಂದಿರುವ ಒಣ ಮೆಣಸಿನಕಾಯಿ
ಈ ಬಾರಿ ಹೆಚ್ಚು ಮಳೆ ಸುರಿಯಿತು. ಇದರಿಂದ ಇಳುವರಿ ಕಡಿಮೆಯಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಒಣಮೆಣಸಿನಕಾಯಿ ದರ ಏರಿಕೆಯಾಗುವ ನಿರೀಕ್ಷೆಯಿದೆ
ಬಸವರಾಜ ಹರವಿ ಬೆಳೆಗಾರ ಕುಂದಗೋಳ ಮಾರುಕಟ್ಟೆಯತ್ತ ಸುಳಿಯದ ಕಂಪನಿಗಳು.
ಎಪಿಎಂಸಿಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮೆಣಸಿನಕಾಯಿ ಆವಕ ಹಾಗೂ ದರದಲ್ಲಿ ಶೇ 50ರಷ್ಟು ಇಳಿಕೆಯಾಗಿದ್ದು ಬ್ಯಾಡಗಿ ಮೂಲ ತಳಿಗೆ ಹೆಚ್ಚು ಬೆಲೆ ಸಿಗುತ್ತಿತ್ತು. ಆದರೆ ಈ ಬಾರಿ ಹವಾಮಾನ ವೈಪರೀತ್ಯದಿಂದ ಇಳುವರಿ ಕಡಿಮೆಯಾಗಿದ್ದು ಮಾರುಕಟ್ಟೆಯಲ್ಲಿ ಬೇಡಿಕೆಯೂ ಕುಸಿದಿದೆ. ರೈತರು ಮೆಣಸಿನಕಾಯಿ ಕೃಷಿ ಮಾಡುವಾಗ ಹೇರಳವಾಗಿ ರಸಗೊಬ್ಬರ ಮತ್ತು ಕೀಟನಾಶಕ ಬಳಸುತ್ತಾರೆ.
ಕೀಟನಾಶಕ ಅಂಶವು ಮೆಣಸಿನಕಾಯಿಯಲ್ಲಿ ಬೆರೆತು ಹೋಗುತ್ತದೆ. ಮೆಣಸಿನಕಾಯಿ ಸೇರಿ ಆಹಾರ ಪದಾರ್ಥಗಳಲ್ಲಿ ಇರಬೇಕಾದ ಕೀಟನಾಶಕ ಅವಶೇಷಗಳ ಪ್ರಮಾಣದ ಮಿತಿಯನ್ನು ಭಾರತದ ಆಹಾರ ಸುರಕ್ಷತೆ ಗುಣಮಟ್ಟ ಪ್ರಾಧಿಕಾರವು (ಎಫ್ಎಸ್ಎಸ್ಎಐ) ನಿಗದಿಪಡಿಸಿದೆ. ನಿಗದಿತ ಮಿತಿಗಿಂತಲೂ ಅಧಿಕ ಕೀಟನಾಶಕ ಅಂಶ ಇರುವುದರಿಂದ ಸಂಬಾರ ಪದಾರ್ಥಗಳನ್ನು ತಯಾರಿಸುವ ಕಂಪನಿಗಳು ಮೆಣಸಿನಕಾಯಿ ಕೊಳ್ಳಲು ಜಿಲ್ಲೆಯತ್ತ ರುತ್ತಿಲ್ಲ ಎಂದು ಹೇಳಲಾಗಿದೆ. ಇದೇ ಬೇಡಿಕೆ ಕುಸಿತಕ್ಕೆ ಕಾರಣವಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.
ರಾಜ್ಯದ ಬ್ಯಾಡಗಿ ಹುಬ್ಬಳ್ಳಿ ಬಳ್ಳಾರಿ ಕಲಬುರಗಿ ಶಹಾಪುರ ಸೇರಿ ಆಂಧ್ರಪ್ರದೇಶದ ಶೀತಲಗೃಹಗಳಲ್ಲಿ ವರ್ತಕರು ದಾಸ್ತಾನಿಟ್ಟಿರುವ ಮೆಣಸಿನಕಾಯಿ ಇನ್ನೂ ಮಾರಾಟವಾಗಿಲ್ಲ. ಹೆಚ್ಚಿನ ಬೆಲೆಗೆ ಖರೀದಿಸಿರುವ ಈ ಮೆಣಸಿನಕಾಯಿಯ ಮಾರಾಟದಲ್ಲಿ ತೊಡಗಿದ್ದಾರೆ. ಹಾಗಾಗಿ ಹೊಸ ಉತ್ಪನ್ನದ ಖರೀದಿಗೆ ಆಸಕ್ತಿ ತೋರುತ್ತಿಲ್ಲ’ ಎಂದು ವರ್ತಕರ ಸಂಘದ ಗೌರವ ಕಾರ್ಯದರ್ಶಿ ವಿ.ಎಸ್. ಮೋರಿಗೇರಿ ಹೇಳುತ್ತಾರೆ.