ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿ ವ್ಯಾಪ್ತಿ ಹೊಂದಿರುವ ಬಿಎನ್ಐ (ಬಿಸಿನೆಸ್ ನೆಟ್ವರ್ಕ್ ಇಂಟರ್ನ್ಯಾಷನಲ್) ವತಿಯಿಂದ ನಗರದ ಬಿ.ಡಿ.ಕೆ. ಮೈದಾನದಲ್ಲಿ ಜ.ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು.
ಬಿಎನ್ಐ ಸಂಯೋಜಕ ಅರಣ ಅಗರವಾಲ, 9 ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿದ್ದು ಉದ್ಘಾಟನೆಯನ್ನ ಶಾಸಕ ಅಬ್ಬಯ್ಯಾ ಪ್ರಸಾದ್ ನಡೆಸಿಕೊಟ್ಟರು.
India T20 Squad: ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಪ್ರಕಟ!
ಬಿಎನ್ಐನಲ್ಲಿ 450 ಸದಸ್ಯರು ಇದ್ದು, ಎಲ್ಲ ಸದಸ್ಯರ ಕುಟುಂಬದವರು ಕ್ರಿಕೆಟ್ ಪಂದ್ಯಾವಳಿ ಉತ್ಸವದಲ್ಲಿ ಭಾಗವಹಿಸುವರು. ಕ್ರೀಡಾಸಕ್ತ ಯುವಕರಿಗೆ ಕ್ರಿಕೆಟ್ ಕಿಟ್, ಕೇರಂ ಹಾಗೂ ಚೆಸ್ ಬೋರ್ಡ್ಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಬಿಎನ್ಐ ಕಳೆದ 6 ವರ್ಷಗಳಲ್ಲಿ 800 ಕೋಟಿ ರೂ. ವಹಿವಾಟು ಮಾಡಿದೆ. ಬಿಎನ್ಐ ಹುಬ್ಬಳ್ಳಿಯಲ್ಲಿ ಮೊದಲ ಶಾಖೆ ಪ್ರಾರಂಭಿಸಿದ ನಂತರ, ಹುಬ್ಬಳ್ಳಿ, ಧಾರವಾಡ ಮತ್ತು ಬೆಳಗಾವಿಯಲ್ಲಿ ಒಟ್ಟು ಒಂಬತ್ತು ಶಾಖೆಗಳಿಗೆ ವಿಸ್ತರಿಸಿಕೊಂಡಿದೆ