ಹುಬ್ಬಳ್ಳಿ ; ಇತ್ತೀಚೆಗೆ ಜಿಲ್ಲಾ ಕೃಷಿಕ ಸಮಾಜಕ್ಕೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಗೊಂಡಿದ್ದ ಹುಬ್ಬಳ್ಳಿ ತಾಲೂಕಿನ ( ಗ್ರಾಮೀಣ ) ಅಧ್ಯಕ್ಷ ಪದಾಧಿಕಾರಿಗಳಿಗೆ ತಾಲೂಕಿನ ನೂಲ್ವಿ ಗ್ರಾಮದಲ್ಲಿರುವ ವಿಠಲ ರುಕ್ಮಿಣಿ ಹರಿಮಂದಿರದ ಆವರಣದಲ್ಲಿ ಗ್ರಾಮದ ಗುರುಹಿರಿಯರ ಸಮ್ಮುಖದಲ್ಲಿ ಸತ್ಕಾರ ಸಮಾರಂಭವನ್ನು ಏರ್ಪಡಿಸಲಾಗಿತ್ತು, ಇದೇ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡರುಗಳು ಜಿಲ್ಲೆಯಲ್ಲಿ ರೈತ ಸಂಘಟನೆಗಳನ್ನು ಬಲಪಡಿಸಬೇಕಾಗಿದ್ದು ಇದಕ್ಕಾಗಿ ಎಲ್ಲ ರೈತ ಕುಲಬಾಂಧವರು ಕೈ ಜೋಡಿಸಬೇಕೆಂದು ಕರೆ ನೀಡಿದರು,
ಅಲ್ಲದೆ ನೂತನವಾಗಿ ಆವಿರೋಧವಾಗಿ ಆಯ್ಕೆಗೊಂಡ ಕೃಷಿ ಸಮಾಜದವರು ರೈತ ಹಾಗೂ ಸರ್ಕಾರದ ಮಧ್ಯೆ ಕೊಂಡಿಯಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕು ಮತ್ತು ರೈತರಿಗೆ ಸರ್ಕಾರದಿಂದ ಸಿಗಬೇಕಾದ ಎಲ್ಲ ಸೌಕರ್ಯಗಳನ್ನು ಪ್ರಮಾಣಿಕವಾಗಿ ಒದಗಿಸಬೇಕೆಂದು ವಿನಂತಿಸಿಕೊಂಡರು, ಸಹಕಾರಿ ರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಹಲವಾರು ವರ್ಷಗಳಿಂದ ಮಾಡಿದ ಸೇವೆಯನ್ನು ಗುರುತಿಸಿ ಇತ್ತೀಚಿಗೆ ಬಾಗಲಕೋಟೆಯಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳಿಂದ ಸಹಕಾರಿ ರತ್ನ ಪ್ರಶಸ್ತಿ ಪಡೆದ ನೊಲವಿ ಗ್ರಾಮದ ಹಿರಿಯರಾದ ಶ್ರೀ ಶಂಕರಗೌಡ ಸಿದ್ದನಗೌಡ ಸೇರಿದಂತೆ ಕೃಷಿಕ ಸಮಾಜದ ಅಧ್ಯಕ್ಷ ( ಗ್ರಾಮೀಣ ) ಗುರುನಾಥ್ ಗೌಡ ಮಾದಾಪುರ ಪದಾಧಿಕಾರಿಗಳಾದ ಬಸಪ್ಪ ನೆಲವಡಿ ಮಲ್ಲನಗೌಡ ಹುತ್ತನಗೌಡರ ವಿರುಪಾಕ್ಷಿ ಗುಡಿಸಲಮನಿ ಜಿಲ್ಲಾ ಪ್ರತಿನಿಧಿ ಮುತ್ತಣ್ಣ ಬಾಡಿನ ಉಮೇಶ್ ಗೌಡ ಹಳ್ಯಾಳ ಮುಖಂಡರುಗಳಾದ ರಾಜಶೇಖರ್ ಮೆಣಸಿನಕಾಯಿ ಬಾಬಾಜಾನ ಮುಧೋಳ ಸೇರಿದಂತೆ ಮುಂತಾದವರಿಗೆ ಸತ್ಕರಿಸಿದರು,
ಸಾನಿಧ್ಯವನ್ನು ಶ್ರೀ ಶಿವಾನಂದ ಹಿರೇಮಠ್ ರವರು ವಹಿಸಿದ್ದರು,ಈ ಕಾರ್ಯಕ್ರಮದಲ್ಲಿಹಿರಿಯರಾದ ಶ್ರೀ ಏನ್ ವಿ ಪಾಟೀಲ ಉಮೇಶ್ ಗೌಡ ಹೊಸಮನಿ ಲಿಂಗರಾಜ್ ಮೆಣಸಿನಕಾಯಿ ಉಮೇಶ್ ಗೌಡ ಪಾಟೀಲ ರಫೀಕ ಮುಲ್ಲಾ ಪಿ ಸಿ ಕಮ್ಮಾರ ಸೇರಿದಂತೆ ನೂಲವಿ ಅಗಡಿ ಹಾಗು ಅರಳಿಕಟ್ಟಿ ಗ್ರಾಮದ ನೂರಾರು ಜನ ರೈತರು ಆಗಮಿಸಿದ್ದರು,