ಹುಬ್ಬಳ್ಳಿ : ವೈಷ್ಣವಿ ಗಂಗೂಬಾಯಿ ಹಾನಗಲ್ ಹೆರಿಟೇಜ್ ಟ್ರಸ್ಟ್ ವತಿಯಿಂದ ಜ.5 ರಂದು ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಹಾಲ್ನಲ್ಲಿ ಗಂಗೂಬಾಯಿ ಹಾನಗಲ್ ಸಂಗೀತ ವಿದ್ಯಾಲಯದ 20ನೇ ವಾರ್ಷಿಕೋತ್ಸವ ಹಾಗೂ ದಿ. ಪಂಡಿತ ಶೇಷಗಿರಿ ಹಾನಗಲ್ ಅವರ ಸ್ಮರಣಾರ್ಥವಾಗಿ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ನ ಮುಖ್ಯಸ್ಥರಾದ ವೈಷ್ಣವಿ ಹಾನಗಲ್ ಅವರು ಈ ಕುರಿತು ಮಾಹಿತಿ ನೀಡಿದರು.
ಅಂದು ಬೆಳಗ್ಗೆ 9.30 ಕ್ಕೆ ಗಂಗೂಬಾಯಿ ಹಾನಗಲ್ ವಿದ್ಯಾಲಯದ ಶಿಷ್ಯವೃಂದದಿಂದ ಗಾಯನ, ಶ್ರೀ ಲಕ್ಷ್ಮೀ ನಾರಾಯನ ಭಟ್ ಗಾಯನ, ಪಂ. ಹರ್ಷದ್ ಕನೆಟ್ಕರ್ ತಬಲಾ ಸೋಲೊ,
ಮಲೇಷ್ಯಾ ಮೂಲದ ಪೌಷ್ಟಿಕಯುಕ್ತ ರಂಬುಟಾನ್ ಹಣ್ಣು ಕರ್ನಾಟಕದಲ್ಲಿಯೂ ಬೆಳೆಯಬಹುದು..! ಹೇಗೆ ಗೊತ್ತಾ..?
ನಂತರ ವೈಷ್ಣವಿ ಹಾನಗಲ್ ಗಾಯನ ಪ್ರಸ್ತುತ ಪಡಿಸಲಿದ್ದಾರೆ. ಸಂಜೆ 5 ಗಂಟೆಗೆ ಗಂಗೂಬಾಯಿ ಹಾನಗಲ್ ಯುವ ಸಂಗೀತೋತ್ಸವ ನಡೆಯಲಿದೆ. ಬೆಳಗಾವಿ ಐಶ್ವರ್ಯ ಯಾರದಿ ಅವರಿಂದ ಗಾಯನ, ಬೆಂಗಳೂರಿನ ಷಡಜ್ ಗೋಡ್ರಿಂಡಿ ಅವರಿಂದ ಕೊಳಲು ವಾದನ, ನಂತರ ಸಿದ್ದಾರ್ಥ ಬೆಳ್ಳಣ್ಣು ಗಾಯನ ಪ್ರಸ್ತುತ ಪಡಿಸಲಿದ್ದಾರೆ ಎಂದು ತಿಳಿಸಿದರು.
ಸಹ ಕಲಾವಿದರಾಗಿ ಮನುಕುಮಾರ ಹಿರೇಮಠ, ರೂಪಕ ಕಲ್ಲೂರ್, ಡಾ. ಶ್ರೀಹರಿ ಡಿಗ್ಗಾವಿ, ಸಂತೋಷ ಹೆಗಡೆ ತಬಲಾ ಸಾಥ್ ನೀಡಲಿದ್ದಾರೆ. ಭರತ್ ಹೆಗೆಡೆ ಹಾಗೂ ಚಿದಂಬರ ಜೋಶಿ ಅವರು ಹಾಮೋನಿಯಂ ಸಾಥ್ ನೀಡಲಿದ್ದಾರೆ. ಈ ಸಂಗೀತ ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಇರಲಿದೆ ಎಂದರು.