ಹುಬ್ಬಳ್ಳಿ: ತಾಲೂಕಿನ ಛಬ್ಬಿ ಗ್ರಾಮದಲ್ಲಿಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಪ್ರಮುಖರು ಕೈ ತೊರೆದು ಭಾರತೀಯ ಜನತಾ ಪಕ್ಷ ಕ್ಕೆ ಸೇರ್ಪಡೆಯಾದರು.
ಬಾಳೆಹಣ್ಣು ತಿಂದ ತಕ್ಷಣ ನೀರು ಕುಡಿಯೋ ಅಭ್ಯಾಸ ಇದ್ರೆ ಇಂದೇ ಬಿಟ್ಟುಬಿಡಿ! ಡೇಂಜರ್, ಡೇಂಜರ್!
ಯಲ್ಲಪ್ಪ ನಾ ದಿವಾನದ , ಹನಮಂತಪ್ಪ ಮ ದಿವಾನದ, ಮಲ್ಲಪ್ಪ ಬಂಡಿವಾಡ ಸೇರಿದಂತೆ ಅನೇಕರು ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ ಭಾರತೀಯ ಜನತಾ ಪಕ್ಷದ ಸಿದ್ದಾಂತಗಳನ್ನು ಒಪ್ಪಿ ಜನಪ್ರೀಯ ಶಾಸಕರಾದ ಎಮ್ ಆರ್ ಪಾಟೀಲ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೋಂಡರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಷಣ್ಮುಖ ಐಹೊಳೆ ,ಜಿಲ್ಲಾ ಪ್ರ ಕಾರ್ಯದರ್ಶಿ ಮಾಂತೇಶ ಶ್ಯಾಗೋಟಿ, ಹಿರಿಯರಾದ ನೇಮಚಂದ್ರ ಬಸಾಪೂರ , ಬಸವರಾಜ ವಡ್ಡರ , ಗ್ರಾಮಪಂಚಾಯತಿ ಸದಸ್ಯರಾದ ರವಿ ಹುಲ್ಲಂಬಿ , ಗದಿಗೆಪ್ಪ ಬಂಡಿವಾಡ ,ಮುದಕಪ್ಪ ಬಂಡಿವಾಡ, ನಾಗನಗೌಡ ಪಾಟೀಲ, ಸಂತೋಷ ಶಿಗ್ಲೀಮಠ, ಮಹಾವೀರ ಕಲ್ಲಣ್ಣವರ, ಶಿವಾನಂದ ಉಳ್ಳಾಗಡ್ಡಿ, ರವಿಗೌಡ ಪಾಟೀಲ, ಸಂದೀಪ ಪ್ಯಾಟಿ, ಉಮೇಶ ಮೋರಬದ, ಛಬ್ಬಿ ಗ್ರಾಮಸ್ಥರು ಉಪಸ್ಥಿತರಿದ್ದರು.