ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಪ್ರತ್ಯೇಕ ಮಾಡುವುದು ಅತ್ಯವಶ್ಯವಿದೆ. ಇದು ಅವಳಿ ನಗರದ ಅಭಿವೃದ್ಧಿಗೆ ಅತ್ಯವಶ್ಯವಿದೆ ಎಂದು ಪೂರ್ವ ಕ್ಷೇತ್ರದ ಶಾಸಕರು, ಸ್ಲಮ್ ಬೋರ್ಡ್ ಅಧ್ಯಕ್ಷರು, ಪ್ರಸಾದ ಅಬ್ಬಯ್ಯ ಸದನದಲ್ಲಿ ಒತ್ತಾಯಿಸಿದರು.
ಔತಣಕೂಟಕ್ಕೆ ಕರೆದು, ಬೆನ್ನಿಗೆ ಚಾಕು ಹಾಕುವ ಕೆಲಸ ಮಾಡ್ತಾರೆ: BSY ವಿರುದ್ಧ ಯತ್ನಾಳ್ ಕಿಡಿ!
ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಗಮನ ಸೆಳೆಯುವ ಸೂಚನೆ ಸಂದರ್ಭದಲ್ಲಿ ಸದನದ ಗಮನ ಸೆಳೆದ ಅವರು, ಪ್ರತ್ಯೇಕ ಮಹಾನಗರ ಪಾಲಿಕೆ ಕುರಿತು ಅನೇಕಬಾರಿ ಒತ್ತಾಯಿಸಲಾಗಿದೆ. ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್, ಧಾರವಾಡ ಶಾಸಕರಾದ ವಿನಯ್ ಕುಲಕರ್ಣಿ ಮತ್ತು ನಾವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಸಭೆಯೂ ನಡೆಸಿದ್ದೇವೆ. ಆದರೆ, ವಿಳಂಬ ಏಕೆ ಆಗುತ್ತಿದೆ ಎಂದು ಅಬ್ಬಯ್ಯ ಪ್ರಶ್ನಿಸಿದರು.
ಸರ್ಕಾರ ಇನ್ನು ವಿಳಂಬ ಮಾಡದೇ ಕೂಡಲೇ ಪ್ರತ್ಯೇಕ ಮಹಾನಗರ ಪಾಲಿಕೆ ಘೋಷಣೆ ಮಾಡುವಂತೆ ಒತ್ತಯಿಸಿದರು.
ಇದಕ್ಕೆ ಉತ್ತರಿಸಿದ ನಗರಾಭಿವೃದ್ಧಿ ಸಚಿವರಾದ ಸುರೇಶ ಭೈರತಿ ಅವರು ಈಗಾಗಲೇ ಪ್ರತ್ಯೇಕ ಮಹಾನಗರ ಪಾಲಿಕೆ ಘೋಷಣೆಯ ಆಡಳಿತಾತ್ಮಕ ಪ್ರಕ್ರಿಯೆಗಳು ನಡೆದಿದ್ದು, ಹತ್ತು ದಿನದಲ್ಲಿ ಪ್ರತ್ಯೇಕ ಮಹಾನಗರ ಪಾಲಿಕೆ ಘೋಷಣೆ ಮಾಡಿ ಆದೇಶ ಹೊರಡಿಸಲಾಗುವುದು ಎಂಂದು ಹೇಳಿದರು.