ದೆಹಲಿ: ದೆಹಲಿಯಲ್ಲಿ ಬಿಜೆಪಿ ಶಾಸಕ ಬಸನಗೌಡ ಟೀಂ ಕಾಣಿಸಿಕೊಂಡಿದೆ. ನಿನ್ನೆ ಶಾಸಕ ಯತ್ನಾಳ ಮಾತ್ರ ದೆಹಲಿಯಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಅವರ ಜೊತೆಗೆ ವಕ್ಫ್ ಹೋರಾಟದಲ್ಲಿ ಜೊತೆಗೂಡಿರುವ ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಕುಮಾರ ಬಂಗಾರಪ್ಪ, ಸೇರಿದಂತೆ ಕೆಲವು ಮುಖಂಡರು ದೆಹಲಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇಂದು ಪಕ್ಷದ ವರಿಷ್ಠರನ್ನು ಭೇಟಿ ಮಾಡಿ, ವಕ್ಫ್ ಹೋರಾದ ಕುರಿತು ಮಧ್ಯಂತರ ವರದಿ ಸಲ್ಲಿಸಲಿದ್ದಾರೆ. ಇದೇ ವೇಳೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮಗೆ ನೀಡಿರುವ ಶೋಕಾಸ್ ನೋಟಿಸ್ ಬಗ್ಗೆ ಕೂಡ ಉತ್ತರಿಸುವ ಸಾಧ್ಯತೆ ಇದೆ.
ಫೆಂಗಲ್ ಚಂಡಮಾರುತ ಎಫೆಕ್ಟ್; ಹೊಸೂರು ಹೈವೇ ಜಲಾವೃತ, ಸಂಚಾರ ಅಸ್ತವ್ಯಸ್ತ
ನಿನ್ನೆಯಷ್ಟೇ ದೆಹಲಿಯಲ್ಲಿ ಮಾತನಾಡಿದ್ದ ಯತ್ನಾಳ್ ತಮಗೆ ಬಂದಿರುವ ಶೋಕಾಸ್ ನೋಟಿಸ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರನೇ ನಕಲಿ ಸಹಿ ಮಾಡಿಸಿ ಕಳುಹಿಸಿರಬಹುದು ಎಂದು ಆರೋಪಿಸಿದ್ದರು. ಈ ಹಿಂದೆ ಕೂಡ ಹೀಗೆ 2-3 ಬಾರಿ ನೋಟಿಸ್ ಬಂದಿತ್ತು ಎಂದಿದ್ದರು.