ತಮಿಳು ಚಿತ್ರರಂಗದ ಖ್ಯಾತ ನಟ, ಸೂಪರ್ ಸ್ಟಾರ್ ರಜನಿಕಾಂತ್ ನಿನ್ನೆ ಅಂದರೆ ಡಿ.12ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಹಲವು ಕಡೆ ರಜನಿಕಾಂತ್ ಅಭಿಮಾನಿಗಳು ನೆಚ್ಚಿನ ನಟನ ಬರ್ತಡೇಯನ್ನು ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಿದ್ದಾರೆ.
ಸೂಪರ್ ಸ್ಟಾರ್ ರಜನಿಕಾಂತ್ 73 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ರಜನಿ ಹುಟ್ಟುಹಬ್ಬವನ್ನ ಕರ್ನಾಟಕ ರಾಜ್ಯ ರಜನಿಕಾಂತ್ ಅಭಿಮಾನಿಗಳ ವೆಲ್ ಫೇರ್ ಅಸೋಸಿಯೇಷನ್ ಸರಳವಾಗಿ ಆಚರಿಸಿದೆ.
ರಜನಿಕಾಂತ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಮೂರು ವ್ಹೀಲ್ ಚೇರ್ , ರೋಗಿಗಳಿಗೆ ಹಣ್ಣು ಹಂಪಲು ನೀಡಿ ರೋಗಿಗಳಿಗೆ ನೆರವಾಗುವ ಕೆಲಸ ಮಾಡಿದ್ದಾರೆ.
ಕರ್ನಾಟಕ ರಾಜ್ಯ ರಜನಿಕಾಂತ್ ಅಭಿಮಾನಿಗಳವೆಲ್ ಫೇರ್ ಅಸೋಸಿಯೇಷನ್ ಅವರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ರಜನಿಕಾಂತ್ 1950 ಡಿಸೆಂಬರ್ 12 ರಂದು ಶಿವಾಜಿ ರಾವ್ ಗಾಯಕ್ವಾಡ್ ಅವರ ಪುತ್ರನಾಗಿ ಬೆಂಗಳೂರಿನಲ್ಲಿ ಜನಿಸಿದರು. 1975ರಲ್ಲಿ ತಮಿಳು ಅಪೂರ್ವ ರಾಗಂಗಳ್ ಮೂಲಕ ರಜನಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ರು.
ತಮಿಳು ನಟ ರಜನಿಕಾಂತ್ ನೂರಾರು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಸೌತ್ ಸೂಪರ್ ಸ್ಟಾರ್ ಎಂದೇ ಕರೆಸಿಕೊಳ್ಳುವ ರಜನಿ 74ರ ಹರೆಯದಲ್ಲೂ ಯಂಗ್ ಹೀರೋಗಳಿಗೆ ಪೈಪೋಟಿ ನೀಡ್ತಿದ್ದಾರೆ.