ಕಿತ್ತಳೆ ಸಿಪ್ಪೆ ಬಿಳಿ ಕೂದಲಿನ ಸಮಸ್ಯೆಯನ್ನು ಬೇರಿನಿಂದಲೇ ನಿರ್ನಾಮ ಮಾಡುತ್ತದೆ. ಕಿತ್ತಳೆ ಸಿಪ್ಪೆಯನ್ನು ಬಿಳಿ ಕೂದಲಿಗೆ ಬಳಸುವ ಮೂಲಕ ಕೂದಲನ್ನು ಮತ್ತೆ ಕಡು ಕಪ್ಪು ಬಣ್ಣಕ್ಕೆ ತಿರುಗಿಸಬಹುದು.
ಪ್ರಜ್ವಲ್ ರೇವಣ್ಣ ಖಾಸಗಿ ವೀಡಿಯೊ ಪ್ರಕರಣ..,ಇಂದಿನಿಂದ ತನಿಖೆ ಚುರುಕು..!
ಕಿತ್ತಳೆ ಸಿಪ್ಪೆಯಲ್ಲಿ ವಿಟಮಿನ್ ಸಿ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತದೆ. ಹಾಗಾಗಿ ಇದು ಕೂದಲಿಗೆ ರೇಷ್ಮೆಯಂತಹ ಹೊಳಪು ನೀಡುತ್ತದೆ. ಕೂದಲಿಗೆ ಶಾಂಪೂ ಬಳಸುವ ಅಗತ್ಯವೂ ಇರುವುದಿಲ್ಲ. ಇದಕ್ಕಾಗಿ ಕಿತ್ತಳೆ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿಕೊಳ್ಳಿ.ಈಗ ಅದಕ್ಕೆ ಒಂದು ಅಥವಾ ಎರಡು ಚಮಚ ತೆಂಗಿನೆಣ್ಣೆ, ಅಲೋವೆರಾ ಜೆಲ್ ಮತ್ತು ರೋಸ್ ವಾಟರ್ ಹಾಕಿ ಮಿಶ್ರಣ ಮಾಡಿ. ಈ ಪ್ಯಾಕ್ ಅನ್ನು ಕೂದಲಿಗೆ ಹಚ್ಚಿ 30 ನಿಮಿಷಗಳವರೆಗೆ ಹಾಗೆಯೇ ಬಿಡಿ.
ಇನ್ನು ಕಿತ್ತಳೆ ಸಿಪ್ಪೆಯ ಪುಡಿಗೆ ಜೇನುತುಪ್ಪವನ್ನು ಬೆರೆಸಿ, ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ.ಸುಮಾರು 30 ನಿಮಿಷಗಳ ನಂತರ ನೀರಿನಿಂದ ಕೂದಲನ್ನು ತೊಳೆಯಿರಿ.ಮೇಲೆ ಹೇಳಿದ ರೀತಿಯಲ್ಲಿ ಕೂದಲಿಗೆ ಕಿತ್ತಲೆ ಸಿಪ್ಪೆಯನ್ನು ಬಳಸುವುದರಿಂದ ಬಿಳಿ ಕೂದಲು ಕಪ್ಪಾಗುತ್ತದೆ. ಮಾತ್ರವಲ್ಲ ಕೂದಲಿನ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ