ಪಾವ್ ಭಾಜಿ ಎಂದರೆ ಯಾರ ಬಾಯಲ್ಲಿ ನೀರು ಬರಲ್ಲ ಹೇಳಿ. ಪಾವ್ ತುಂಡುಗಳನ್ನು ಬಿಸಿ ಬಿಸಿಯಾದ ಭಾಜಿ ಜೊತೆ ನೆಂಚಿಕೊಂಡು ತಿನ್ನುತ್ತಾ ಇದ್ದರೆ ಹೊಟ್ಟೆಗೆ ಹೋಗಿದ್ದೆ ತಿಳಿಯುವುದಿಲ್ಲ. ಕೆಲವರಿಗೆ ಹೊರಗಡೆಯಿಂದ ತಂದು ತಿನ್ನುವುದಕ್ಕೆ ಇಷ್ಟವಾಗುವುದಿಲ್ಲ. ಅಂಥವರು ಸುಲಭವಾಗಿ ಮನೆಯಲ್ಲಿಯೇ ಪಾವ್ ಭಾಜಿ ಮಾಡಿಕೊಂಡು ಹೊಟ್ಟೆ ತಿನ್ನಬಹುದು. ಬೆಣ್ಣೆಯೊಂದಿಗೆ ಫ್ರೈ ಮಾಡಿರುವ ಪಾವ್ ಜತೆ ವಿವಿಧ ತರಕಾರಿ ಹಾಕಿ ಮಾಡಿದ ಬಾಜಿ ಸವಿಯುವ ಮಜಾನೇ ಬೇರೆ. ಹೊಟ್ಟೇನೂ ತುಂಬುವ ಈ ಫಾಸ್ಟ್ ಫುಡ್ ರೆಸಿಪಿ ಇಲ್ಲಿದೆ..
ಬೇಕಾಗುವ ಸಾಮಾಗ್ರಿಗಳು:
- ಬೆಣ್ಣೆ
- ಟೊಮ್ಯಾಟೋ
- ಬಟಾಣಿ
- ದೊಣ ಮೆಣಸಿನಕಾಯಿ
- ಆಲೂಗೆಡ್ಡೆ
- ಉಪ್ಪು
- ಖಾರದ ಪುಡಿ
- ಅರಿಶಿಣ ಪುಡಿ
- ಪಾವ್ ಬಾಜಿ ಮಸಾಲ
- ಕಸ್ತೂರಿ ಮೇಥಿ
- ಕೊತ್ತಂಬರಿ ಸೊಪ್ಪು
- ಶುಂಠಿ- ಬೆಳ್ಳುಳಿ ಪೇಸ್ಟ್
- ಈರುಳ್ಳಿ
- ನಿಂಬೆ ಹಣ್ಣು
- ಪಾವ್
ಮಾಡುವ ವಿಧಾನ:
- ಒಂದು ಪಾತ್ರೆಯಲ್ಲಿ ಬೆಣ್ಣೆ, ಟೊಮ್ಯಾಟೊ, ಬಟಾಣಿ, ಆಲೂಗಡ್ಡೆ ಮತ್ತು ಉಪ್ಪು ಹಾಕಿ ಬೇಯಿಸಿಕೊಳ್ಳಬೇಕು. 10 ನಿಮಿಷಗಳ ನಂತರ ಅದನ್ನು ಸ್ಮ್ಯಾಷ್ ಮಾಡಬೇಕು. ಆಮೇಲೆ ಅದಕ್ಕೆ ಖಾರ, ಅರಿಶಿಣ, ಪಾವ್ ಮಸಾಲ, ಕೊತ್ತಂಬರಿ, ಈರುಳ್ಳಿ ಮತ್ತು ಕಸ್ತೂರಿ ಮೇಥಿ ಸೇರಿಸಬೇಕು.
- ಮತ್ತೊಂದು ಬಾಣಲೆಗೆ ಬೆಣ್ಣೆ, ಖಾರದ ಪುಡಿ ಮತ್ತು ಪಾವ್ ಮಸಾಲ್ ಹಾಕಿ. ಅದಕ್ಕೆ ಪಾವನ್ನು (ಬ್ರೆಡ್) ಎರಡು ಭಾಗ ಮಾಡಿ ಬೆಣ್ಣೆ ಹಚ್ಚಿ ಫ್ರೈ ಮಾಡಬೇಕು. ಅಷ್ಟೇ. ರುಚಿಯಾದ ಪಾವ್ ಬಾಜಿ ಸಿದ್ಧ.
- ನಂತರ ಒಂದು ತಟ್ಟೆಯಲ್ಲಿ ಬಾಜಿ ಮತ್ತು ಪಾವ್ ಇಟ್ಟು, ಅದಕ್ಕೆ ನಿಂಬೆ ರಸ, ಕೊತ್ತಂಬರಿ ಸೊಪ್ಪು ಹಾಗೂ ಸಣ್ಣದಾಗಿ ಹೆಚ್ಚಿದ ಈರುಳ್ಳಿ ಹಾಕಿದರೆ ಪಾವ್ ಬಾಜಿ ಸಿದ್ಧ.