ಅನಾನಸ್ ಹಣ್ಣಿನಲ್ಲಿ ಫೈಬರ್, ವಿಟಮಿನ್ ಎ, ವಿಟಮಿನ್ ಸಿ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದೆ.
ಅನಾನಸ್ನ ನಿಯಮಿತ ಸೇವನೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಇನ್ನು ನೀವೇನಾದರು ತೂಕ ಇಳಿಸಿಕೊಳ್ಳಲು ಬಯಸಿದರೆ ನಿಮ್ಮ ಆಹಾರದಲ್ಲಿ ಅನಾನಸ್ ಇದ್ದರೆ ಬಹಳಷ್ಟು ಪ್ರಯೋಜನವಿದೆ.
ಇಷ್ಟೆಲ್ಲಾ ಆರೋಗ್ಯಕಾರಿ ಪ್ರಯೋಜನಗಳನ್ನು ಹೊಂದಿರುವ ಅನಾನಸ್ನಿಂದ ರುಚಿಕರವಾದ ಕೇಸರಿ ಬಾತ್ ಅನ್ನ ಮನೆಯಲ್ಲೇ ಮಾಡಬಹುದು.
ಹೌದು ಒಂದು ಅನಾನಸ್ ಹಣ್ಣು ಇದ್ದರೆ ಅದರಿಂದ ಬಾತ್ ಮಾಡಬಹುದು. ಅದನ್ನು ಅನಾನಸ್ ಕೇಸರಿ ಬಾತ್ ಅಂತಲೂ ಕರೆಯುತ್ತಾರೆ. ಬಹಳ ಸುಲಭವಾಗಿ ಈ ಖಾದ್ಯ ಮಾಡಬಹುದಾಗಿದ್ದು, ನೈಸರ್ಗಿಕವಾಗಿ ರುಚಿ ಇರುವ ಕಾಣರದಿಂದ ಬಾಯಿ ಚಪ್ಪರಿಸಿ ಇದನ್ನು ಸೇವಿಸಬಹುದು.
ಹಾಗಾದರೆ ಅನಾನಸ್ ಹಣ್ಣಿನ ಕೇಸರಿ ಬಾತ್ ಮಾಡುವುದು ಹೇಗೆ?, ಈ ರೆಸಿಪಿ ಮಾಡಲು ಬೇಕಾಗುವ ವಸ್ತುಗಳೇನು? ಯಾವೆಲ್ಲಾ ವಿಧಾನ ಪಾಲಿಸಬೇಕು ಎಂಬ ಕುರಿತು ಮಾಹಿತಿ ಇಲ್ಲಿದೆ ನೋಡಿ.
ಅಗತ್ಯವಿರುವ ವಸ್ತುಗಳು:
ಅನಾನಸ್ ಹಣ್ಣು-1
ರವೆ – 1 ಕಪ್
ಸಕ್ಕರೆ – ಅಗತ್ಯವಿರುವಂತೆ
ತುಪ್ಪ – 1/2 ಕಪ್
ಗೋಡಂಬಿ – 10-15
ಒಣದ್ರಾಕ್ಷಿ – 10 – 15
ಏಲಕ್ಕಿ – 1/2 ಸಮಚ
ಅಳತೆ ಮಾಡಿಟ್ಟುಕೊಳ್ಳಬೇಕಾದ ನೀರು
ಪಾಕವಿಧಾನ:
ಮೊದಲಿಗೆ, ಅನಾನಸ್ ಸಿಪ್ಪೆಯನ್ನು ತೆಗೆದು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಬೇಕು. ಬಳಿಕ ಅದನ್ನು ಮಿಕ್ಸಿ ಜಾರಿನಲ್ಲಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು. ಆದರೆ ಈ ರೀತಿ ರುಬ್ಬಿಕೊಳ್ಳುವ ವೇಳೆ ನೀರು ಹಾಕಬಾರದು, ಅನಾನಸ್ ನೀರು ಬಿಟ್ಟುಕೊಳ್ಳುವುದರಿಂದ ಹಾಗೆಯೆ ಮಿಕ್ಸ್ ಮಾಡಿಕೊಳ್ಳಿ.
ಮುಂದೆ ಬಾಣಲೆಯನ್ನು ಒಲೆಯಲ್ಲಿ ಇಟ್ಟು ಅದಕ್ಕೆ ತುಪ್ಪ ಹಾಕಿ ಗೋಡಂಬಿ ಮತ್ತು ಒಣದ್ರಾಕ್ಷಿ ಹಾಕಿ ಚೆನ್ನಾಗಿ ಹುರಿದು ಪಕ್ಕಕ್ಕೆ ಇಡಿ. ನಂತರ ಅದೇ ತುಪ್ಪಕ್ಕೆ ರವೆ ಹಾಕಿ ಚೆನ್ನಾಗಿ ಹುರಿಯಿರಿ. ರವೆ ಚೆನ್ನಾಗಿ ಹುರಿದ ನಂತರ ಅದಕ್ಕೆ ರುಬ್ಬಿದ ಪೈನಾಪಲ್ ಹಾಕಿ ಚೆನ್ನಾಗಿ ಕಲಸಿ.
ನಂತರ ಅದಕ್ಕೆ ಸ್ವಲ್ಪ ನೀರು ಹಾಕಿ ಚೆನ್ನಾಗಿ ಕಲಕಿ ಸಿಹಿಗೆ ತಕ್ಕಂತೆ ಸಕ್ಕರೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
ರವೆಯೊಂದಿಗೆ ಸಕ್ಕರೆ ಚೆನ್ನಾಗಿ ಮಿಶ್ರಣವಾದ ನಂತರ, ಪುಡಿಮಾಡಿದ ಏಲಕ್ಕಿ ಸೇರಿಸಿ ಮತ್ತು ಬೆರೆಸಿ.ನಂತರ ಹುರಿದ ಗೋಡಂಬಿ, ಒಣ ದ್ರಾಕ್ಷಿ ಮತ್ತು ಉಳಿದ ಸಣ್ಣಗೆ ಹೆಚ್ಚಿದ ಅನಾನಸ್ ಹಾಕಿ ಚೆನ್ನಾಗಿ ಕಲಸಿ ಕೊನೆಗೆ ಸ್ವಲ್ಪ ತುಪ್ಪ ಹಾಕಿ ಕಲಕಿದರೆ ರುಚಿಕರವಾದ ‘ಅನಾನಸ್ ಕೇಸರಿ ಬಾತ್ ರೆಡಿ…