ಸಿಸಿಟಿವಿ ಕ್ಯಾಮೆರಾಗಳು ಕಣ್ಣಿಗೆ ಕಾಣಿಸಬಲ್ಲವು. ಆದರೆ ಸ್ಪೈ ಕ್ಯಾಮೆರಾಗಳು ಹಾಗಲ್ಲ, ಕಣ್ಣಿಗೆ ಗೋಚರಿಸದಷ್ಟು ಪುಟ್ಟದಾಗಿರುತ್ತವೆ. ಎಲ್ಲಿ ಇರಿಸುತ್ತಾರೆ ಎಂಬುದನ್ನು ಪತ್ತೆ ಹಚ್ಚುವುದೇ ಕಷ್ಟ. ಅಷ್ಟು ಪುಟ್ಟ ಗಾತ್ರದಲ್ಲಿರುತ್ತದೆ. ಆದರೆ, ಅದರ ಸಾಮರ್ಥ್ಯ ಅಗಾಧ. ಇವುಗಳನ್ನು ಪೆನ್ನಿನ ಕ್ಯಾಪ್ನಲ್ಲಿರುವ ಕ್ಲಿಪ್ನ ತುದಿಯಲ್ಲಿ,
ಅಂಗಿಯ ಬಟನ್ನಲ್ಲಿ, ಡೆಸ್ಕ್ ಮೇಲಿರುವ ಪೆನ್ ಸ್ಟ್ಯಾಂಡ್, ಗೊಂಬೆಗಳ ಕಣ್ಣು, ಗಡಿಯಾರದ ಮುಳ್ಳು, ವಾಹನದ ಕೀಚೈನ್, ಪರ್ಸ್, ಡಿವಿಡಿ ಕೇಸ್, ಏರ್ಫಿಲ್ಟರ್, ಟಿವಿ ಮೇಲಿಡುವ ಫೋಟೋ ಫ್ರೇಮ್ ಹೀಗೆ ಸ್ಪೈ ಕ್ಯಾಮೆರಾಗಳನ್ನು ಇರಿಸಬಹುದಾದ ಸಾಧ್ಯತೆಗಳು ಇರುತ್ತವೆ. ಹೀಗಾಗಿ ನಾವು ಬಹಳ ಎಚ್ಚರಿಕೆಯಿಂದ ಇರುವುದು ಒಳಿತು. ಇದಕ್ಕಾಗಿ ನೀವು ಸ್ಮಾರ್ಟ್ಫೋನ್ ಬಳಕೆ ಮಾಡುತ್ತಿದ್ದರೆ ಒಂದು ಆ್ಯಪ್ ಡೌನ್ಲೋಡ್ ಮಾಡಿದರೆ ಇದರ ಮೂಲಕ ನೀವಿರುವ ಪ್ರದೇಶದಲ್ಲಿ ಹಿಡನ್ ಕ್ಯಾಮೆರಾ ಇದೆಯೇ ಎಂಬುದನ್ನು ತಿಳಿಯಬಹುದು
ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಪ್ಲೇ ಸ್ಟೋರ್ಗೆ ಹೋಗಿ “ಹಿಡನ್ ಕ್ಯಾಮೆರಾ ಡಿಟೆಕ್ಟರ್” ಎಂಬ ಆ್ಯಪ್ ಡೌನ್ಲೋಡ್ ಮಾಡಿ ಅದರ ಸಹಾಯದಿಂದ ಹಿಡನ್ ಕ್ಯಾಮೆರಾಗಳನ್ನು ಪತ್ತೆಹಚ್ಚಬಹುದು. ಆದರೆ, ಇದು ಥರ್ಡ್ ಪಾರ್ಟಿ ಆ್ಯಪ್ ಎಂಬುದು ನೆಪಪಿರಲಿ.
ಈ ಆ್ಯಪ್ ಡೌನ್ಲೋಡ್ ಮಾಡಿದ ನಂತರ ನೀವು ತಂಗುವ ಜಾಗದಲ್ಲಿ ಅಥವಾ ನಿಮಗೆಲ್ಲಾದರು ಈ ಪ್ರದೇಶದಲ್ಲಿ ಹಿಡನ್ ಕ್ಯಾಮೆರಾ ಇದೆಯೇ? ಎಂಬ ಅನುಮಾನ ಮೂಡಿಬಂದಲ್ಲಿ ನಿಮಗೆ ಸಹಕರಿಸುತ್ತದೆ.
ಸ್ಮಾರ್ಟ್ಫೋನ್ನಲ್ಲಿ ಆ್ಯಪ್ ಇನ್ಸ್ಟಾಲ್ ಆದ ಬಳಿಕ ತೆರೆದರೆ ಇದರಲ್ಲಿ 8 ಆಯ್ಕೆಗಳಿರುತ್ತವೆ. ಮೊದಲನೆಯದು Detect Wired Camera ಎಂಬ ಆಯ್ಕೆ. ಇದನ್ನು ಸೆಲೆಕ್ಟ್ ಆಡಿ ನೀವು ಮೂವ್ ಆದ ಜಾಗದಲ್ಲಿ ಸ್ಕ್ಯಾನ್ ಮಾಡುತ್ತದೆ. ಹಿಡನ್ ಕ್ಯಾಮೆರಾ ಇದೆಯಾ ಎಂಬುದನ್ನು ತಿಳಿಸುತ್ತದೆ. ಜೊತೆಗೆ ಇದರಲ್ಲಿ ಇನ್ನಷ್ಟು ಅನೇಕ ಉಪಯುಕ್ತ ಆಯ್ಕೆಗಳಿವೆ.
ಇನ್ನೂ ಟೂ ವೇ ಮಿರರ್ ಅಥವಾ ಒಂದು ಬದಿಯಿಂದ ಕನ್ನಡಿ, ಇನ್ನೊಂದು ಬದಿಯಿಂದ ಪಾರದರ್ಶಕವಾದ ನಿಲುವುಗನ್ನಡಿ ಈ ಬಗೆಯ ಕನ್ನಡಿಗಳನ್ನು ಕ್ಯಾಮೆರಾ ಬದಲಾಗಿ ಅಳವಡಿಸಲಾಗಿರುತ್ತದೆ. ಅದರ ಹಿಂದೆ ದೊಡ್ಡ ಗಾತ್ರದ ಕ್ಯಾಮೆರಾ ನಿಲ್ಲಿಸಲಾಗಿರುತ್ತದೆ. ಹಾಗಾಗಿ, ನೀವು ನಿಮ್ಮ ಬೆರಳನ್ನು ನೇರವಾಗಿ ಕನ್ನಡಿಯ ಮೇಲೆ ತಾಗಿಸಿ. ಒಂದು ವೇಳೆ ಇದು ಟೂ ವೇ ಮಿರರ್ ಆಗಿದ್ದರೆ ಬೆರಳಿಗೂ ಕನ್ನಡಿಯ ಬುಡಕ್ಕೂ ಕೊಂಚ ಅಂತರವಿರುತ್ತದೆ. ಈ ಮೂಲಕ ಎಚ್ಚರಿಕೆಯಿಂದ ಇರಬಹುದು.