Aadhaar Card ಗೆ ಮೊಬೈಲ್ ನಂಬರ್ ಲಿಂಕ್ ಆಗಿರೋದನ್ನ ಪರಿಶೀಲಿಸುವುದು ಹೇಗೆ ಅಂತೀರಾ!? ನೀವು ಕೂಡ ಪರಿಶೀಲಿಸಬೇಕಿದ್ರೆ ಈ ಸುದ್ದಿ ಕಂಪ್ಲೀಟಾಗಿ ಓದಿ.
ಯತ್ನಾಳ್ ವಿರುದ್ಧ ವಿಜಯೇಂದ್ರ ಆಕ್ರೋಶ: ಇನ್ಮುಂದೆ ಸಹಿಸಲು ಆಗಲ್ಲ ಎಂದ BSV!
ಆಧಾರ್ ಕಾರ್ಡ್ ಭಾರತದ ಪ್ರಮುಖ ದಾಖಲೆಯಾಗಿದೆ. ಸರ್ಕಾರಿ ಯೋಜನೆಗಳಿಂದ ಬ್ಯಾಂಕಿಂಗ್ ಸೇವೆಗಳನ್ನು ಪ್ರವೇಶಿಸುವವರೆಗೆ, ಈ ಕಾರ್ಡ್ ಅನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ನೀಡಿದೆ. ಇದು ಪ್ರತಿ ಕಾರ್ಯಕ್ಕೂ ಐಡಿ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ.
ಆದರೆ ಆಧಾರ್ ವಿವರಗಳನ್ನು ಕಾಲಕಾಲಕ್ಕೆ ಸರಿಯಾದ ವಿವರಗಳೊಂದಿಗೆ ನವೀಕರಿಸಬೇಕು.
ಪ್ರತಿ ಭಾರತೀಯ ನಾಗರೀಕರಿಗೆ ಪ್ರಮುಖ ದಾಖಲೆಯಾಗಿರುವ ಆಧಾರ್ ಕಾರ್ಡ್ ಅನ್ನು ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಗೆ ಲಿಂಕ್ ಮಾಡುವುದು ಕೂಡ ತುಂಬಾ ಅತ್ಯಗತ್ಯ. ಬಳಕೆದಾರರ ಪ್ರಯೋಜನಗಳನ್ನು ಗಮನದಲ್ಲಿಟ್ಟುಕೊಂಡು, ತಮ್ಮ ಆಧಾರ್ಗೆ ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಲಿಂಕ್ ಆಗಿದೆಯೇ ಅಥವಾ ಇಲ್ಲವೇ ಎಂದು ಪರಿಶೀಲಿಸಲು ಆಧಾರ್ ಬಳಕೆದಾರರಿಗೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಅವಕಾಶ ಕಲ್ಪಿಸಿದೆ.
ದೇಶದ ಪ್ರತಿಯೊಬ್ಬ ನಾಗರಿಕನಿಗೂ ಆಧಾರ್ ಕಾರ್ಡ್ ಮುಖ್ಯವಾದ ಐಡೆಂಟಿಟಿ. ಪ್ಯಾನ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಅಕೌಂಟ್, ಹೀಗೆ ಎಲ್ಲಾ ಮುಖ್ಯ ಡಾಕ್ಯುಮೆಂಟ್ಗಳಿಗೂ ಆಧಾರ್ ಲಿಂಕ್ ಮಾಡಿರಬೇಕು. ನಿಮ್ಮ ಮೊಬೈಲ್ ನಂಬರ್ ಆಧಾರ್ಗೆ ಲಿಂಕ್ ಆಗಿದ್ಯಾ? ಒಂದಕ್ಕಿಂತ ಹೆಚ್ಚು ಮೊಬೈಲ್ ನಂಬರ್ ಉಪಯೋಗಿಸುವವರಿಗೆ ಯಾವ ನಂಬರ್ ಆಧಾರ್ಗೆ ಲಿಂಕ್ ಆಗಿದೆ ಅನ್ನೋ ಗೊಂದಲ ಯಾವಾಗಲೂ ಇರುತ್ತದೆ. ಈ ಗೊಂದಲ ನಿವಾರಣೆ ಮಾಡೋಕೆ ದಾರಿ ಇದೆ.
ಅಧಿಕೃತ ವೆಬ್ಸೈಟ್ನಲ್ಲಿ (https://myaadhaar.uidai.gov.in/) ‘ವೆರಿಫೈ ಇಮೇಲ್/ಮೊಬೈಲ್ ನಂಬರ್’ ಅನ್ನೋ ಆಯ್ಕೆ ಕ್ಲಿಕ್ ಮಾಡಿ ಅಥವಾ myAadhaar ಆಪ್ ಮೂಲಕ ಈ ಸೌಲಭ್ಯ ಪಡೆಯಬಹುದು. ಮೊಬೈಲ್ ನಂಬರ್ ಲಿಂಕ್ ಆಗಿಲ್ಲ ಅಂದ್ರೆ ಅದೂ ಗೊತ್ತಾಗುತ್ತೆ. ಮತ್ತೆ ಮೊಬೈಲ್ ನಂಬರ್ ಅಪ್ಡೇಟ್ ಮಾಡೋಕೆ ಏನು ಮಾಡಬೇಕು ಅಂತಾನೂ ತಿಳಿಸುತ್ತೆ. ಮೊಬೈಲ್ ನಂಬರ್ ಲಿಂಕ್ ಆಗಿದ್ರೆ ‘ಈಗಾಗಲೇ ಚೆಕ್ ಆಗಿದೆ’ ಅಂತ ಮೆಸೇಜ್ ಬರುತ್ತೆ.
ಯುಐಡಿಎಐ ವೆಬ್ಸೈಟ್ಗೆ ಹೋಗಿ: https://uidai.gov.in/
“ಆಧಾರ್ ಸೇವೆಗಳು” ಅಡಿಯಲ್ಲಿ “ಇಮೇಲ್/ಮೊಬೈಲ್ ನಂಬರ್ ಪರಿಶೀಲಿಸಿ” ಕ್ಲಿಕ್ ಮಾಡಿ.
ಆಧಾರ್ ನಂಬರ್ ಹಾಕಿ: ನಿಮ್ಮ 12 ಅಂಕಿಯ ಆಧಾರ್ ನಂಬರ್ ಹಾಕಿ.
ಇಮೇಲ್ ಐಡಿ ಅಥವಾ ಮೊಬೈಲ್ ನಂಬರ್ ಹಾಕಿ: ನೀವು ಚೆಕ್ ಮಾಡ್ಬೇಕಾದ ಇಮೇಲ್ ಐಡಿ ಅಥವಾ ಮೊಬೈಲ್ ನಂಬರ್ ಹಾಕಿ.
ಒಟಿಪಿ ಬಟನ್ ಕ್ಲಿಕ್ ಮಾಡಿ, ನಿಮ್ಮ ರಿಜಿಸ್ಟರ್ ಆದ ಮೊಬೈಲ್ ನಂಬರ್ಗೆ ಒಟಿಪಿ ಬರುತ್ತೆ.
ಒಟಿಪಿ ಹಾಕಿ
ಇಮೇಲ್ ಐಡಿ ಅಥವಾ ಮೊಬೈಲ್ ನಂಬರ್ ಸಕ್ಸಸ್ಫುಲ್ ಆಗಿ ವೆರಿಫೈ ಆದ್ರೆ, ಕನ್ಫರ್ಮ್ ಮೆಸೇಜ್ ಬರುತ್ತೆ.
ಈ ಮೂಲಕ ಆಧಾರ್ ಗೆ ಮೊಬೈಲ್ ನಂಬರ್ ಲಿಂಕ್ ಆಗಿರೋದನ್ನು ಸುಲಭವಾಗಿ ತಿಳಿಯಬಹುದು.