ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದು. ಸರತಿ ಸಾಲಿನಲ್ಲಿ ನಿಂತು ಅಪ್ಲಿಕೇಶನ್ ಹಾಕುತ್ತಿದ್ದಾರೆ. ಆದ್ರೆ, ಇನ್ನು ಮುಂದೆ ಇಷ್ಟು ರಿಸ್ಕ್ ಬೇಡ. ಗೃಹಲಕ್ಷ್ಮಿ ಯೋಜನೆಗೆ ವಾಟ್ಸಾಪ್ ಮೂಲಕ ಕೂಡ ಅರ್ಜಿ ಸಲ್ಲಿಸಬಹುದು. ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್ ಕೇಂದ್ರಗಳಲ್ಲಿ ರಶ್ ಹೆಚ್ಚಿದೆ.
ಈ ದಟ್ಟಣೆ ಕಡಿಮೆ ಮಾಡಲು ಇದೇ ಮೊದಲ ಬಾರಿಗೆ ಹೊಸ ಪ್ರಯೋಗಕ್ಕೆ ಸರ್ಕಾರ ಮುಂದಾಗಿದೆ. ಇ-ಆಡಳಿತಕ್ಕಾಗಿ ಕೇಂದ್ರವು ಅಭಿವೃದ್ಧಿಪಡಿಸಿದ ವಾಟ್ಸಾಪ್ ಚಾಟ್ಬಾಟ್ ಸಹಾಯದಿಂದ ಜನರು ಅರ್ಜಿ ಸಲ್ಲಿಸಬಹುದಾಗಿದೆ. ಸಾಮಾನ್ಯವಾಗಿ ಕಂಪನಿಗಳು ಗ್ರಾಹಕರ ಜೊತೆ ಸಂವಹನ ಮಾಡಲು ಚಾಟ್ಬಾಟ್ ಬಳಸ್ತಾರೆ. ಇದನ್ನೇ ಈಗ ಗೃಹಲಕ್ಷ್ಮಿಗೆ ಅರ್ಜಿ ಸಲ್ಲಿಸಲು ಬಳಸಬಹುದಾಗಿದೆ.
ವಾಟ್ಸಾಪ್ ನಂಬರ್ 8147500500ಗೆ ನಿಮ್ಮ ವಿವರ ಕಳಿಸಬೇಕು. ಚಾಟ್ಬಾಟ್ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಲು ಬಳಕೆದಾರರಿಗೆ ಸಹಾಯ ಮಾಡುತ್ತದೆ. ಇ-ಆಡಳಿತಕ್ಕಾಗಿ ಅಭಿವೃದ್ಧಿಪಡಿಸಿದ ಚಾಟ್ಬಾಟ್ ಅರ್ಜಿ ಸಲ್ಲಿಸುವವರ ಜೊತೆ ಸಂವಹನ ನಡೆಸುತ್ತದೆ. ಎಲ್ಲಾ ದಾಖಲೆ ಸಿದ್ಧಪಡಿಸಿ ಇಟ್ಟುಕೊಂಡಿದ್ದರೆ, ಮೂರೇ ನಿಮಿಷದಲ್ಲಿ ಅರ್ಜಿ ಸಲ್ಲಿಸಬಹುದು.
BBMP Recruitment 2024: ಬಿಬಿಎಂಪಿಯಲ್ಲಿ 11 ಸಾವಿರಕ್ಕೂ ಹೆಚ್ಚು ಹುದ್ದೆಗಳ ಭರ್ತಿ..! ಇಂದೇ ಅರ್ಜಿ ಸಲ್ಲಿಸಿ
ಚಾಟ್ಬಾಟ್ ಪಡೆದ ಎಲ್ಲಾ ಮಾಹಿತಿಯನ್ನ ಅಥವಾ ಅರ್ಜಿಯನ್ನ ಬೆಂಗಳೂರು ಒನ್, ಕರ್ನಾಟಕ ಒನ್ ಮತ್ತು ಗ್ರಾಮ ಒನ್ ಕಚೇರಿಗಳಿಗೆ ವರ್ಗಾಯಿಸುತ್ತದೆ. ಅಲ್ಲಿ ದಾಖಲೆಗಳ ಪರಿಶೀಲಿಸಿದ ನಂತರ ಅರ್ಜಿ ಸ್ವೀಕಾರ ಮಾಡಲಾಗುತ್ತೆ. ಒಟ್ನಲ್ಲಿ ರಾಜ್ಯ ಸರ್ಕಾರ ಕೊಟ್ಟ ಮಾತಿನಂತೆ ಗ್ಯಾರಂಟಿಗಳನ್ನ ಪ್ರತಿಯೊಬ್ಬರ ಮನೆ ಬಾಗಿಲಿಗೂ ತಲುಪಿಸುವ ಕೆಲಸ ಮಾಡ್ತಾಯಿದೆ. ನಾರಿ ಮಣಿಯರಿಗೆ ಶಕ್ತಿ ನಂತರ ಲಕ್ಷ್ಮಿ ಕೈ ಹಿಡಿಯಲು ವಾಟ್ಸಾಪ್ ಮೊರೆ ಹೋಗಲು ಈಗ ಅವಕಾಶ ಇದೆ.
ಈಗ ನಿಮಗೆ ವಾಟ್ಸಾಪ್ನಲ್ಲಿ ದಾಖಲೆ ಕೊಟ್ಟರೆ ಹೇಗೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಆಗುತ್ತೆ ಎಂಬ ಪ್ರಶ್ನೆ ಅಥವಾ ಸಂದೇಹ ಮೂಡಿರಬಹುದು. ಅದಕ್ಕೂ ನಾವು ಉತ್ತರವನ್ನು ನೀಡುತ್ತೇವೆ. ಈಗಾಗಲೇ ಜಗತ್ತಿನಲ್ಲಿ ಎಐ ತಂತ್ರಜ್ಞಾನ (ಕೃತಕ ಬುದ್ಧಿಮತ್ತೆ) ಮೂಲಕ ಈ ವ್ಯವಸ್ಥೆ ಕೆಲಸ ಮಾಡುತ್ತಿದೆ. ನೀವು ವಾಟ್ಸಾಪ್ ಮೂಲಕ ನೀಡುವ ಮಾಹಿತಿ ಎಐ ತಂತ್ರಜ್ಞಾನದ ಮೂಲಕ ಚಾಟ್ಬಾಟ್ ಗೆ ಮಾಹಿತಿ ರವಾನೆ ಆಗುತ್ತೆ. ಅಲ್ಲಿಂದ ಈ ಮಾಹಿತಿ ಇ-ಗವರ್ನೆನ್ಸ್ ಸರ್ವೀಸಸ್ ಇಲಾಖೆಗೆ ಸಿಗುತ್ತದೆ. ಈ ಮೂಲಕ ನೀವು ಕೂತಲ್ಲೇ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.