ಮಧುಮೇಹಿಗಳು ಜೀವನಶೈಲಿಯಲ್ಲಿ ಹಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಪಾನೀಯವನ್ನು ಒಂದು ಲೋಟ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ನಿಯಂತ್ರಣದಲ್ಲಿರುತ್ತದೆ.
ನಾವು ಯಾವಾಗಲೂ ಬೆಳಗ್ಗೆ ಹೊತ್ತು ಖಾಲಿ ಹೊಟ್ಟೆಯಲ್ಲಿ ಸಕ್ಕರೆಯ ಮಟ್ಟವನ್ನು ಪರೀಕ್ಷಿಸುವುದು ಉತ್ತಮ. ಆದರೆ ರಾತ್ರಿ ಊಟ ಮತ್ತು ಬೆಳಗಿನ ಶುಗರ್ ಟೆಸ್ಟ್ ಪರೀಕ್ಷೆಯ ನಡುವೆ ಸುಮಾರು 8 ಗಂಟೆಗಳ ಕಾಲ ಅಂತರವಿರಬೇಕು.
ರಕ್ತದಲ್ಲಿನ ಸಕ್ಕರೆ ಮಟ್ಟವು ವಿಭಿನ್ನವಾಗಿದೆ: 0 ಮತ್ತು 5 ವರ್ಷ ವಯಸ್ಸಿನ ಮಕ್ಕಳು ಅಧಿಕ ರಕ್ತದ ಸಕ್ಕರೆಯ ಮಟ್ಟದ ಅಪಾಯವನ್ನು ಬಹಳ ವಿರಳ ಹೊಂದಿರುತ್ತಾರೆ. ಇವರ ರಕ್ತದ ಸಕ್ಕರೆಯು 110 ರಿಂದ 200 mg/dL ವರೆಗೆ ಇರುತ್ತದೆ.
6 ರಿಂದ 12 ವರ್ಷ ವಯಸ್ಸಿನ ಮಕ್ಕಳಿಗೆ ರಕ್ತದಲ್ಲಿನ ಸಕ್ಕರೆ ಮಟ್ಟ, 100 ರಿಂದ 180 mg/dl ನಷ್ಟು ಇರುತ್ತದೆ. ಈ ಮಟ್ಟ ಮೀರಿ ಹೋದರೆ ಅದು ಅಪಾಯಕಾರಿ ಆಗಿದೆ ಎನ್ನುತ್ತಾರೆ ವೈದ್ಯರು.
13 ಮತ್ತು 18 ವಯಸ್ಸಿನ ನಡುವಿನ ಹದಿಹರೆಯದವರು ಹೆಚ್ಚಾಗಿ ಆ್ಯಕ್ಟಿವ್ ಆಗಿರುತ್ತಾರೆ. ಈ ವಯಸ್ಸಿನಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟ 90 ಮತ್ತು 150 mg/dL ನಡುವೆ ಇರಬೇಕು. ಹಾಗಂತ ಇದಕ್ಕಿಂತಲೂ ತುಂಬಾ ಕಡಿಮೆ ಇದ್ದರೆ ಸಮಸ್ಯೆಗಳನ್ನು ಉಂಟಾಗಬಹುದು.
19 ರಿಂದ 26 ವರ್ಷ ವಯಸ್ಸಿನ ವ್ಯಕ್ತಿಗಳಲ್ಲಿ, ಊಟಕ್ಕೂ ಮುನ್ನ ಖಾಲಿ ಹೊಟ್ಟೆಯಲ್ಲಿ ಗ್ಲೂಕೋಸ್ ಮಟ್ಟಗಳು 100 ರಿಂದ 180 mg/dl ಇರಬೇಕು. ಊಟದ ನಂತರ 180 mg/dL ಮಾತ್ರ ಇರಬೇಕು.
27 ಮತ್ತು 32 ವರ್ಷ ವಯಸ್ಸಿನ ನಡುವಿನವರು ಸಾಮಾನ್ಯ ಊಟಕ್ಕೂ ಮುನ್ನ ಖಾಲಿ ಹೊಟ್ಟೆಯಲ್ಲಿ ಟೆಸ್ಟ್ ಮಾಡಿದಾಗ ಅವರ ರಕ್ತದಲ್ಲಿನ ಸಕ್ಕರೆ ಮಟ್ಟವು 100 mg/dl ಇರಬೇಕು. ಆದರೆ ಊಟದ ನಂತರ 90 ರಿಂದ 110 mg/dL ನಷ್ಟು ಇರಬೇಕು.
33 ಮತ್ತು 40 ವರ್ಷಗಳ ನಡುವಿನ ವಯಸ್ಸಿನವರಲ್ಲಿ 140 mg/dl ನಿಂದ 150 mg/dl ವರೆಗೂ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೊಂದಿರಬೇಕು. ಆದರೆ ಊಟದ ನಂತರ 160 mg/dl ಇದ್ದರೆ, ಇದನ್ನು ನಾರ್ಮಲ್ ಎಂದು ಪರಿಗಣಿಸಲಾಗುತ್ತದೆ. ಇದನ್ನು ಅತಿಯಾಗಿ ಸೇವಿಸುವುದರಿಂದ ಮಧುಮೇಹ ಹೆಚ್ಚಾಗುತ್ತದೆ.
50 ರಿಂದ 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಊಟದ ನಂತರ 90 mg/dl ನಿಂದ 130 mg/dL ಮತ್ತು 140 mg/dl ಗಿಂತ ಕಡಿಮೆ ಇರಬೇಕು. ಪ್ರಿಡಿಯಾಬಿಟಿಸ್ ಯಾವಾಗ ಸಂಭವಿಸುತ್ತದೆ?: ಖಾಲಿ ಹೊಟ್ಟೆಯಲ್ಲಿರಬೇಕಾದರೆ ರಕ್ತದಲ್ಲಿನ ಸಕ್ಕರೆಯ ಮಟ್ಟವು 70-100 mg/dl ನಡುವೆ ಇರಬೇಕು. ಆದರೆ ಈ ಮಟ್ಟವು 100-126 mg/dl ತಲುಪಿದರೆ, ಇದನ್ನು ಪ್ರಿಡಿಯಾಬಿಟಿಸ್ ಎಂದು ಪರಿಗಣಿಸಬಹುದು. ಅದಾದ ನಂತರ, 130 mg/dl ಗಿಂತ ಹೆಚ್ಚಿನ ಸಕ್ಕರೆಯ ಮಟ್ಟವನ್ನು ತುಂಬಾ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ.
ಏರುತ್ತಿರುವ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವುದು ಹೇಗೆ?: ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವು ಮಿತಿ ಮೀರಿ ಏರಿಕೆ ಆಗುತ್ತಿದ್ದರೆ, ತಕ್ಷಣವೇ ನಿಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಿ. ಆಗ ಮಾತ್ರ ರಕ್ತದಲ್ಲಿನ ಸಕ್ಕರೆ ಮಟ್ಟ ಮತ್ತು ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು.
ಅಂದರೆ ಶುಗರ್ ಲೆವೆಲ್ ಜಾಸ್ತಿಯಾದರೆ ನಿಯಮಿತವಾಗಿ ವ್ಯಾಯಾಮ, ಯೋಗ ಮತ್ತು ಸೈಕ್ಲಿಂಗ್ ಮಾಡಲು ಪ್ರಾರಂಭಿಸಿ. ಈ ಮೂಲಕ ಆಹಾರ ಸುಲಭವಾಗಿ ಜೀರ್ಣವಾಗುವಂತೆ ಮಾಡಿ. ಕರಿದ ಆಹಾರವನ್ನು ಸಂಪೂರ್ಣವಾಗಿ ತ್ಯಜಿಸಿ. ಇದರ ಬದಲು ನಿಮ್ಮ ಆಹಾರದಲ್ಲಿ ಸಲಾಡ್ ಮತ್ತು ಆರೋಗ್ಯಕರ ಆಹಾರವನ್ನು ಸೇರಿಸಿ.