ಪೇರಲ ಎಲೆಗಳು ಸಹ ಅನೇಕ ರೀತಿಯ ಸಮಸ್ಯೆಗಳನ್ನು ಕಡಿಮೆ ಮಾಡಲು ಉಪಯುಕ್ತವಾಗಿವೆ. ಇದರಲ್ಲಿ ಹಲವು ಬಗೆಯ ಔಷಧಗಳಿವೆ ಎನ್ನುತ್ತಾರೆ ತಜ್ಞರು.. ಈ ಎಲೆಗಳಿಂದ ದೀರ್ಘಕಾಲದ ಕಾಯಿಲೆಗಳನ್ನೂ ಗುಣಪಡಿಸಬಹುದು. ಪೇರಳೆ ಎಲೆಗಳನ್ನು ಸೇವಿಸುವುದರಿಂದ ಯಾವ ರೀತಿಯ ಸಮಸ್ಯೆಗಳಿಂದ ದೂರವಿರಬಹುದು ಎಂದು ಈಗ ತಿಳಿಯೋಣ.
ಗಂಡ್ಮಕ್ಳೇ ಹುಷಾರ್: ರೋಬೋಟ್ಗಳೇ ಹೆಚ್ಚು ರೊಮ್ಯಾಂಟಿಕ್ ಅಂತಿದ್ದಾರೆ ಹೆಣ್ಮಕ್ಳು!
ಸಕ್ಕರೆ ಕಾಯಿಲೆ ನಿಯಂತ್ರಣ:
ಪೇರಲ ಎಲೆಗಳನ್ನು ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು. ಇದರಲ್ಲಿರುವ ಫೀನಾಲಿಕ್ ಸಂಯುಕ್ತವು ಹೈಪರ್ಗ್ಲೈಸೆಮಿಕ್ ವಿರೋಧಿ ಗುಣಗಳನ್ನು ಹೊಂದಿದೆ. ಇವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಹಾಗಾಗಿ ಮಧುಮೇಹಿಗಳು ಪೇರಲ ಎಲೆಗಳನ್ನು ಜಗಿಯುವುದು ತುಂಬಾ ಒಳ್ಳೆಯದು.
ಬಿಪಿ ನಿಯಂತ್ರಣ:
ಪೇರಲ ಎಲೆಗಳನ್ನು ತಿನ್ನುವುದರಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಬಹುದು. ಪೇರಲ ಹಣ್ಣಿನಂತೆ, ಎಲೆಗಳಲ್ಲಿ ಪೊಟ್ಯಾಸಿಯಮ್ ಮತ್ತು ಫೈಬರ್ ಇರುತ್ತದೆ. ಇವು ಬಿಪಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಹಾಗಾಗಿ ಬಿಪಿ ಇರುವವರು ಪೇರಲ ಹಣ್ಣನ್ನು ತಿಂದರೆ ಅಥವಾ ಎಲೆಗಳನ್ನು ಜಗಿಯಿದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ.
ತೂಕ ನಷ್ಟವಾಗುತ್ತದೆ:
ಪೇರಲ ಎಲೆಗಳನ್ನು ತಿನ್ನುವುದರಿಂದ ಅಧಿಕ ತೂಕದ ಸಮಸ್ಯೆಯೂ ಕಡಿಮೆಯಾಗುತ್ತದೆ. ಅದರಲ್ಲೂ ಹೊಟ್ಟೆಯ ಬೊಜ್ಜಿನ ಸಮಸ್ಯೆ ಇರುವವರು ಈ ಎಲೆಗಳನ್ನು ತಿಂದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ. ಇದರಲ್ಲಿರುವ ಸಂಯುಕ್ತಗಳು ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕರಗಿಸುತ್ತದೆ. ಇದು ಮಲಬದ್ಧತೆ ಸಮಸ್ಯೆಯನ್ನೂ ಕಡಿಮೆ ಮಾಡುತ್ತದೆ. ಇದರಿಂದ ನೀವು ಸುಲಭವಾಗಿ ತೂಕವನ್ನು ಕಳೆದುಕೊಳ್ಳುತ್ತೀರಿ.
ಜೀರ್ಣಾಂಗ ಆರೋಗ್ಯ:
ಪೇರಲ ಎಲೆಗಳನ್ನು ತಿನ್ನುವುದರಿಂದ ಜೀರ್ಣಕ್ರಿಯೆಯೂ ಉತ್ತಮಗೊಳ್ಳುತ್ತದೆ. ಹೊಟ್ಟೆಯ ಆರೋಗ್ಯ ಮತ್ತು ಕರುಳಿನ ಆರೋಗ್ಯ ಸುಧಾರಿಸುತ್ತದೆ. ಈ ಎಲೆಗಳು ಆಹಾರದ ಫೈಬರ್ ಅನ್ನು ಹೊಂದಿರುತ್ತವೆ. ಇದು ಹೊಟ್ಟೆಯ ಸಮಸ್ಯೆಗಳನ್ನು ತಡೆಯುತ್ತದೆ.