ಭೋಪಾಲ್:- ಮಧ್ಯ ಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಯಾರು? ಅವರ ಹಿನ್ನೆಲೆಯೇನು ಎಂಬುವುದನ್ನು ತಿಳಿಯೋಣ ಬನ್ನಿ.
ಒಬಿಸಿ ನಾಯಕ ಮತ್ತು ಮೂರು ಬಾರಿ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿನ್ನೆಲೆಯವರು ಎಂಬುದು ಮೋಹನ್ ಯಾದವ್ ಅವರ ಇತಿಹಾಸವಾಗಿದೆ.
ಅವರು ವಿದ್ಯಾರ್ಥಿಯಾಗಿದ್ದಾಗಲೇ ತಮ್ಮ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸಿ ಎತ್ತರಕ್ಕೆ ಏರುತ್ತಾ ಹೋಗಿ ಮಧ್ಯಪ್ರದೇಶ ಸರ್ಕಾರದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ಉಜ್ಜಯಿನಿ ದಕ್ಷಿಣ ಕ್ಷೇತ್ರದ 58 ವರ್ಷದ ಮೋಹನ್ ಯಾದವ್ ಮಧ್ಯ ಪ್ರದೇಶದಲ್ಲಿ ಉಮಾಭಾರತಿ, ಬಾಬುಲಾಲ್ ಗೌರ್ ಮತ್ತು ಶಿವರಾಜ್ ಸಿಂಗ್ ಚೌಹಾಣ್ ನಂತರ 2003 ರಿಂದ ಭಾರತೀಯ ಜನತಾ ಪಕ್ಷದಿಂದ ರಾಜ್ಯದ ನಾಲ್ಕನೇ ಒಬಿಸಿ ಸಮುದಾಯಕ್ಕೆ ಸೇರಿದ ಮುಖ್ಯಮಂತ್ರಿಯಾಗಿದ್ದಾರೆ. ಅವರು ಕಾಂಗ್ರೆಸ್ನ ಪ್ರಕಾಶ್ ಚಂದ್ರ ಸೇಥಿ ನಂತರ ಉಜ್ಜಯಿನಿಯಿಂದ ಆಯ್ಕೆಯಾದ ಎರಡನೇ ಮುಖ್ಯಮಂತ್ರಿಯಾಗಿದ್ದಾರೆ.
ಮೋಹನ್ ಯಾದವ್ ಅವರು ಇಂದು ಸಿಎಂ ಸ್ಥಾನ ಅಲಂಕರಿಸಿರುವುದು ಅಚ್ಚರಿಯ ವಿಷಯ. ಏಕೆಂದರೆ ಸಿಎಂ ಸ್ಥಾನದಲ್ಲಿ ಅವರ ಹೆಸರು ಕೇಳಿಬರಲೇ ಇಲ್ಲ. ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನ ದೇಶದ ಇತರ ಭಾಗಗಳಲ್ಲಿ ಸಂಖ್ಯಾತ್ಮಕವಾಗಿ ಮಹತ್ವದ ಇತರ ಹಿಂದುಳಿದ ವರ್ಗಗಳ ಸಮುದಾಯವನ್ನು ಗೆಲ್ಲಲು ಬಿಜೆಪಿಯ ನಡೆಯಿದು ಎಂದು ಹೇಳಲಾಗುತ್ತಿದೆ.
ಒಬಿಸಿ ಸಮುದಾಯದವರು ಮಧ್ಯಪ್ರದೇಶದ ಜನಸಂಖ್ಯೆಯ ಶೇಕಡಾ 48ರಷ್ಟಿದ್ದು, ಕೇಸರಿ ಪಕ್ಷದ ಪ್ರಮುಖ ಮತದಾರರ ಮೂಲವಾಗಿದೆ. ಮೋಹನ್ ಯಾದವ್ ಹುಟ್ಟು, ಬೆಳವಣಿಗೆ: ಮೋಹನ್ ಯಾದವ್ ಅವರು ಮಾರ್ಚ್ 25, 1965 ರಂದು ಉಜ್ಜಯಿನಿಯಲ್ಲಿ ಜನಿಸಿದರು, ಈ ಉಜ್ಜಯಿನಿ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಪ್ರಸಿದ್ಧ ಮಹಾಕಾಳೇಶ್ವರ ದೇವಾಲಯಕ್ಕೆ ಸಮಾನಾರ್ಥಕವಾಗಿದೆ. 1982 ರಲ್ಲಿ ಉಜ್ಜಯಿನಿಯ ಮಾಧವ ವಿಜ್ಞಾನ ಕಾಲೇಜಿನ ಜಂಟಿ ಕಾರ್ಯದರ್ಶಿಯಾಗಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು, ನಂತರ 1984 ರಲ್ಲಿ ಅದರ ಅಧ್ಯಕ್ಷರಾಗಿ ಆಯ್ಕೆಯಾದರು
ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಪತನದ ನಂತರ 2020 ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಾಗ ಮೋಹನ್ ಯಾದವ್ ಮಧ್ಯಪ್ರದೇಶದ ಉನ್ನತ ಶಿಕ್ಷಣ ಸಚಿವರಾಗಿ ಏರಿದರು, ಅಲ್ಲಿ ಅವರು ಹಿಂದೂ ಮಹಾಕಾವ್ಯ ‘ರಾಮಚರಿತಮಾನಸವನ್ನು 2021 ರಲ್ಲಿ ಕಾಲೇಜುಗಳಲ್ಲಿ ಐಚ್ಛಿಕ ವಿಷಯವನ್ನಾಗಿ ಘೋಷಿಸಿದರು..
ಪಿಎಚ್ಡಿ, ಎಲ್ಎಲ್ಬಿ ಮತ್ತು ಎಂಬಿಎ ಪದವಿಗಳನ್ನು ಹೊಂದಿರುವ ಮೋಹನ್ ಯಾದವ್ ಕತ್ತಿವರಸೆಯ ಕೌಶಲ್ಯವನ್ನೂ ಹೊಂದಿದ್ದಾರೆ. ಸೀಮಾ ಯಾದವ್ ಅವರನ್ನು ವಿವಾಹವಾಗಿರುವ ಮೋಹನ್ ಯಾದವ್ ಅವರಿಗೆ ಇಬ್ಬರು ಪುತ್ರರು ಮತ್ತು ಪುತ್ರಿ ಇದ್ದಾರೆ ಎಂದು ಹೇಳಲಾಗಿದೆ.