ಮಾವು ನಮ್ಮ ರಾಷ್ಟ್ರದ ಪ್ರಮುಖ ಹಣ್ಣಿನ ಬೆಳೆಯಾಗಿದೆ ಹಣ್ಣುಗಳ, ರುಚಿಕರವಾಗಿದ್ದು ”ಎ’ ಮತ್ತು ‘ಸಿ’ ಜೀವಸತ್ವಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿದೆ.
ಮಾವಿನ ಹಣ್ಣುಗಳನ್ನು ತಾಜಾರೂಪದಲ್ಲಿ ಮತ್ತು ಸಂಸ್ಕರಿಸಿದ ಪದಾರ್ಥಗಳ ರೂಪದಲ್ಲಿ ಉಪಯೋಗಿಸುತ್ತಾರೆ. ವಿದೇಶಗಳಲ್ಲಿ ಈ ಹಣ್ಣಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಹಣ್ಣು ಹಾಗೂ ಸಂಸ್ಕರಿಸಿದ ಪದಾರ್ಥಗಳನ್ನು ರಫ್ತು ಮಾಡಲಾಗುತ್ತಿದೆ.
ಮಾವಿನ ಬೆಳೆಯನ್ನುಎಲ್ಲಾವಿಧವಾದ, ಆಳವಾದ, ಚೆನ್ನಾಗಿ ನೀರು ಬಸಿದುಹೋಗುವಂತಹ ಮಣ್ಣಿನಲ್ಲಿ ಬೆಳೆಯಬಹುದು.
ರೈತರಿಗೆ ಗುಡ್ ನ್ಯೂಸ್: ಕೊಳವೆಬಾವಿ ವಿಫಲವಾದರೆ ಸರ್ಕಾರದಿಂದ ಈ ಹೊಸ ಯೋಜನೆ ಜಾರಿ!
ಮಾವಿನ ತಳಿಗಳು
1 ಆಲ್ಫಾನ್ಸ್ (Alphanso Mango): ಇದು ಅತಿ ಜನಪ್ರಿಯವಾದ ಸಾಮಾನ್ಯ ಗಾತ್ರದ ಉತ್ಕೃಷ್ಟ ಗುಣಮಟ್ಟದ ಹಣ್ಣು ಕೊಡುವ ತಳಿಯಾಗಿದ್ದು, ತಾಜಾ ಇಲ್ಲವೇ ಸರಣೆಯಾಗಿ ಉಪಯೋಗಿಸಬಹುದು.
ಈ ತಳಿಯು ಹೆಚ್ಚು ಮಳೆ ಮತ್ತು ತೇವಾಂಶಗಳಿಂದ ಕೂಡಿದ ಅರೆಮಲೆನಾಡು ಪ್ರದೇಶಗಳಲ್ಲಿ ಬಹಳ ಚೆನ್ನಾಗಿ ಬೆಳೆಯುತ್ತದೆ.
2. ಪೈರಿ (Payari Mango): ಇದು ಬೇಗ ಮಾಗುವ ತಳಿಯಾಗಿದ್ದು, ಮಧ್ಯಮ ಗಾತ್ರದ ಹಣ್ಣುಗಳನ್ನು ಕೊಡುತ್ತದೆ. ಹಣ್ಣುಗಳು ರುಚಿಕರ ಹಾಗೂ ರಸಭರಿತವಾಗಿದ್ದು ನಾರುರಹಿತ ತಿರುಳಿನಿಂದ ಕೂಡಿದೆ.
3. ತೋತಾಪುರಿ (Totapuri Mango): ಇದು ಪ್ರತಿ ವರ್ಷ ತಡವಾಗಿ ಇಳುವರಿ ಕೊಡುವ ತಳಿಯಾಗಿದ್ದು, ದೊಡ್ಡ ಗಾತ್ರದ ಹಣ್ಣುಗಳನ್ನು ಕೊಡುತ್ತದೆ. ಆದರೆ ಹಣ್ಣಿನ ರುಚಿ ಇತರ ತಳಿಗಳಷ್ಟು ಉತ್ತಮವಾಗಿಲ್ಲ. ಹಣ್ಣನ್ನು ಹೆಚ್ಚು ಕಾಲ ಕೆಡದಂತೆ ಇಡಬಹುದು. ಒಣ ಪ್ರದೇಶಗಳಲ್ಲೂ ಚೆನ್ನಾಗಿ ಬೆಳೆಯಬಹುದು
4. ಮಲ್ಲೋವ (Malgoa Mango): ಇದು ಕಡಿಮೆ ಸಂಖ್ಯೆಯ ಹಣ್ಣು ಕೊಡುವ ತಳಿಯಾಗಿದ್ದು ದೊಡ್ಡ ಗಾತ್ರದ ಉತ್ತಮ ಗುಣಮಟ್ಟದ ರುಚಿಕರವಾದ ಹಣ್ಣುಗಳನ್ನು ಕೊಡುತ್ತದೆ.
5. ನೀಲಂ (Neelam Mango): ಇದು ತಡವಾಗಿ ಬರುವ ತಳಿಯಾದರೂ ಪ್ರತಿ ವರ್ಷ ನಿಯಮಿತವಾಗಿ ಇಳುವರಿ ಕೊಡುತ್ತದೆ ತಡವಾಗಿ ಮಾಗುವ ತಳಿಯಾದುದರಿಂದ ಓಟಿಕೊರಕ ಕೀಟದ ಬಾಧೆಗೆ ತುತ್ತಾಗುತ್ತನೆ. ಒಣ ಪ್ರದೇಶಗಳಲ್ಲಿ ಬೆಳೆಯಲು ಸೂಕ್ತವಾಗಿದೆ.
6. ಬೆನೆಶಾನ್ ಬ0ಗನಪಲ್ಲಿ (Banganapalle mango): ಒಣ ಪ್ರದೇಶಗಳಲ್ಲಿ ಬೆಳೆ ಏಲು ಸೂಕ್ತ ತಳಿಯಾಗಿದ್ದು, ಹಣ್ಣಿನ ಗಾತ್ರ ಗುಣಮಟ್ಟ ಉತ್ತಮವಾಗಿದೆ.
7. ಖಾದರ್ (khadar mango): ಇದು ಅಲ್ಲಾನ್ನೋ ಮಾವಿನ ತಳಿಯ ಆಯ್ಕೆಯಾಗಿದ್ದು, ಒಣ ಪ್ರದೇಶಕ್ಕೆ ಹೆಚ್ಚು ಸೂಕ್ತವಾಗಿದೆ.
8. ಪಂಚಧಾರಾ ಕಳಸ (Panchadara Kalasa): ಇದು ರಸಭರಿತ ತಳಿಯಾಗಿದ್ದು ಪೈರಿ ತಳಿಯ ಬದಲಾಗಿ ಬೆಳೆಯಬಹುದು. ಇದು ವೈರಿ ಚಳಿಗಿಂತ ಹೆಚ್ಚು ಇಳುವರಿ ಕೊಡುತ್ತದೆ.