ಬೆಂಗಳೂರು: ಪ್ರತಿ ವರ್ಷ ಜೂನ್ 1ರಂದು ಪೋಷಕರ ಜಾಗತಿಕ ದಿನವನ್ನು ಆಚರಿಸಲಾಗುತ್ತದೆ. ಪ್ರಪಂಚದಾದ್ಯಂತ ಪೋಷಕರನ್ನು ಮೆಚ್ಚುವ ದಿನವಿದು. ಮಕ್ಕಳು ಮತ್ತು ಪೋಷಕರ ನಡುವಿನ ಅನನ್ಯ ಬಂಧವನ್ನು ಆಚರಿಸುವ ದಿನವಿದು. ಮಕ್ಕಳ ಸಂತೋಷವನ್ನು ಕಾಣುತ್ತಾ ಅವರ ರಕ್ಷಣೆಯಲ್ಲಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟ ಪಾಲಕರಿಗೆ ಈ ದಿನದಂದು ಶುಭಾಶಯ ಹೇಳಲೇಬೇಕು.
ಮಕ್ಕಳ ಪಾಲನೆ ಪೋಷಣೆ ಮಾಡುತ್ತಾ ಅವರ ಏಳಿಗೆಯನ್ನು ಬಯಸುವವರು ಪಾಲಕರು ಅಥವಾ ಪೋಷಕರು. ಮಕ್ಕಳ ರಕ್ಷಣೆಯ ಜತೆಗೆ ಅವರಿಗೆ ಕುಟುಂಬದ ಪ್ರೀತಿ, ವಾತ್ಸಲ್ಯ, ಮಮತೆಯ ಜತೆಗೆ ಉತ್ತಮ ವಾತಾವಣ ಇರಬೇಕು. ಅದು ಕುಟುಂಬದರವ ಜತೆಗೆ ಕೂಡಿ ಬಾಳಿದರೆ ಮಾತ್ರ ಸಾಧ್ಯ.
ಇತಿಹಾಸ 1993ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೇ 15ನೇ ತಾರೀಕಿನಂದು ಅಂತರಾಷ್ಟ್ರೀಯ ಕುಟುಂಬ ದಿನವನ್ನು ಆಚರಿಸಬೇಕು ಎಂಬುದನ್ನು ನಿರ್ಧರಿಸಿತು. ಕುಟುಂಬಗಳಲ್ಲಿ ಪೋಷಕರು ಪ್ರಮುಖ ಪಾತ್ರ ವಹಿಸುತ್ತಾರೆ ಆದುದರಿಂದ ಪೋಷಕರನ್ನು ಪ್ರಶಂಸಿಸಲು ಪೋಷಕರ ಜಾಗತಿಕ ದಿನವನ್ನು ಆಚರಿಸಬೇಕೆಂದು 2012ರಲ್ಲಿ ನಿರ್ಧರಿಸಲಾಯಿತು.
Job Alert: ಡಿಗ್ರಿ ಆಗಿದ್ರೆ ಸಾಕು.. ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ʼನಲ್ಲಿದೆ ಉದ್ಯೋಗಾವಕಾಶ.!
ಮಕ್ಕಳು ತಮ್ಮ ಕುಟುಂಬ ಪರಿಸರದಲ್ಲಿ ಪ್ರೀತಿ ಸಂತೋಷ ಮತ್ತು ತಿಳುವಳಿಕೆಯಿಂದ ಬಾಳಬೇಕು ಹಾಗೂ ಒಳ್ಳೆಯ ವಾತಾವಣದಲ್ಲಿ ಮಕ್ಕಳು ಬೆಳೆಯಬೇಕು ಪೋಷಕರ ಪಾತ್ರ ದೊಡ್ಡದು. ಮಕ್ಕಳ ಪೋಷಣೆ ಜತೆಗೆ ರಕ್ಷಣೆ ಮಾಡುವಲ್ಲಿ ಪ್ರಾಥಮಿಕ ಜವಾಬ್ದಾರಿ ಪಾಲಕರಿಗಿದೆ ಹಾಗಾಗಿ ಪೋಷಕರನ್ನು ಪ್ರಶಂಸಿಸಲು ಪಾಲಕರ ದಿನವನ್ನು ಆಚರಿಸಲು ನಿರ್ಧಾರ ಕೈಗೊಳ್ಳಲಾಯಿತು.
ಈ ವರ್ಷದ ವಿಶೇಷ ಸಂದೇಶ: ಜಾಗತಿಕವಾಗಿ ಪೋಷಕರ ಜವಾಬ್ದಾರಿಯನ್ನು ಹೆಚ್ಚಿಸಿದೆ. ಮನೆಯವರಿಗೆ ನೋವಾಗದಂತೆ ಹಾಗೂ ಮಕ್ಕಳ ಸುರಕ್ಷತೆಯನ್ನು ಬಯಸುವವರು ಪಾಲಕರು. ಪ್ರಸ್ತುತ ಸಂದರ್ಭದಲ್ಲಿ ಮನೆಯೇ ಮಕ್ಕಳ ಶಾಲೆಯಾಗಿದೆ. ಈ ಸಂದರ್ಭದಲ್ಲಿ ಅವರ ಜೀವನ ಮೌಲ್ಯವನ್ನು ಕಟ್ಟಿಕೊಡುವಲ್ಲಿ ಪೋಷಕರ ಪಾತ್ರ ದೊಡ್ಡದು. ಆದ್ದರಿಂದ ಈ ವರ್ಷ ‘ವಿಶ್ವದ ಎಲ್ಲ ಪಾಲಕ-ಪೋಷಕರಿಗೆ ಶ್ಲಾಘನೆ’ ಎಂಬುದು ಈ ವರ್ಷದ ವಿಶೇಷ ಸಂದೇಶವಾಗಿದೆ.
ಅವರ ಒತ್ತಡದ ಕೆಲಸದ ನಡುವೆಯೂ ತಮ್ಮ ಮಕ್ಕಳನ್ನು ಜವಾಬ್ದಾರಿಯಿಂದ ರಕ್ಷಿಸುತ್ತಿದ್ದಾರೆ. ಮಕ್ಕಳಿಗೆ ಆರ್ಥಿಕವಾಗಿ ಸಹಾಯ ಮಾಡುವುದಲ್ಲದೇ, ಮಾನಸಿಕ ಮತ್ತು ಮೂಲಭೂತ ಬೆಂಬಲವನ್ನು ನೀಡುತ್ತಿರುವ ಪೋಷಕರಿಗೆ ಇಂದಿನ ದಿನವನ್ನು ಸಮರ್ಪಿಸಲಾಗುತ್ತಿದೆ.
ಅಮೆರಿಕದ ಪ್ರತಿ ರಾಜ್ಯವು ಉತ್ತಮ ಪೋಷಕರನ್ನು ನಾಮನಿರ್ದೇಶನ ಮಾಡುತ್ತದೆ. ಮಕ್ಕಳ ಆರೈಕೆಯಲ್ಲಿ ಅವರ ಸೇವಾ ಕೈಂಕರ್ಯ ಉದಾಹರಿಸುತ್ತಾ ಗುಣಗಾನ ಮಾಡಿ, ಅವರನ್ನು ವರ್ಷದ ರಾಷ್ಟ್ರೀಯ ಪೋಷಕರ ಪ್ರಶಸ್ತಿ ನೀಡುತ್ತಾರೆ. ಅಂತಾರಾಷ್ಟ್ರೀಯ ಅಧ್ಯಯನಗಳು ಹೇಳುವಂತೆ, ಭಾರತೀಯ ಪೋಷಕರು ತಮ್ಮ ಮಕ್ಕಳ ಬಗ್ಗೆ ಇತರೆ ರಾಷ್ಟ್ರೊಗಳಿಗೆ ಹೆಚ್ಚು ಕಾಳಜಿ ವಹಿಸುತ್ತಾರೆ ಎಂಬುದನ್ನು ಶ್ಲಾಘಿಸಿವೆ.
ವಿಶ್ವಾದ್ಯಂತ ಕಾಲು ಭಾಗದಷ್ಟು ಪೋಷಕರು ತಮ್ಮ ಮಕ್ಕಳಿಗೆ ವಾರದಲ್ಲಿ ಏಳು ಅಥವಾ ಅದಕ್ಕಿಂತ ಹೆಚ್ಚು ಗಂಟೆಗಳ ಕಾಲ ಅವರ ಅಧ್ಯಯನಕ್ಕೆ ನೆರವಾಗುತ್ತಾರೆ. ಕೊಲಂಬಿಯಾದಲ್ಲಿ ಶೇ 39ರಷ್ಟು, ವಿಯೆಟ್ನಾಂನಲ್ಲಿ ಶೇ 50ರಷ್ಟು ಮತ್ತು ಭಾರತದಲ್ಲಿ ಶೇ 62ರಷ್ಟಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಈ ಪ್ರಮಾಣವು ನಾಟಕೀಯವಾಗಿ ಬೀಳುತ್ತದೆ. ಇಂಗ್ಲೆಂಡ್ನಲ್ಲಿ ಕೇವಲ ಶೇ 11ರಷ್ಟು, ಫ್ರಾನ್ಸ್ ಮತ್ತು ಜಪಾನ್ನಲ್ಲಿ ಶೇ 10, ಮತ್ತು ಫಿನ್ಲ್ಯಾಂಡ್ನಲ್ಲಿ ಶೇ 5ರಷ್ಟು ಪೋಷಕರು ಮಾತ್ರ ಶಾಲೆ ಬಿಟ್ಟ ಬಳಿಕ ತಮ್ಮ ಮಕ್ಕಳಿಗೆ ಸಹಾಯ ಮಾಡುತ್ತಾರೆ.