ಲೈಂಗಿಕತೆ ಎಂದರೆ ಕೇವಲ ಸಂತೃಪ್ತಿ ಪಡೆಯುವುದು ಮಾತ್ರ ಆಗಿರುವುದಿಲ್ಲ. ಬದಲಾಗಿ ಪುರುಷರ ಮತ್ತು ಮಹಿಳೆಯರ ಭಾವನಾತ್ಮಕ ಸಂಬಂಧ ಸೆಕ್ಸ್ನಿಂದ ವೃದ್ಧಿಸುತ್ತದೆ. ಹೀಗಾಗಿ ಇಬ್ಬರಿಗೂ ಸೂಕ್ತವಾದ ಸಮಯವನ್ನು ಆರಿಸಿಕೊಳ್ಳುವ ಬಗ್ಗೆ ಕೂಡ ಗಮನ ಹರಿಸಬೇಕಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ವೈಯಕ್ತಿಕ ಮತ್ತು ನಿಕಟ ಅನುಭವವಾಗಿದೆ. ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಡುವ ಈ ಕ್ರಿಯೆ ಪ್ರತಿಯೊಬ್ಬರಿಗೂ ಅಗತ್ಯವೆಂಬುವುದೂ ಎಲ್ಲರಿಗೂ ಗೊತ್ತು.
ಈ ಬಗ್ಗೆ ಮಡಿವಂತಿಕೆ ಏನೇ ಇದ್ದರೂ, ಅರಿವಿನ ಅಗತ್ಯವೂ ಇದೆ. ಲೈಂಗಿಕ ಆರೋಗ್ಯ ಪ್ರತಿಯೊಬ್ಬರಿಗೂ ಅತ್ಯಗತ್ಯ. ‘ಸೆಕ್ಸ್ನಲ್ಲಿ ಸಕ್ರಿಯವಾಗಿ, ನಿಯಮಿತವಾಗಿ, ಒಳ್ಳೆ ಮನಸ್ಸಿನಿಂದ ಭಾಗಿಯಾದರೆ ಹೃದ್ರೋಗವೇ ಬರುವುದಿಲ್ಲ,’ ಎಂದು ಸಂಶೋಧನೆಯೊಂದು ದೃಢಪಡಿಸಿದೆ.
ಅದರಲ್ಲಿಯೂ ಈಗಿನ ಒತ್ತಡದ ಬದುಕಿನಲ್ಲಿ ಖಿನ್ನತೆ ಎಲ್ಲರನ್ನೂ ಕಾಡುತ್ತದೆ. ಆದರೆ, ಆಗಾಗ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದರಿಂದ ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳುವ ಹಾರ್ಮೋನ್ಗಳು ಸೂಕ್ತ ಪ್ರಮಾಣದಲ್ಲಿ ಉತ್ಪತ್ತಿಯಾಗಿ, ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳಲೂ ನೆರವಾಗುತ್ತದೆ.
ಸದಾ ಕೆಲಸ ಮಾಡುವವರಿಗೆ ತಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಲಾಗದಷ್ಟು ಬಿಡುವಿರುವುದಿಲ್ಲ ಇದರಿಂದ ಹೆಚ್ಚಾಗಿ ಜಗಳ ಮತ್ತು ಮನಸ್ತಾಪ ಉಂಟಾಗುತ್ತದೆ. ಸಂಶೋಧನೆಯ ಪ್ರಕಾರ ಸುಖವಾದ ಜೀವನ ನಡೆಸುತ್ತಿರುವ ದಂಪತಿ ವರ್ಷಕ್ಕೆ 54 ಸಲವಾದರೂ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುತ್ತಾರಂತೆ!
ವಾರಕ್ಕೆಷ್ಟು ಸಲ ಸೆಕ್ಸ್ ಓಕೆ?
ಈ ಸಂಶೋಧನೆಯ ಪ್ರಕಾರ ವಾರಕ್ಕೆ ಒಂದೆರಡು ಬಾರಿ ಸೆಕ್ಸ್ ನಡೆಸುವುದರಿಂದ ಮನಸ್ಸಿಗೆ ನೆಮ್ಮದಿ ಮತ್ತು ತೃಪ್ತಿ ಸಿಗಲಿದೆ. ಇದಕ್ಕಿಂತ ಹೆಚ್ಚಿನ ಬಾರಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡರೆ ಆಯಾಸಭಾವ ಕಾಡಬಹುದು. ಇದು ಒಬ್ಬ ವ್ಯಕ್ತಿಯ ಆರೋಗ್ಯದ ಮೇಲೆ ಅವಲಂಭಿತವಾಗಿರುತ್ತದೆ. ದಂಪತಿಗಳು ಲೈಂಗಿಕ ಸಂಬಂಧಕ್ಕಿಂತ ರೋಮ್ಯಾನ್ಸ್ ಸೇರಿದಂತೆ ಇತರೆ ರೀತಿಯ ಚಟುವಟಿಕೆಗಳಲ್ಲಿ ಭಾಗಿಯಾಗುವುದು ಇನ್ನೂ ಉತ್ತಮ.
ಇಂತಹ ಚಟುವಟಿಕೆಯಿಂದ ದಂಪತಿಗಳ ನಡುವೆ ಅನೋನ್ಯತೆ ಇನ್ನೂ ಹೆಚ್ಚಾಗುತ್ತದೆ ಎಂದು ಸಂಶೋಧನೆಯಿಂದ ಸಾಬೀತಾಗಿದೆ. ಒಟ್ಟಿನಲ್ಲಿ ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಮತ್ತು ಪ್ರೀತಿ ಮೂಡಲು ಆಗಾಗ್ಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವುದು ಈ ಅಧ್ಯಯನದಿಂದ ದೃಢಪಟ್ಟಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಸುಖಕರವಾದ ದಾಂಪತ್ಯ ಜೀವನ ನಿಮ್ಮದಾಗಬೇಕಿದ್ದರೆ ವರ್ಷಕ್ಕೆ 54 ಸಲವಾದರೂ ತಮ್ಮ ಸಂಗಾತಿಯೊಂದಿಗೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕೆಂದು ಸಂಶೋಧಕರು ಅಭಿಪ್ರಾಯಪಡುತ್ತಾರೆ. 18-29 ನಡುವಿನ ವಯಸ್ಸಿನವರು ವರ್ಷಕ್ಕೆ 112 ಬಾರಿ ಸೆಕ್ಸ್ ನಡೆಸುವುದು ಸೂಕ್ತ.
ಹಾಗೆಯೇ 30 ರಿಂದ 39 ವಯಸ್ಸಿನವರು ವರ್ಷಕ್ಕೆ 86 ಬಾರಿ, 40 ರಿಂದ 49 ವರ್ಷಕ್ಕೆ 69 ಸಲ ಲೈಂಗಿಕ ಸಂಬಂಧದಲ್ಲಿ ತೊಡಗಿಸಿಕೊಳ್ಳುವುದು ಉತ್ತಮ ಎಂದಿದ್ದಾರೆ. ಅಲ್ಲದೆ ವರ್ಷಕ್ಕೆ 54ಕ್ಕಿಂತ ಹೆಚ್ಚಿನ ಬಾರಿ ಸೆಕ್ಸ್ನಲ್ಲಿ ತೊಡಗಿಸಿಕೊಳ್ಳುವ ಜೋಡಿಗಳ ಸಂಬಂಧ ಕೂಡ ಉತ್ತಮವಾಗಿರುತ್ತದೆ ಎಂದು ಈ ಅಧ್ಯಯನದಿಂದ ಸಾಬೀತಾಗಿದೆ.