ಹೊಟ್ಟೆ ಸ್ವಚ್ಛವಾಗ್ಬೇಕೆಂದ್ರೆ ಮಲವಿಸರ್ಜನೆ ಸರಿಯಾಗಿ ಆಗ್ಬೇಕು. ದಿನಕ್ಕೆ ಒಂದು ಬಾರಿ ಮಲವಿಸರ್ಜನೆ ಮಾಡದೆ ಹೋದ್ರೆ ಆರೋಗ್ಯ ಸಮಸ್ಯೆ ನಮ್ಮನ್ನು ಕಾಡುತ್ತದೆ. ಆದರೆ ಇಂದಿನ ದಿನಗಳಲ್ಲಿ ಬಹಳಷ್ಟು ಜನರು ಪ್ರತಿ ದಿನ ಬೆಳಗ್ಗೆ ಸಮಯದಲ್ಲಿ ಮಲವಿಸರ್ಜನೆ ಮಾಡಲು ತುಂಬಾ ಕಷ್ಟಪಡುತ್ತಾರೆ.
ಇದಕ್ಕೆ ಪ್ರಮುಖ ಕಾರಣ, ಅನಾರೋಗ್ಯಕಾರಿ ಆಹಾರ ಪದ್ಧತಿ ಹಾಗೂ ಜಡ ಜೀವನಶೈಲಿಯಿಂದಾಗಿ ಜೀರ್ಣಾಂಗ ವ್ಯವಸ್ಥೆಯ ಕಾರ್ಯ ನಿರ್ವಹಣೆಯಲ್ಲಿ ವ್ಯತ್ಯಾಸ ಕಂಡು ಬರುವುದರಿಂದ, ಈ ಸಮಸ್ಯೆ ಹೆಚ್ಚಿನವರಲ್ಲಿ ಕಂಡು ಬರುತ್ತಿದೆ. ಇನ್ನೂ ಎಷ್ಟು ಬಾರಿ ಮಲವಿಸರ್ಜನೆ ಮಾಡುತ್ತಾನೆ ಎಂಬ ಆಧಾರದ ಮೇಲೆ ಅವನ ದೀರ್ಘಕಾಲೀನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಸೆಲ್ ರಿಪೋರ್ಟ್ಸ್ ಮೆಡಿಸಿನ್ ನಲ್ಲಿ ಪ್ರಕಟವಾದ ಹೊಸ ಅಧ್ಯಯನ ತಿಳಿಸಿದೆ.
ಮಲವಿಸರ್ಜನೆ ದಿನಕ್ಕೆಷ್ಟು ಬಾರಿ ಆಗಬೇಕು ಅಥವಾ ಫ್ರೀಕ್ವೆನ್ಸಿ ಹೇಗಿರಬೇಕು?
ಮಲವಿಸರ್ಜನೆ ದಿನದಲ್ಲಿ ಎಷ್ಟು ಬಾರಿ ಆಗಬೇಕು ಎನ್ನುವುದು ತಿಳಿಯುವುದೂ ಕೂಡಾ ಅತ್ಯಗತ್ಯವಾದ ವಿಷಯವಾಗಿದೆ. ಬೆಳಗ್ಗಿನ ಸಮಯದಲ್ಲಿ ಎದ್ದ ಕೂಡಲೇ ಮಲವಿಸರ್ಜಿಸುವುದು ಸಾಮಾನ್ಯ ಸಂಗತಿಯಾಗಿದೆ. ನೀವು ತೆಗೆದುಕೊಳ್ಳುವ ಆಹಾರದ ಬಗ್ಗೆ ಸರಿಯಾಗಿದೆ ಎಂದಾದರೆ, ಅಂದರೆ ಯಾವುದೇ ಜಂಕ್ ಫುಡ್ ತಿನ್ನದೇ ಉತ್ತಮ ಆಹಾರ ತೆಗೆದುಕೊಳ್ಳುತ್ತಿರುವಿರಿ ಎಂದಾದಲ್ಲಿ ಅಥವಾ ಯಾವುದೇ ಮಲವಿಸರ್ಜನೆ ಅಥವಾ ಅದರ ಫ್ರಿಕ್ವೆನ್ಸಿಯ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಬರುವುದಿಲ್ಲ.
ಆರೋಗ್ಯಕರ ದೇಹದಲ್ಲಿ ಉಗುರು ಬೆಚ್ಚಗಿನ ನೀರು ಒಂದರಿಂದ ಎರಡು ಲೋಟ ಕುಡಿದ ಹತ್ತು ನಿಮಿಷದಲ್ಲಿ ಒಂದರಿಂದ ಎರಡು ಸಲ ಅಂದ್ರೆ ಮೋಷನ್ ಸಾಮಾನ್ಯವಾಗಿ ಆಗುತ್ತದೆ. ಅಥವಾ ಒಂದರ್ಧ ಗಂಟೆ ಬಿಟ್ಟು ಮತ್ತೊಮ್ಮೆ ಮೋಷನ್ ಪೂರ್ತಿಯಾಗಿ ಆಗುವ ಸಾಧ್ಯತೆಗಳಿರುತ್ತವೆ. ಇದೂ ಕೂಡಾ ಸಾಮಾನ್ಯ ವಿಷಯವಾಗಿರುತ್ತದೆ. ಅಷ್ಟೇ ಅಲ್ಲದೆ ನೀವು ತೆಗೆದುಕೊಳ್ಳುವ ಆಹಾರಕ್ಕೆ ಅನುಗುಣವಾಗಿ ಇನ್ನೊಂದೆರಡು ಸಲ ಹೆಚ್ಚಾಗಿ ದಿನದಲ್ಲಿ ಮಲ ವಿಸರ್ಜನೆ ಆದರೂ ಆಗಬಹುದು ಅಂದ್ರೆ ಒಂದರಿಂದ ಮೂರು ಸಲ ಆಗಬಹುದು ಇದೂ ಕೂಡ ಸಾಮಾನ್ಯ ವಿಷಯವಾಗಿದ್ದು, ಸಮಸ್ಯೆ ಎಂದು ಪರಿಗಣಿಸಲಾಗುವುದಿಲ್ಲ.
ಆರೋಗ್ಯವಾಗಿರಲು ನೀವು ಎಷ್ಟು ಬಾರಿ ಮಲವಿಸರ್ಜನೆ ಮಾಡಬೇಕು?
ಅನಿಯಮಿತವಾಗಿ ಮಲವಿಸರ್ಜನೆಯಾಗುವುದನ್ನು ವೈದ್ಯರು ಆಗಾಗ ತಳ್ಳಿಹಾಕುತ್ತಾರೆ ಎಂದು ಇನ್ಸ್ಟಿಟ್ಯೂಟ್ ಫಾರ್ ಸಿಸ್ಟಮ್ಸ್ ಬಯಾಲಜಿಯ ಸಂಶೋಧಕರು ತಿಳಿಸಿದ್ದು ಇದರ ಬಗ್ಗೆ ಸರಿಯಾದ ತೀರ್ಮಾನಕ್ಕೆ ಬರಲು, ತಜ್ಞರು 1,400 ಕ್ಕೂ ಹೆಚ್ಚು ಆರೋಗ್ಯವಂತ ವಯಸ್ಕರ ಮೇಲೆ ಅಧ್ಯಯನ ನಡೆಸಲಾಗಿದ್ದು ಜೀವನಶೈಲಿ, ಮತ್ತಿತರ ವಿಷಯಗಳ ಆಧಾರದ ಮೇಲೆ ಮಾಹಿತಿ ಸಂಗ್ರಹಿಸಿದ್ದರು. ಈ ವರದಿ ಮಾಡಿದ ಬಳಿಕ ಕರುಳಿನ ಆವರ್ತನಗಳನ್ನು ಅಂದರೆ ಮಲವಿಸರ್ಜನೆಗೆ ಹೋಗುವುದನ್ನು ಅವಲಂಬಿಸಿ, ಭಾಗವಹಿಸಿದವರನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಿದೆ.
ಮಲಬದ್ಧತೆ – ವಾರದಲ್ಲಿ ಒಂದು ಅಥವಾ ಎರಡು ಬಾರಿ
ಕಡಿಮೆ ಸಾಮಾನ್ಯ – ವಾರಕ್ಕೆ ಮೂರರಿಂದ ಆರು ಬಾರಿ
ಹೆಚ್ಚಿನ ಸಾಮಾನ್ಯ – ದಿನಕ್ಕೆ ಒಂದರಿಂದ ಮೂರು ಅತಿಸಾರ
ಭೇದಿ ಮತ್ತು ಅದರ ಲಕ್ಷಣಗಳು
ಕೆಲವರಲ್ಲಿ ನೀರಿನಾಂಶ ಕಡಿಮೆ ಆದ ಸಮಯದಲ್ಲಿ ಲೂಸ್ ಮೋಷನ್ ಅಥವಾ ಭೇದಿ ಆಗಬಹುದು. ಭೇದಿಯ ಜೊತೆಗೆ ಲೋಳೆ ಲೋಳೆಯಾಗಿ ಮಲವಿಸರ್ಜನೆಯಾಗುತ್ತಿದೆ ಅಂದರೆ ಅದರ ಅರ್ಥ ಒಂದೋ ಇನ್ಫೆಕ್ಷನ್ ಆಗಿದೆ ಅಂದ್ರೆ ಜೀರ್ಣಕ್ರಿಯೆ ನಡೆಸುವ ಮಾರ್ಗದಲ್ಲಿ ಇನ್ಪೆಕ್ಷನ್ ಆಗಿದೆ ಅಥವಾ ಇನ್ಫ್ಲಮೇಷನ್ ಆಗಿರುತ್ತದೆ., ಇನ್ಫ್ಲಮೇಷನ್ ಎಂದರೆ ಒಳಗಡೆ ಸ್ವೆಲ್ಲಿಂಗ್ ಅಥವಾ ಊತ ತರ ಆಗಿರುತ್ತದೆ.
ಈ ಊತ ಇನ್ಫೆಕ್ಷನ್ ನಿಂದ ಕೂಡಾ ಆಗಿರಬಹುದು. ಕೆಲವೊಂದು ಸಂದರ್ಭದಲ್ಲಿ ಈ ಭೇದಿ ಆಗುವುದು ಅಥವಾ ಗಂಟು ಗಂಟಾಗಿ ಮಲ ವಿಸರ್ಜನೆಯಾಗುವುದು ಸಾಮಾನ್ಯವಾದ ವಿಷಯವಾಗಿರುತ್ತದೆ. ಇದಕ್ಕೆ ನಾನಾ ಕಾರಣಗಳನ್ನು ಕೊಡಬಹುದು.
ಬೇರೆ ಊರಿಗೆ ಪ್ರಯಾಣ ಮಾಡುವುದರಿಂದ ಅಥವಾ ಆಹಾರದಲ್ಲಿ ವ್ಯತ್ಯಾಸ ಆಗುವುದರಿಂದ ಅಥವಾ ಆಹಾರ ತೆಗೆದುಕೊಳ್ಳುವ ಸಮಯದಲ್ಲಿ ವ್ಯತ್ಯಾಸವಾಗಬಹುದು. ಇದರಿಂದ ಸಾಮಾನ್ಯವಾಗಿ ದೈನಂದಿನ ಚಟುವಟಿಕೆಗಳಲ್ಲಿ ಅಥವಾ ಆಹಾರದಲ್ಲಿ ಏರುಪೇರುಂಟಾಗಬಹುದು.
ಹಾಗೆಯೇ ಇನ್ನು ಕೆಲವೊಮ್ಮೆ ಹವಾಮಾನ ವೈಪರೀತ್ಯಕ್ಕೆ ದೇಹ ಹೊಂದಿಕೊಳ್ಳುವ ತನಕ ಮೋಷನ್ ಅಥವಾ ಮಲವಿಸರ್ಜನೆಯ ಸಮಸ್ಯೆ ಆಗಬಹುದು.
ಆದರೆ ಈ ಭೇದಿ ಅಥವಾ ಗಂಟು ಗಂಟಾಗಿ ಮಲವಿಸರ್ಜನೆಯು ಬಹಳ ಕಾಲದ ತನಕ ಆಗುತ್ತಿದ್ದಲ್ಲಿ ಆ ದೇಹದಲ್ಲಿ ಸಮಸ್ಯೆ ಇದೆ ಅಂತ ಅರ್ಥವಾಗಿದ್ದು, ಇದರ ಬಗ್ಗೆ ಖಂಡಿತವಾಗಿಯೂ ಗಮನ ಹರಿಸಲೇಬೇಕು ಹಾಗೂ ತಜ್ಞ ವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯವಾಗುತ್ತದೆ.