ಬೆಂಗಳೂರು: ನಗರದ ಕೆ.ಆರ್ ಸರ್ಕಲ್ ಬಳಿ ಬಿಬಿಬಿಎಂಪಿ ಕಸದ ಲಾರಿ ಹಾಗೂ ಬೈಕ್ ನಡುವೆ ಅಪಘಾತವಾಗಿ ಇಬ್ಬರು ಮಹಿಳೆಯರು ಮೃತಪಟ್ಟ ಘಟನೆ ಬೆಂಗಳೂರಿನ ಥಣಿಸಂದ್ರದಲ್ಲಿ ನಡೆದಿದೆ. ನಾಜಿಯಾ ಸುಲ್ತಾನ ಹಾಗೂ ನಾಜಿಯ ಇರ್ಫಾನ ಸ್ಥಳದಲ್ಲೇ ಮೃತಪಟ್ಟ ಮಹಿಳೆಯರು.
ಮಹಿಳೆಯರು TVS ಜುಪಿಟರ್ನಲ್ಲಿ ಹೋಗುತ್ತಿದ್ದಾಗ, ಥಣಿಸಂದ್ರದ ಜ್ಯುಡಿಯೋ ಮುಂಭಾಗ ಅಪಘಾತ ನಡೆದಿದೆ. ಹಿಂಬದಿಯಿಂದ ಬಂದ ಕಸದ ಲಾರಿ ಡಿಕ್ಕಿ ಸ್ಕೂಟರ್ಗೆ ಡಿಕ್ಕಿ ಹೊಡೆದಿದೆ. ವೇಗವಾಗಿ ಇದ್ದ ಲಾರಿ ಇಬ್ಬರು ಮೇಲೆ ಹರಿದ ಪರಿಣಾಮ, ಸ್ಥಳದಲ್ಲೇ ಸಾವನಪ್ಪಿದ್ದಾರೆ.
ದಾಲ್ಚಿನ್ನಿ ಎಲೆ ಅಡುಗೆಗೆ ಮಾತ್ರವಲ್ಲ ದೇಹಕ್ಕೂ ನೀಡುತ್ತದೆ ಆರೋಗ್ಯಕಾರಿ ಪ್ರಯೋಜಗಳು!
ಮೃತದೇಹಗಳನ್ನು ಯಲಹಂಕದ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಈಗ ಮರಣೋತ್ತರ ಪರೀಕ್ಷೆಗಾಗಿ ಯಲಹಂಕ ಸರ್ಕಾರಿ ಆಸ್ಪತ್ರೆಯಿಂದ ಅಂಬೇಡ್ಕರ್ ಆಸ್ಪತ್ರೆಗೆ ಮೃತದೇಹಗಳ ರವಾನೆ ಮಾಡಲಾಗಿದೆ. ಬಿಬಿಎಂಪಿ ಕಸದ ಲಾರಿ ಚಾಲಕ ಗಾದಿಲಿಂಗ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.