ಬೆಂಗಳೂರು: ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಕೆಲ ತಿಂಗಳಿಂದ ಬ್ರೇಕ್ ಬಿದ್ದಿದೆ. ಆದರೂ, ಹಲವು ನಗರಗಳಲ್ಲಿ ಬೆಲೆಯಲ್ಲಿ ಏರಿಕೆ, ಇಳಿಕೆ ಕಂಡು ಬರುತ್ತಿದೆ. ಇನ್ನು, ಕಚ್ಚಾ ತೈಲ ದರ ಏರುತ್ತಿರುವುದನ್ನು ಗಮನಿಸಿದರೆ ಮತ್ತೆ ದೇಶದ ಎಲ್ಲ ಕಡೆ ಇಂಧನ ದರ ಮತ್ತಷ್ಟು ದುಬಾರಿಯಾಗುತ್ತದಾ ಎಂಬ ಆತಂಕವೂ ಮೂಡುತ್ತದೆ.
ಮತಗಟ್ಟೆಗೆ ಮೊಬೈಲ್ ಫೋನ್ ತೆಗೆದುಕೊಂಡು ಹೋಗುತ್ತಿದ್ದೀರಾ!?.. ಹಾಗಿದ್ರೆ ಈ ಸುದ್ದಿ ಓದಿ!
ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್ (Petrol rate), ಡೀಸೆಲ್ ಬೆಲೆಯಲ್ಲಿ (diesel rate)ವ್ಯತ್ಯಾಸವಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ.
ದೇಶದ ಮೆಟ್ರೋಪಾಲಿಟನ್ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದೆಹಲಿ : ಪೆಟ್ರೋಲ್ 94.72 ರೂ. ಮತ್ತು ಡೀಸೆಲ್ 87.62 ರೂ. ಮುಂಬೈ: ಪೆಟ್ರೋಲ್ 104.21 ರೂ. ಮತ್ತು ಡೀಸೆಲ್ 92.15 ರೂ ಬೆಂಗಳೂರು: ಪೆಟ್ರೋಲ್ 99.84 ರೂ. ಮತ್ತು ಡೀಸೆಲ್ ಲೀಟರ್ ಗೆ 85.93 ರೂ.,
ಲಕ್ನೋ: ಪೆಟ್ರೋಲ್ 94.65ರೂ. ಮತ್ತು ಡೀಸೆಲ್ 87.76 ರೂ. ನೋಯ್ಡಾ: ಪೆಟ್ರೋಲ್ ರೂ. 94.83 ಮತ್ತು ಡೀಸೆಲ್ 87.96 ರೂ. ಚಂಡೀಗಢ: ಪೆಟ್ರೋಲ್ 94.24 ರೂ. ಮತ್ತು ಡೀಸೆಲ್ 82.40 ರೂ. ಪ್ರತಿ ಲೀಟರ್ ಪಾಟ್ನಾ: ಪೆಟ್ರೋಲ್ ರೂ 105.18 ಮತ್ತು ಡೀಸೆಲ್ ರೂ 92.04 ರೂ.