ಅಭಿವೃದ್ಧಿ ಹೊಂದುತ್ತಿರುವ ಕಾರ್ಮಿಕ ಶಕ್ತಿ, ಕ್ಷಿಪ್ರ ನಗರೀಕರಣ, ಸ್ಮಾರ್ಟ್ಫೋನ್ಗಳ ಬಳಕೆ ಹಾಗೂ ಸುಧಾರಿತ ತಂತ್ರಜ್ಞಾನಗಳ ಸೌಕರ್ಯಗಳೊಂದಿಗೆ ನಮ್ಮ ದೇಶ ಕೂಡಾ ಸ್ವಯಂ ಉದ್ಯೋಗದತ್ತ ದಾಪುಗಾಲಿಡುತ್ತಿದೆ.
ಭಾರತೀಯ ಗಿಗ್ ವರ್ಕ್ಫೋರ್ಸ್ 2029-30ರ ವೇಳೆಗೆ 23.5 ಮಿಲಿಯನ್ ಕಾರ್ಮಿಕರಿಗೆ ವಿಸ್ತರಿಸುವ ನಿರೀಕ್ಷೆಯಿದ್ದು, ಇದು ಪ್ರಸ್ತುತ ಇರುವ 7.7 ಮಿಲಿಯನ್ನಿಂದ ಸುಮಾರು 200% ರಷ್ಟು ಜಿಗಿತವಾಗಿದೆ. ಗಿಗ್ ಆರ್ಥಿಕತೆ ಹಾಗೂ ಚಂಚಲವಾದ ಮಾರುಕಟ್ಟೆಯ ಮೂಲಕ ಹೇಗೆ ಸಾಗುವುದು ಎಂಬುದರ ಕುರಿತು ಹೆಚ್ಚು ಅಧ್ಯಯನ ಮಾಡುವ ಮೊದಲು, ಗಿಗ್ ಆರ್ಥಿಕತೆ ಎಂದರೇನು ತಿಳಿಯೋಣ!
ಗಿಗ್ ಆರ್ಥಿಕತೆಯು ಮುಕ್ತ ಮಾರುಕಟ್ಟೆ ವ್ಯವಸ್ಥೆಯನ್ನು ಪ್ರತಿನಿಧಿಸುತ್ತದೆ. ಇಲ್ಲಿ ತಾತ್ಕಾಲಿಕ ಉದ್ಯೋಗ ನಿರ್ವಹಣೆಯನ್ನು ಒಡಂಬಡಿಕೆಗಳ ಮೇಲೆ ಮಾಡಲಾಗುತ್ತದೆ. ಸಂಕ್ಷಿಪ್ತ ಒಪ್ಪಂದದ ಜವಾಬ್ದಾರಿಯನ್ನು ಹೊಂದಿರುವ ಹಾಗೂ ಕಂಪನಿಯ ವೇತನದಾರರಲ್ಲದ ಸ್ವತಂತ್ರ ಕೆಲಸಗಾರರನ್ನು ಉದ್ಯಮಗಳು ತೊಡಗಿಸಿಕೊಳ್ಳುತ್ತವೆ. ಫ್ರೀಲ್ಯಾನ್ಸರ್ಗಳು, ಸ್ವತಂತ್ರ ಗುತ್ತಿಗೆದಾರರು, ಪ್ರಾಜೆಕ್ಟ್ ಆಧಾರಿತ ಕೆಲಸಗಾರರು, ತಾತ್ಕಾಲಿಕ ನೇಮಕ ಮತ್ತು ಅರೆಕಾಲಿಕ ಕೆಲಸಗಾರರು ಗಿಗ್ ಆರ್ಥಿಕತೆಯ ಒಂದು ಭಾಗವಾಗಿರುತ್ತಾರೆ.
ಈ ಉದ್ಯಮಕ್ಕೆ ಕಾಲಿಡುವ ಮೊದಲು, ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ಪ್ರಮುಖ ಅಂಶಗಳು ಇಲ್ಲಿವೆ:
ವೇತನದೊಂದಿಗೆ ಕೌಶಲ್ಯ ಹಾಗೂ ಪರಿಣತಿಯನ್ನು ಹೊಂದಿಸಿ : ನಿಮ್ಮ ಸೇವೆಯ ಬೇಡಿಕೆಯ ಬಗ್ಗೆ ಸಂಶೋಧನೆ ನಡೆಸಿ ಹಾಗೂ ನಂತರ ಅದನ್ನು ಸರಿಯಾದ ವೇತನದೊಂದಿಗೆ ಹೊಂದಿಸಲು ಪ್ರಯತ್ನಿಸಿ. ಎಷ್ಟು ಬಾರಿ ನಿಮಗೆ ಪಾವತಿಯಾಗುತ್ತದೆ ಮತ್ತು ನಿಖರವಾಗಿ ಪಾವತಿಯ ಚೆಕ್ಗಳು ಯಾವಾಗ ಬರುತ್ತವೆ ಎಂಬುದನ್ನು ಅರಿತುಕೊಳ್ಳಿ.
ಸಂಪರ್ಕಗಳನ್ನು ಹೆಚ್ಚಿಸಿಕೊಳ್ಳುವುದು: ಹೊಸ ಅವಕಾಶಗಳನ್ನು ಹುಡುಕಲು ಮತ್ತು ಸ್ಥಿರವಾದ ಕೆಲಸದ ಹರಿವನ್ನು ಪಡೆಯಲು ನಿಮಗೆ ಸುಭದ್ರವಾದ ಸಂಪರ್ಕ ಜಾಲದ ಅಗತ್ಯ ಖಂಡಿತಾ ಬೇಕು.
ಆರ್ಥಿಕ ಸ್ಥಿರತೆ : ಒಂದೊಮ್ಮೆ ನಿಮ್ಮ ಖಾತೆಯಲ್ಲಿ ನೀವು ಸಾಕಷ್ಟು ಉಳಿತಾಯವನ್ನು ಹೊಂದಿಲ್ಲದಿದ್ದರೆ, ಗಿಗ್ ಆರ್ಥಿಕತೆಯನ್ನು ಪ್ರವೇಶಿಸುವ ಮುನ್ನ ನೀವು ಎರಡೆರಡು ಬಾರಿ ಯೋಚಿಸಬೇಕಾಗುತ್ತದೆ.
ವರ್ಕ್-ಲೈಫ್ ಬ್ಯಾಲೆನ್ಸ್ : ನಿಮ್ಮ ಸೂಕ್ತ ಸಮಯದಲ್ಲಿ ಕೆಲಸವನ್ನು ಮುಟ್ಟಿಸುವ ಸ್ವಾತಂತ್ರ್ಯವನ್ನು ನೀವು ಹೊಂದಿರಬಹುದು, ನಿಮ್ಮ ಮಾಸಿಕ ಖರ್ಚು ವೆಚ್ಚಗಳನ್ನು ಸರಿದೂಗಿಸಲು ನೀವು ಅನೇಕ ಪ್ರಾಜೆಕ್ಟ್ಗಳನ್ನು ತೆಗೆದುಕೊಳ್ಳುವ ಸಂದರ್ಭವೂ ಇರಬಹುದು.